ಸಾರಾಂಶ
ಇತ್ತೀಚಿನ ವರ್ಷಗಳಲ್ಲಿ ಮೊಬೈಲ್‌ನಲ್ಲಿ ವಿದ್ಯಾರ್ಥಿಗಳು ಹಾಗೂ ಯುವಜನತೆ ಮುಳುಗುತ್ತಿದ್ದಾರೆ.
ಅಂಕೋಲಾ: ಇತ್ತೀಚಿನ ವರ್ಷಗಳಲ್ಲಿ ಮೊಬೈಲ್‌ನಲ್ಲಿ ವಿದ್ಯಾರ್ಥಿಗಳು ಹಾಗೂ ಯುವಜನತೆ ಮುಳುಗುತ್ತಿದ್ದಾರೆ. ಆದರೆ ಅಲ್ಲಲ್ಲಿ ಸಾಧಕರು ಕೂಡ ಇರುತ್ತಾರೆ. ಅಂತವರಲ್ಲಿ ದೀಪಾ ಜಟ್ಟಿ ನಾಯ್ಕ ಕೂಡ ಒಬ್ಬರು. ಗೋಕರ್ಣ ದೇವಾಲಯಗಳು ಎನ್ನುವ ಪುಸ್ತಕವನ್ನು ಪ್ರಕಟಿಸಿ ಗೋಕರ್ಣದ ಬಗ್ಗೆ ಹೆಚ್ಚು ತಿಳಿದುಕೊಳ್ಳುವಂತಾಗಿದೆ ಎಂದು ನಿವೃತ್ತ ಪ್ರಾಚಾರ್ಯ, ಹಿರಿಯ ಸಾಹಿತಿ ಡಾ. ರಾಮಕೃಷ್ಣ ಗುಂದಿ ಹೇಳಿದರು.
ಪೂಜಗೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಭವನದಲ್ಲಿ ನಡೆದ ಹಳೆಯ ವಿದ್ಯಾರ್ಥಿನಿ ದೀಪಾ ಜಟ್ಟಿ ನಾಯ್ಕ ಅವರ ‘ಗೋಕರ್ಣ ದೇವಾಲಯಗಳು’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿ, ಈ ಲೇಖಕಿಯಿಂದ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಕೃತಿಗಳು ಪ್ರಕಟವಾಗುವಂತಾಗಲಿ ಎಂದು ಹಾರೈಸಿದರು.ನಿವೃತ್ತ ಪ್ರಾಚಾರ್ಯ ಡಾ. ಶಿವಾನಂದ ನಾಯಕ ಮಾತನಾಡಿ, ದೀಪಾ ನಾಯ್ಕ ಅವರ ಚೊಚ್ಚಲ ಕೃತಿಯಾಗಿದ್ದು, ಗೋಕರ್ಣದಂತಹ ಧಾರ್ಮಿಕ ತಾಣಗಳ ಬಗ್ಗೆ ಅಧ್ಯಯನ ನಡೆಸಿ ಪುಸ್ತಕ ಹೊರ ತಂದಿರುವುದು ಅಭಿನಂದನಾರ್ಹ ಎಂದರು.
ಪ್ರಾಚಾರ್ಯೆ ಪ್ರೊ. ವಿದ್ಯಾ ದೇವಿದಾಸ ನಾಯಕ ಮಾತನಾಡಿ ನನ್ನ ವಿದ್ಯಾರ್ಥಿನಿಯಾಗಿರುವ ದೀಪಾ ನಾಯ್ಕ ಅವರು ಸಾಹಸ ಪಟ್ಟು ಒಂದು ಕೃತಿಯನ್ನು ಸಾಹಿತಿ ಕ್ಷೇತ್ರಕ್ಕೆ ನೀಡಿದ್ದಾರೆ ಎಂದರು.ಲೇಖಕಿ ದೀಪಾ ನಾಯ್ಕ ಮಾತನಾಡಿ, ನಾನು ಗೋಕರ್ಣದ ಬಗ್ಗೆ ಅಧ್ಯಯನ ನಡೆಸಿದಾಗ ಬಗೆದಷ್ಟು ಆಳ ಎನ್ನುವುದು ತಿಳಿಯಿತು. ಇಲ್ಲಿ ಶಿವಲಿಂಗಗಳು ಲೆಕ್ಕಕ್ಕೆ ಸಿಗದಷ್ಟು ಕಂಡು ಬರುತ್ತದೆ. ನನ್ನಿಂದ ಎಷ್ಟು ಸಾಧ್ಯವೋ ಅಷ್ಟನ್ನು ನಾನು ಕೃತಿಯಲ್ಲಿ ಬರೆದಿದ್ದೇನೆ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಉಪನ್ಯಾಸಕಿ ಪ್ರೊ. ಜ್ಯೋತಿ ನಾಯಕ, ಪ್ರಮುಖರಾದ ಗಣಪತಿ ಬಂಟ, ನಾಗರಾಜ ಮಂಜಗುಣಿ, ಸತೀಶಕುಮಾರ ಮಹಾಲೆ, ಭಗವತಿ ಬಂಟ, ಪಲ್ಲವಿ ಶೆಟ್ಟಿ ಇತರರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))