ಸಾರಾಂಶ
- ತರೀಕೆರೆಯಲ್ಲಿ ಭಾರತೀಯ ಕಿಸಾನ್ ಸಂಘದಿಂದ ತಾಲೂಕಿನ ರೈತರ ಮತ್ತು ಸಾರ್ವಜನಿಕರ ಕನ್ನಡಪ್ರಭ ವಾರ್ತೆ, ತರೀಕೆರೆ
ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ತರೀಕೆರೆ ತಾಲೂಕು ಘಟಕದಿಂದ ಸೋಮವಾರ ರೈತರ ಮತ್ತು ಸಾರ್ವಜನಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ತಹಸೀಲ್ದಾರ್ ಗೆ ಮನವಿ ಪತ್ರ ಸಲ್ಲಿಸಲಾಯಿತು.ತಾಲೂಕು ಕಚೇರಿಯಲ್ಲಿ ರೈತರು ಮತ್ತು ಸಾರ್ವಜನಿಕರು ವಿವಿಧ ದಾಖಲಾತಿಗಳಿ ಮತ್ತು ದಾಖಲೆಗಳ ತಿದ್ದುಪಡಿಗೆ ಅರ್ಜಿ ಸಲ್ಲಿಸಿದಾಗ ಅಧಿಕಾರಿಗಳು ರೈತರು ಮತ್ತು ಸಾರ್ವಜನಿಕರನ್ನು ತಾಲೂಕು ಕಚೇರಿಗೆ ಸುಮ್ಮನೆ ಅಲೆದಾಡಿಸದೆ, ರೈತರು ಮತ್ತು ಸಾರ್ವಜನಿಕರಿಗೆ ನಿಗದಿತ ಸಮಯಕ್ಕೆ ದಾಖಲೆಗಳು ಮತ್ತು ತಿದ್ದುಪಡಿಗಳು ಸಿಗುವಂತೆ ಆಗಬೇಕು ಎಂದು ಭಾರತೀಯ ಕಿಸಾನ್ ಸಂಘದ ಕರ್ನಾಟಕ ಪ್ರಾಂತ ರಾಜ್ಯ ಪ್ರಧಾನ ಕಾರ್ಯದರ್ಶಿ ಪರಮೇಶ್ವರಪ್ಪ ಅವರು ಬೇಡಿಕೆಗಳನ್ನು ಮಂಡಿಸಿದರು.
ಗ್ರಾಮ ಲೆಕ್ಕಾಧಿಕಾರಿಗಳು ಆಯಾ ವೃತ್ತ ಕೇಂದ್ರಗಳಲ್ಲಿ ವಾಸ್ತವ್ಯ ಇರಬೇಕೆಂಬ ಸರ್ಕಾರಿ ನಿಯಮವಿದ್ದರೂ ಗ್ರಾಮ ಲೆಕ್ಕಾಧಿಕಾರಿ ವೃತ್ತ ಮತ್ತು ಕೇಂದ್ರದಲ್ಲಿ ವಾಸ್ತವ್ಯ ಇರುವುದಿಲ್ಲ. ವೃತ್ತ ಕೇಂದ್ರದ ಸುತ್ತಲೂ ಇರುವ ಗ್ರಾಮದ ರೈತರು ಮತ್ತು ಸಾರ್ವಜನಿಕರಿಗೆ ಗ್ರಾಮ ಲೆಕ್ಕಾಧಿಕಾರಿಗಳನ್ನು ಕಾಯುವುದೇ ದೊಡ್ಡ ಸಮಸ್ಯೆ. ಆದುದರಿಂದ ಅಂತಹ ಗ್ರಾಮ ಲೆಕ್ಕಾಧಿಕಾರಿಗಳಿಗೆ ವೃತ್ತ ಕೇಂದ್ರದಲ್ಲಿ ವಾಸ್ತವ್ಯ ಇರುವಂತೆ ಆದೇಶಿಸಬೇಕು.ತಾಲೂಕು ಕಚೇರಿ ರೆಕಾರ್ಡ್ ರೂಮಿನಲ್ಲಿ ಇರುವ ಕಡತಗಳು ಕಾಣೆಯಾದ ಬಗ್ಗೆ ದೂರುಗಳು ಬಂದಿದ್ದು, ಸಾರ್ವಜನಿಕರು ದಾಖಲೆಗಳಿಗಾಗಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅಧಿಕಾರಿಗಳು ದಾಖಲೆಗಳು ನಶಿಸಿ ಹೋಗಿದೆ ಎಂದು ಹಿಂಬರಹ ನೀಡುತ್ತಾರೆ ಇದಕ್ಕೆ ಇಲಾಖೆಯ ಅಧಿಕಾರಿಗಳು ಜವಾಬ್ದಾರರು ಅಲ್ಲವೇ ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕಾಗಿ ಮನವಿ.
ತಾಲೂಕಿನ ಯಾವುದೇ ಗ್ರಾಮ ಪಂಚಾಯಿತಿಯ ಗ್ರಾಮದ ಸುತ್ತಲಿರುವ ಸರಕಾರಿ ಜಾಗ ಗೋಮಾಳ. ಹುಲ್ಲು ಬನಿ, ತೋಪು ಇಂತಹ ಜಾಗ ವನ್ನು ಅಥವಾ ಆಯಾ ಗ್ರಾಮಕ್ಕೆ ಬೇಕಾದ ಸರ್ಕಾರದ ವಿವಿಧ ಇಲಾಖೆಗಳ ಕಟ್ಟಡಕ್ಕೆ ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಬಾರದೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶಿಸ ಬೇಕಾಗಿ ಲಿಂಗದಹಳ್ಳಿ ಹೋಬಳಿ ನಂದಿ ಗ್ರಾಮದ ಸರ್ವೆ ನಂಬರು 139 140 141 ಇದಕ್ಕೆ ಸಂಬಂಧಪಟ್ಟಂತೆ ರೆವೆನ್ಯೂ ಜಾಗವನ್ನು ನಂದಿ ಗ್ರಾಮದ ಉಪಯೋಗಕ್ಕಾಗಿ ಮೀಸಲಿಡಬೇಕಾಗಿ ಮಾಡಿದ ಮನವಿಯನ್ನುತಹಸೀಲ್ದಾರ್ ಅವರಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ ಆಚಾರ್ ಸುಣ್ಣದಹಳ್ಳಿ. ಜಿಲ್ಲಾ ಉಪಾಧ್ಯಕ್ಷ ಎನ್. ಎಂ. ರುದ್ರಯ್ಯ ತರೀಕೆರೆ ಎಲ್. ಪ್ರಕಾಶ್, ಲಿಂಗದಹಳ್ಳಿ ಗ್ರಾಮ ಸಮಿತಿ ಅಧ್ಯಕ್ಷ ವೀರೇಶ್ ಲಿಂಗದಹಳ್ಳಿ. ಎಚ್ ಆರ್ ಪ್ರಭು ಕುಮಾರ್ ಹಳಿಯೂರು ಮತ್ತಿತರರು ಭಾಗವಹಿಸಿದ್ದರು.ಫೋಟೋ ಇದೆ 17 ಕೆಟಿಆರ್ ಕೆ 1.
ಭಾರತೀಯ ಕಿಶಾನ್ ಸಂಘ ತರಿಕೆರೆ ತಾಲೂಕು ಘಟಕದಿಂದ ರೈತರು ಮತ್ತು ಸಾರ್ವಜನಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರ ಸಲ್ಲಿಸಲಾಯಿತು