ಕೌಶಲ್ಯಭರಿತ ವೃತ್ತಿ ಪರ ವಿಷಯ ಅಧ್ಯಯನ ನಿರುದ್ಯೋಗಕ್ಕೆ ಪರಿಹಾರ

| Published : Aug 25 2025, 01:00 AM IST

ಕೌಶಲ್ಯಭರಿತ ವೃತ್ತಿ ಪರ ವಿಷಯ ಅಧ್ಯಯನ ನಿರುದ್ಯೋಗಕ್ಕೆ ಪರಿಹಾರ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಕೌಶಲ್ಯಭರಿತ ವೃತ್ತಿ ಪರ ವಿಷಯಗಳನ್ನು ಅಧ್ಯಯನ ಮಾಡುವುದರಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಶೀಘ್ರ ಪರಿಹಾರ ವಾಗುತ್ತದೆ. ಆರ್ಥಿಕ ಸ್ವಾವಲಂಬನೆಗೆ ಇಂತಹ ಕೋರ್ಸ್‌ಗಳು ಮಾರ್ಗದರ್ಶನ ನೀಡುತ್ತವೆ ಎಂದು ಸಮಗ್ರ ಶಿಕ್ಷಣದ ಉಪ ಯೋಜನಾ ಸಮನ್ವಯಾಧಿಕಾರಿ ಪಿ.ಲೋಕೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕೌಶಲ್ಯಭರಿತ ವೃತ್ತಿ ಪರ ವಿಷಯಗಳನ್ನು ಅಧ್ಯಯನ ಮಾಡುವುದರಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಶೀಘ್ರ ಪರಿಹಾರ ವಾಗುತ್ತದೆ. ಆರ್ಥಿಕ ಸ್ವಾವಲಂಬನೆಗೆ ಇಂತಹ ಕೋರ್ಸ್‌ಗಳು ಮಾರ್ಗದರ್ಶನ ನೀಡುತ್ತವೆ ಎಂದು ಸಮಗ್ರ ಶಿಕ್ಷಣದ ಉಪ ಯೋಜನಾ ಸಮನ್ವಯಾಧಿಕಾರಿ ಪಿ.ಲೋಕೇಶ್ ಹೇಳಿದರು. ಕಳಸಾಪುರದ ಕರ್ನಾಟಕ ಪಬ್ಲಿಕ್ ಶಾಲೆ ಪ್ರೌಢಶಾಲಾ ವಿಭಾಗದಲ್ಲಿ ನಡೆದ ರಾಷ್ಟ್ರೀಯ ಶಿಕ್ಷಣ ಚೌಕಟ್ಟು ಪ್ರೇರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸರ್ಕಾರ ಈಗಂತೂ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಮಕ್ಕಳ ಉತ್ತೇಜನಕ್ಕೆ ಯಥೇಚ್ಛವಾಗಿ ಅನುದಾನ ನೀಡುತ್ತಿದೆ. ಇದು ಶೇ.100 ರಷ್ಟು ಮಕ್ಕಳಿಗಾಗಿಯೇ ವಿನಿಯೋಗವಾಗಬೇಕು ಎಂದರು.

ಡಯೆಟ್‌ ಉಪನ್ಯಾಸಕಿ ಸಲೇಹ ಅಂಜುಂ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಇಂತಹ ವಿಷಯಗಳ ಅಧ್ಯಯನದಿಂದ ಮಕ್ಕಳಿಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ನಾಗರಾಜರಾವ್‌ ಮಾತನಾಡಿ, ನಿಮ್ಮ ಪ್ರತಿ ಹೆಜ್ಜೆಯಲ್ಲೂ ತಂದೆ ತಾಯಿಯರ ಕನಸಿರ ಬೇಕು. ಅವರ ಬೆವರಿನ ಫಲವೇ ನಮ್ಮ ಜೀವನ. ಓದುತ್ತಿರುವಾಗಲೇ ದುಡಿಮೆ ಮಾಡುತ್ತಾ, ನಿಮ್ಮ ಶಿಕ್ಷಣದ ವೆಚ್ಚ ನೀವೇ ಭರಿಸಲು ಅನುಕೂಲವಾಗುವಂತಹ ಎನ್.ಎಸ್.ಕ್ಯು.ಎಫ್ (ರಾಷ್ಟ್ರೀಯ ಕೌಶಲ್ಯ ಶಿಕ್ಷಣ ಚೌಕಟ್ಟು) ನಂತಹ ಕೋರ್ಸ್‌ಗಳು ಹೊಸ ಭರವಸೆಯಾಗಿವೆ ಎಂದರು. ಡಯಟ್‌ನ ನೋಡಲ್‌ ಅಧಿಕಾರಿ ಸಂಧ್ಯಾ ಮಾತನಾಡಿ, ಮಕ್ಕಳು ತಮ್ಮಕೌಶಲ್ಯ ಅರಿತು ಅದಕ್ಕೆ ಪೂರಕ ಶಿಕ್ಷಣ ಪಡೆಯಬೇಕು ಎಂದು ತಿಳಿಸಿದರು. ಇದೇ ವೇಳೆ ವಿಜ್ಞಾನ, ಸಮಾಜ, ಎನ್‌ಎಸ್‌ಕ್ಯೂಎಫ್ ಪ್ರಯೋಗಾಲಯ ಹಾಗೂ ನೂತನ ಗ್ರಂಥಾಲಯವನ್ನು ಗಣ್ಯರು ಉದ್ಘಾಟಿಸಿದರು.ಶಿಕ್ಷಣ ಇಲಾಖೆ ಸಹಾಯಕ ಯೋಜನಾ ಸಮನ್ವಯಾಧಿಕಾರಿ ಸುಬ್ರಹ್ಮಣ್ಯ ಹಾಗೂ ಮೂರ್ತಿ, ಎಸ್.ಡಿಎಂಸಿಯ ಅಧ್ಯಕ್ಷ ಚೇತನ್, ಸದಸ್ಯರು, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ತಿಮ್ಮಪ್ಪ, ಪ್ರೌಢಶಾಲಾ ವಿಭಾಗದ ಎಫ್.ಡಿಎ ಪ್ರವೀಣ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸುಮಾ, ಶಿಕ್ಷಕರಾದ ತೇಜೋಮೂರ್ತಿ, ಚಂದ್ರಶೇಖರ್ ಉಪಸ್ಥಿತರಿದ್ದರು.

23 ಕೆಸಿಕೆಎಂ 3ಕಳಸಾಪುರದ ಕರ್ನಾಟಕ ಪಬ್ಲಿಕ್ ಶಾಲೆ ಪ್ರೌಢಶಾಲಾ ವಿಭಾಗದಲ್ಲಿ ನಡೆದ ರಾಷ್ಟ್ರೀಯ ಶಿಕ್ಷಣ ಚೌಕಟ್ಟು ಪ್ರೇರಣಾ ಕಾರ್ಯಕ್ರಮವನ್ನು ಸಮಗ್ರ ಶಿಕ್ಷಣದ ಉಪ ಯೋಜನಾ ಸಮನ್ವಯಾಧಿಕಾರಿ ಪಿ.ಲೋಕೇಶ್ ಉದ್ಘಾಟಿಸಿದರು.