ವಿದ್ಯಾರ್ಥಿಗಳು ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಲಿ: ಕರಬಸಪ್ಪ ಜಾಡರ

| Published : Jul 21 2025, 12:00 AM IST

ವಿದ್ಯಾರ್ಥಿಗಳು ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಲಿ: ಕರಬಸಪ್ಪ ಜಾಡರ
Share this Article
  • FB
  • TW
  • Linkdin
  • Email

ಸಾರಾಂಶ

ಉದ್ಯಮ ಸ್ಥಾಪನೆಗೆ ಅನೇಕ ಯೋಜನೆಗಳಿದ್ದು, ಅದಕ್ಕಾಗಿ ಸಾಲ ಸೌಲಭ್ಯ ಒದಗಿಸಲಾಗುತ್ತದೆ. ವಿದ್ಯಾರ್ಥಿಗಳು ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು.

ರಾಣಿಬೆನ್ನೂರು: ವಿದ್ಯಾರ್ಥಿಗಳು ತಮ್ಮ ವಿಕಾಸದ ಹಿಂದೆ ಮನೆತನ ಗೌರವ, ಊರಿನ ಗೌರವ ಹಾಗೂ ಸಮಾಜದ ಗೌರವ ಕಾಪಾಡಿಕೊಳ್ಳಬೇಕು ಎಂದು ಫ್ರೆಶ್ ಗ್ರೀನ್ ಅಗ್ರೋಟೆಕ್ ಎಂಡಿ ಕರಬಸಪ್ಪ ಜಾಡರ ತಿಳಿಸಿದರು.ನಗರದ ಹಳೆ ಪಿ.ಬಿ. ರಸ್ತೆ ಸಾಲೇಶ್ವರ ಕಲ್ಯಾಣಮಂಟಪದಲ್ಲಿ ಭಾನುವಾರ ತಾಲೂಕು ಪಟ್ಟಸಾಲಿ(ನೇಕಾರ) ಸಮಾಜ ನೌಕರರ ಸಂಘದ ವತಿಯಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಪ್ರಮಾಣಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ಉನ್ನತ ವ್ಯಾಸಂಗ ಮಾಡಲು ಇಚ್ಛಿಸುವ ಪಟ್ಟಸಾಲಿ ಸಮಾಜದ ವಿದ್ಯಾರ್ಥಿಗಳಿಗೆ ನೌಕರರ ಸಂಘದ ವತಿಯಿಂದ ಸಹಾಯಧನ ನೀಡಲಾಗುವುದು. ಸರ್ಕಾರದಲ್ಲಿ ಉದ್ಯಮ ಸ್ಥಾಪನೆಗೆ ಅನೇಕ ಯೋಜನೆಗಳಿದ್ದು, ಅದಕ್ಕಾಗಿ ಸಾಲ ಸೌಲಭ್ಯ ಒದಗಿಸಲಾಗುತ್ತದೆ. ವಿದ್ಯಾರ್ಥಿಗಳು ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಕಾಕಿ ಜನಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸ ಕಾಕಿ ಮಾತನಾಡಿ, ಪ್ರತಿಭಾ ಪುರಸ್ಕಾರವು ಮತ್ತಷ್ಟು ವಿದ್ಯಾರ್ಥಿಗಳಿಗೆ ಸಾಧನೆ ಮಾಡಲು ಪ್ರೇರಣೆ ನೀಡುತ್ತದೆ. ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಸಾಧನೆ ಮಾಡಿ ಸಮಾಜದಲ್ಲಿ ಉನ್ನತ ಹುದ್ದೆ ಅಲಂಕರಿಸಬೇಕು ಎಂದರು.ತಾಲೂಕು ಪಟ್ಟಸಾಲಿ ಸಮಾಜ ನೌಕರರ ಸಂಘದ ಅಧ್ಯಕ್ಷ ಗೋಪಾಲ ಗುತ್ತಲ ಅಧ್ಯಕ್ಷತೆ ವಹಿಸಿದ್ದರು. ನೀರಾವರಿ ಇಲಾಖೆ ಎಂಜಿನಿಯರ್ ಶ್ರೀಧರ ಚಿನ್ನಿಕಟ್ಟಿ, ನಗರಸಭೆ ಸದಸ್ಯೆ ರೂಪಾ ಚಿನ್ನಿಕಟ್ಟಿ, ಪಟ್ಟಸಾಲಿ ಸಮಾಜ ಸುಧಾರಣಾ ಸಮಿತಿ ಅಧ್ಯಕ್ಷ ರಮೇಶ ಗುತ್ತಲ, ಜಿಲ್ಲಾ ನೇಕಾರ ಒಕ್ಕೂಟದ ಮಾಜಿ ಅಧ್ಯಕ್ಷ ಶಂಕ್ರಣ್ಣ ನ್ಯಾಮತಿ, ಎಲ್‌ಐಸಿ ನಿವೃತ್ತ ಅಧಿಕಾರಿ ಬಸವರಾಜ ಹಿಂಡಸಗೇರಿ, ಬಿಎಸ್ಸೆನ್ನೆಲ್ ನಿವೃತ್ತ ಅಧಿಕಾರಿ ಪಿ.ಕೆ. ಕದರಮಂಡಲಗಿ, ರೇಣುಕಾ ಸೇವಾ ಅಂಧರ ಸಂಸ್ಥೆಯ ಎಚ್.ಆರ್. ಶಿವಕುಮಾರ, ರೂಪಾ ಕಾಕಿ, ವೀಣಾ ವಿಭೂತಿ, ಕರಬಸಪ್ಪ ಕದರಮಂಡಲಗಿ, ಟಿ. ಹಳದಂಡಿ, ಲಕ್ಷ್ಮಣ ಕಾಕಿ ಮತ್ತಿತರರಿದ್ದರು.೨೯೪ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ

ಶಿಗ್ಗಾಂವಿ: ಹತ್ತಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಮನೆಗಳ ಹಕ್ಕುಪತ್ರಗಳ ವಿತರಿಸಲು ಸಕಾರಾತ್ಮಕವಾಗಿ ಸ್ಪಂದಿಸಲಾಗುವುದು ಎಂದು ಶಾಸಕ ಯಾಸೀರ ಅಹ್ಮದ ಖಾನ್ ಪಠಾಣ ತಿಳಿಸಿದರು.ಪಟ್ಟಣದ ಆಶ್ರಯ ಪ್ಲಾಟ್‌ನಲ್ಲಿರುವ 294 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿ, ಪಟ್ಟಣದ ಬಡವರು ತಮ್ಮ ಮನೆಗಳ ಹಕ್ಕುಪತ್ರ ಪಡೆಯಲು ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದರು. ಅವರ ಹೋರಾಟಕ್ಕೆ ಜಯ ಲಭಿಸಿದೆ ಎಂದರು.

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ, ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ, ಸದಸ್ಯರಾದ ಗೌಸಖಾನ ಮುನಶಿ, ಜಾಫರಖಾನ ಪಠಾಣ, ನಸ್ರೀನಬಾನು ತಿಮ್ಮಾಪೂರ, ಮೆಹಬೂಬಿ ನೀರಲಗಿ, ಮುಕ್ತಿಯಾರ ತಿಮ್ಮಾಪೂರ, ಮುನ್ನಾ ಲಕ್ಷ್ಮೇಶ್ವರ, ಗುಡ್ಡಪ್ಪ ಜಲದಿ, ಎಸ್.ಎಫ್. ಮಣಕಟ್ಟಿ, ಮಂಜುನಾಥ ಮಣ್ಣಣ್ಣವರ, ಅಬ್ದುಲ್ ಕರೀಂ ಮೊಗಲಲ್ಲಿ, ಚಂದ್ರು ಕೊಡ್ಲಿವಾಡ, ಮುನ್ನಾ ಮಾಲ್ದಾರ ಸೇರಿದಂತೆ ಪುರಸಭೆ ಸಿಬ್ಬಂದಿ ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.