ಸಾರಾಂಶ
ಕಾಡಂಗೇರಾ ಬಿ. ಗ್ರಾಮದ ಸರಕಾರಿ ಶಾಲೆಗೆ ಕಲಿಕೋಪಕರಣ ವಿತರಣೆ ಕಾರ್ಯಕ್ರಮ.
ಕನ್ನಡಪ್ರಭ ವಾರ್ತೆ ಯಾದಗಿರಿ
ಮೊಬೈಲ್ ಮತ್ತು ಸಾಮಾಜಿಕ ಜಾಲತಾಣವನ್ನು ಯುವಕರು ಮಕ್ಕಳು ಮಿತವಾಗಿ ಬಳಸಬೇಕೆಂದು ಭೀಮರಾಯನ ಗುಡಿ ವಲಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶರಣಗೌಡ ಪೊಲೀಸ್ ಪಾಟೀಲ್ ಹೇಳಿದರು.ತಾಲೂಕಿನ ಕಾಡಂಗೇರಾ ಬಿ. ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ವಿಭೂತಿಹಳ್ಳಿ ವತಿಯಿಂದ ನಡೆದ ಶಾಲೆ ಮಕ್ಕಳಿಗೆ ಕಲಿಕೋಪಕರಣ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯುವಕರು ದುಶ್ಚಟಗಳಿಂದ ದೂರವಿದ್ದು ಓದಿನ ಕಡೆ ಗಮನಹರಿಸಿ ಉತ್ತಮ ಸಾಧನೆ ಮಾಡಿ ಗ್ರಾಮ ಹಾಗೂ ದೇಶಕ್ಕೂ ಕೀರ್ತಿ ತರುವಂತೆ ಹೇಳಿದರು.ಕಾರ್ಮಿಕ ಸಂಘಟನೆ ಮುಖಂಡ ಮಾಳಪ್ಪ ಪೂಜಾರಿ, ಶಾಲಾ ಮುಖ್ಯಗುರು ಅಯುಬ್ ಜಮಾದಾರ್ ಮಾತನಾಡಿದರು. ಪ್ರೌಢ ಶಾಲಾ ಮುಖ್ಯಗುರು ಖಾಜಾ ಮೈನೋದ್ದಿನ್, ಶಿಕ್ಷಕರಾದ ಪ್ರಭು ಕಾಸ್ತಾರ ಸಗರನಾಡು ಸೇವಾ ಸಂಸ್ಥೆ ಅಧ್ಯಕ್ಷ ಭೀಮಣ್ಣಗೌಡ, ಮಾತೃಛಾಯಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ತಿಪ್ಪಣ್ಣ ಖ್ಯಾತನಾಳ, ಕಾರ್ಮಿಕ ಸಂಘದ ರಾಜ್ಯಾಧ್ಯಕ್ಷ ಹಯ್ಯಾಳಪ್ಪ ಅಚ್ಚಿಕೇರಿ, ರಾಸ್ಸರ ಕ್ಷತ್ರಿ ಸಿಂದಗಿ, ಅಂಗವಿಕಲರ ಸಂಘದ ರಾಜ್ಯಾಧ್ಯಕ್ಷ ಸುಭಾಷ್ ಹೋತಪೇಠ ಸೇರಿ ಇತರರಿದ್ದರು. ಶಿಕ್ಷಕ ದೇವರಾಜ ದೇಸಾಯಿ ನಿರೂಪಿಸಿ, ವಂದಿಸಿದರು.