80 ವಿದ್ಯಾರ್ಥಿಗಳ ಪೈಕಿ 27 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ,
ಕನ್ನಡಪ್ರಭ ವಾರ್ತೆ ಮೈಸೂರುತಾಲೂಕಿನ ಇಲವಾಲದಲ್ಲಿರುವ ಕಲಾಭಾರತಿ ಪಿಯು ಕಾಲೇಜಿಗೆ ಈ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಲಭಿಸಿದೆ.ಕಾಲೇಜಿನ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸಂಪೂರ್ಣ ಗ್ರಾಮೀಣ ಭಾಗದವರಾಗಿದ್ದು, ವಿದ್ಯಾರ್ಥಿಗಳು ಯಾವುದೇ ಟ್ಯೂಷನ್ ಕೂಡ ಪಡೆಯದೆ, ಕಾಲೇಜಿನಲ್ಲಿ ಉಪನ್ಯಾಸಕರು ಬೋಧಿಸಿರುವ ಪಾಠವನ್ನು ಮಾತ್ರ ಕೇಳಿ, ತರಗತಿ ಮುಗಿದ ನಂತರ ಉಪನ್ಯಾಸಕರ ಸಹಾಯ ಪಡೆದು ಹೆಚ್ಚಿನ ಅಭ್ಯಾಸ ಮಾಡಿದ್ದಾರೆ.80 ವಿದ್ಯಾರ್ಥಿಗಳ ಪೈಕಿ 27 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 45 ವಿದ್ಯಾರ್ಥಿ ಪ್ರಥಮ ಸ್ಥಾನದಲ್ಲಿ, 8 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.ಎಸ್ಸೆಸ್ಸೆಲ್ಸಿ ಮತ್ತು ಪ್ರಥಮ ಪಿಯುಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಾತಿ ನೀಡಿದ್ದು, ಅಂತಹ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ್ದಾರೆ. ಸಂಸ್ಥೆಯ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ದೃಷ್ಟಿಯಿಂದ ಉಚಿತವಾಗಿ ನೀಟ್ ಮತ್ತು ಕೆಸಿಇಟಿ ತರಬೇತಿ ನೀಡಲಾಗುತ್ತಿದೆ. ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳ ವಿವರ.ಸಿ. ಪೃಥ್ವಿ- 585, ಪ್ರಾರ್ಥನ- 574, ಬಿ.ಕೆ. ಅಮೂಲ್ಯ- 573, ಹೇಮಾಕ್ಷಿ- 564, ಕೆ. ಶ್ರಾವ್ಯ- 564, ಸ್ಪೂರ್ತಿ- 564, ಚಿಕ್ಕತಾಯಿ, ಕಾವ್ಯಶ್ರೀ- 562, ಎಸ್. ಮೀನಾಕ್ಷಿ- 561, ಚೈತ್ರ- 554, ಸಿ. ಸೌಮ್ಯ- 550, ಆರ್. ಕಾವ್ಯ-547, ಎಚ್.ಆರ್. ವಿನಯ್‌ಕುಮಾರ್- 546, ಜಿ. ರಾಘವೇಂದ್ರ- 545, ಎಸ್. ಅಮರ್- 543, ಪಲ್ಲವಿ- 540, ಜೆ. ದಿವ್ಯ- 534, ಬಿ.ಎನ್. ಹರ್ಷಿತ- 526, ಸಿ.ಎಂ. ಮಾಳವಿಕ- 521, ಸಿ.ಪಿ. ಕಾರ್ತಿಕ್-519, ಸಿ.ಎನ್. ಯೋಗೇಶ್ವರಿ- 518, ಯು. ಧನಲಕ್ಷ್ಮಿ, ಧನುಷ್, ಜಯಲಕ್ಷ್ಮೀ- 517, ಮನಿಷ- 516, ಗಣೇಶ- 514, ಎಚ್.ಎಂ. ನಂದಿನಿ-512.