ಕೋಟೆ, ಕಂದಕ, ಜಮೀನು ವಕ್ಫ್ ಆಸ್ತಿ ನಮೂದು ತೆರವಿಗೆ ಆಗ್ರಹಿಸಿ ಮನವಿ ಸಲ್ಲಿಕೆ

| Published : Nov 21 2024, 01:02 AM IST

ಕೋಟೆ, ಕಂದಕ, ಜಮೀನು ವಕ್ಫ್ ಆಸ್ತಿ ನಮೂದು ತೆರವಿಗೆ ಆಗ್ರಹಿಸಿ ಮನವಿ ಸಲ್ಲಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಟೌನ್ ವ್ಯಾಪ್ತಿಯ ಸರ್ವೆ ನಂ.950 ರಲ್ಲಿ 5 ಎಕರೆ 7 ಗುಂಟೆ ಹಾಗೂ ಸರ್ವೇ ನಂ.952 ರಲ್ಲಿ 3ಎಕರೆ 22 ಗುಂಟೆ ಜಮೀನು ವಿಜಯನಗರದ ಅರಸರ ಕಾಲದಿಂದಲೂ ಕೋಟೆ, ಕಂದಕ ಹಾಗೂ ಪ್ರಸ್ತುತ ಸಾರ್ವಜನಿಕರ ಸಂತೆ ನಡೆಯುತ್ತಿರುವ ಜಮೀನಾಗಿದೆ. ಈ ಜಮೀನು ಕಳೆದ 2023-24ನೇ ಸಾಲಿನಿಂದ ಆರ್‌ಟಿಸಿ ಕಾಲಂ 9ರಲ್ಲಿ ಛೇ.. ಟಿಪ್ಪುಸುಲ್ತಾನ್ ವಕ್ಪ್ ವಕ್ಫ್ ಆಸ್ತಿ-ಎಸ್ಟೇಟ್ ಆಗಿ ಬದಲಾಗಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪಟ್ಟಣದ ಟೌನ್ ವ್ಯಾಪ್ತಿಯ ವಿಜಯನಗರದ ಅರಸರ ಕಾಲದ ಕೋಟೆ, ಕಂದಕ ಜಮೀನು ಇತ್ತೀಚೆಗೆ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಇದನ್ನು ತೆಗೆದು ಹಾಕುವಂತೆ ನಾಗರೀಕ ಹಿತಾಸಕ್ತಿ ವೇದಿಕೆ ಕಾರ್ಯಕರ್ತರು ಒತ್ತಾಯಿಸಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.

ಪಟ್ಟಣ ತಾಲೂಕು ಕಚೇರಿಗೆ ಭೇಟಿ ಮಾಡಿದ ಸದಸ್ಯರು, ಟೌನ್ ವ್ಯಾಪ್ತಿಯ ಸರ್ವೆ ನಂ.950 ರಲ್ಲಿ 5 ಎಕರೆ 7 ಗುಂಟೆ ಹಾಗೂ ಸರ್ವೇ ನಂ.952 ರಲ್ಲಿ 3ಎಕರೆ 22 ಗುಂಟೆ ಜಮೀನು ವಿಜಯನಗರದ ಅರಸರ ಕಾಲದಿಂದಲೂ ಕೋಟೆ, ಕಂದಕ ಹಾಗೂ ಪ್ರಸ್ತುತ ಸಾರ್ವಜನಿಕರ ಸಂತೆ ನಡೆಯುತ್ತಿರುವ ಜಮೀನಾಗಿದೆ. ಈ ಜಮೀನು ಕಳೆದ 2023-24ನೇ ಸಾಲಿನಿಂದ ಆರ್‌ಟಿಸಿ ಕಾಲಂ 9ರಲ್ಲಿ ಛೇ.. ಟಿಪ್ಪುಸುಲ್ತಾನ್ ವಕ್ಪ್ ವಕ್ಫ್ ಆಸ್ತಿ-ಎಸ್ಟೇಟ್ ಆಗಿ ಬದಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ವೇ ನಂ.950ರ ಜಮೀನು ವಿಜಯನಗರದ ಅರಸರ ಕಾಲದಲ್ಲಿ ಗ್ರಾಮ ರಕ್ಷಣೆಗಾಗಿ ಕೋಟೆ, ಕಂದಕವಾಗಿ ಮಾಡಿಕೊಂಡಿದ್ದು, ಜೊತೆಗೆ ಪ್ರಸ್ತುತ ಸರ್ವೆ ನಂ.952ರ ಜಾಗದಲ್ಲಿ ಸಾರ್ವಜನಿಕರ ಸಂತೆ ನಡೆಯುತ್ತಿದೆ. ಇಂತಹ ಐತಿಹಾಸವುಳ್ಳ ಜಮೀನು ಏಕಾಏಕಿ ವಕ್ಫ್ ಹೆಸರಿನಲ್ಲಿ ಆರ್‌ಟಿಸಿಯಲ್ಲಿ ನಮೂದಾಗಿದೆ ಎಂದು ಕಿಡಿಕಾರಿದರು.

ಕೂಡಲೇ ಆರ್‌ಟಿಸಿಯಲ್ಲಿರುವ ಛೇ.. ಟಿಪ್ಪುಸುಲ್ತಾನ್ ವಕ್ಪ್ ’ವಕ್ಫ್ ಆಸ್ತಿ "-ಎಸ್ಟೇಟ್ ಎಂಬುದನ್ನು ತೆಗೆದುಹಾಕಿ ಸ್ಥಳೀಯ ಪುರಸಭೆ ಅಥವಾ ಭಾರತೀಯ ಪುರಾತತ್ವ ಇಲಾಖೆ ಸುಪರ್ದಿಗೆ ವಹಿಸಿಕೊಡುವಂತೆ ಆಗ್ರಹಿಸಿದರು.

ಒಂದು ವೇಳೆ ಪಹಣಿಯಲ್ಲಿರುವ ವಕ್ಫ್ ಹೆಸರನ್ನು ತೆಗೆದು ಹಾಕಲು ವಿಳಂಬವಾದಲ್ಲಿ ತಾಲೂಕು ಹಾಗೂ ಜಿಲ್ಲಾಡಳಿತದ ವಿರದ್ಧ ಜಿಲ್ಲೆಯಾದ್ಯಂತ ಕಾನೂನು ಅಥವಾ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ಮನವಿ ಸಲ್ಲಿಸಿದರು.

ಈ ವೇಳೆ ವೇದಿಕೆ ಅಧ್ಯಕ್ಷ ಮದನ್ ರಾವ್, ಕಾರ್ಯದರ್ಶಿ, ಅಭಿಷೇಕ್, ಸದಸ್ಯರಾದ ಗಂಜಾಂ ಪ್ರಸನ್ನ, ಹೇಮಂತ್, ಪ್ರತಾಪ್, ವಿಶ್ವನಾಥ್, ಚಂಧ್ರು, ಕರವೇ ಅಧ್ಯಕ್ಷ ಚಂದಗಾಲು ಶಂಕರ್ ಸೇರಿದಂತೆ ಇತರರು ಇದ್ದರು.