ಆಶ್ರಯ ನಿವೇಶನ ಹಂಚಲು ಕ್ರಿಯಾ ಯೋಜನೆ ಸಲ್ಲಿಸಿ

| Published : Sep 01 2024, 02:00 AM IST

ಆಶ್ರಯ ನಿವೇಶನ ಹಂಚಲು ಕ್ರಿಯಾ ಯೋಜನೆ ಸಲ್ಲಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಹೊನ್ನಾಳಿ ತಾಲೂಕಿನ ಸುಂಕದಕಟ್ಟೆ ಸಮೀಪದ ಮಲ್ಲದೇವರಕಟ್ಟೆ ಬೇಚಾರಕ್ ಗ್ರಾಮದ ಸರ್ವೆ ನಂ.4ರಲ್ಲಿ 29.17 ಎಕರೆಯಲ್ಲಿ ಆಶ್ರಯ ಯೋಜನೆಯಡಿ ಬಡವರಿಗೆ ನಿವೇಶನ ಹಂಚಿಕೆ ಮಾಡಲು ಸ್ಥಳ ಗುರುತಿಸಲಾಗಿದೆ. ಮರ-ಗಿಡಗಳನ್ನು ಕಡಿದು, ಸಮತಟ್ಟು ಮಾಡಬೇಕು. ಸೈಟ್‌ಗಳಿಗೆ ಕಲ್ಲು ನೆಡಿಸಲು ಬುಧವಾರದೊಳಗೆ ಕ್ರಿಯಾ ಯೋಜನೆ ತಯಾರಿಸಿ, ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬೆಕು ಎಂದು ಪುರಸಭೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಸೂಚಿಸಿದರು.

- ಹೊನ್ನಾಳಿ ತಾಲೂಕು ಮಲ್ಲದೇವರಕಟ್ಟೆ ಬೇಚಾರಕ್ ಗ್ರಾಮದಲ್ಲಿ ಗುರುತಿಸಲಾದ ಸ್ಥಳ ಅಭಿವೃದ್ಧಿಪಡಿಸಲು ಡಿಸಿ ತಾಕೀತು - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ತಾಲೂಕಿನ ಸುಂಕದಕಟ್ಟೆ ಸಮೀಪದ ಮಲ್ಲದೇವರಕಟ್ಟೆ ಬೇಚಾರಕ್ ಗ್ರಾಮದ ಸರ್ವೆ ನಂ.4ರಲ್ಲಿ 29.17 ಎಕರೆಯಲ್ಲಿ ಆಶ್ರಯ ಯೋಜನೆಯಡಿ ಬಡವರಿಗೆ ನಿವೇಶನ ಹಂಚಿಕೆ ಮಾಡಲು ಸ್ಥಳ ಗುರುತಿಸಲಾಗಿದೆ. ಮರ-ಗಿಡಗಳನ್ನು ಕಡಿದು, ಸಮತಟ್ಟು ಮಾಡಬೇಕು. ಸೈಟ್‌ಗಳಿಗೆ ಕಲ್ಲು ನೆಡಿಸಲು ಬುಧವಾರದೊಳಗೆ ಕ್ರಿಯಾ ಯೋಜನೆ ತಯಾರಿಸಿ, ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬೆಕು ಎಂದು ಪುರಸಭೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಸೂಚಿಸಿದರು.

ಶನಿವಾರ ಅವಳಿ ತಾಲೂಕಿನ ಹಾಸ್ಟೆಲ್, ಹೊನ್ನಾಳಿಯ ಆಸ್ಪತ್ರೆ ಹಾಗೂ ನ್ಯಾಮತಿ ತಾಲೂಕಿನ ಬಸವನಹಳ್ಳಿ ಸಮೀಪ ಇತ್ತೀಚೆಗೆ ಒಡೆದ ತುಂಗಾ ಮೇಲ್ದಂಡೆ ಕಾಲುವೆ ದುರಸ್ತಿ ಕಾಗಾರಿಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.

ಈಗಾಗಲೇ ಆಶ್ರಯ ಮನೆಗಳ ನಿವೇಶನ ಗುರುತಿಸಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸರ್ಕಾರ ₹20 ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಪುರಸಭೆ ಅಧಿಕಾರಿಗಳಿಂದ ಮಾಹಿತಿ ಪಡೆದು, ನಿವೇಶನಗಳಿಗೆ ನಿವೇಶನ ರಹಿತರಿಂದ 1722 ಅರ್ಜಿಗಳು ಬಂದಿವೆ. ಆದರೆ ಇರುವ ಈ ಜಾಗದಲ್ಲಿ 1045 ನಿವೇಶನಗಳು ಆಗಲಿವೆ ಎಂದು ತಿಳಿಸಿದರು.

ಶನಿವಾರ ಮುಂಜಾನೆಯೇ ಹೊನ್ನಾಳಿಯ ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಿಸಿಎಂ ಇಲಾಖೆಯ ಮೆಟ್ರಿಕ್ ನಂತರದ ಹಾಸ್ಟೆಲ್‌ಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಿದರು. ಅಲ್ಲಿನ ಅಡುಗೆ ಮನೆ, ಶೌಚಾಲಯ, ವಿದ್ಯಾರ್ಥಿಗಳು ತಂಗುವ ಕೊಠಡಿಗಳನ್ನು ಪರಿಶೀಲನೆ ನಡೆಸಿ, ಅಲ್ಲಿನ ವ್ಯವಸ್ಥೆಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು.

ನಂತರ ಇತ್ತೀಚಿಗೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಮಳೆನೀರು ನುಗ್ಗಿ ಅವಾಂತರ ಸೃಷ್ಟಿಸಿದ ಹಿನ್ನೆಲೆ ಆಸ್ಪತ್ರೆಗೂ ಭೇಟಿ ನೀಡಿ, ಅಲ್ಲಿನ ಆಪರೇಷನ್ ಥಿಯೇಟರ್, ಐಸಿಯು, ಆಕ್ಸಿಜನ್ ಪ್ಲಾಂಟ್ ಹಾಗೂ ನಿರ್ಮಾಣ ಹಂತದಲ್ಲಿರುವ 250 ಆಸ್ಪತ್ರೆ ಕಟ್ಟಡ ಕಾಮಗಾರಿಗಳನ್ನೂ ವೀಕ್ಷಿಸಿದರು. ಈ ವೇಳೆ ಸ್ಥಾನಿಕ ಆಡಳಿತ ವೈಧ್ಯಾಧಿಕಾರಿ ಡಾ.ಚಂದ್ರಪ್ಪ, ಡಾ.ರಾಜ್‍ಕುಮಾರ್ ಹಾಗೂ ಡಾ.ಹನುಮಂತಪ್ಪ ಇದ್ದು, ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ನೀಡಿದರು.

ನ್ಯಾಮತಿ ತಾಲೂಕಿನ ಬಸವನಹಳ್ಳಿ ಸಮೀಪ ಕೆಲ ದಿನಗಳ ಹಿಂದೆ ತುಂಗಾ ಮೇಲ್ದಂಡೆ ಕಾಲುವೆ ಒಡೆದು ನೀರು ಹರಿದು ಸಾಕಷ್ಟು ಬೆಳೆಗಳಿಗೆ ಹಾನಿಯಾಗಿದೆ. ಇಲ್ಲಿಯೂ ದುರಸ್ತಿ ಕಾಮಗಾರಿಗಳನ್ನು ವೀಕ್ಷಿಸಿದ್ದೇನೆ. ಮುಂದಿನ ಹತ್ತು ದಿನಗಳ ಒಳಗಾಗಿ ಕಾಲುವೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ಸೂಚಿಸಿದ್ದೇನೆ. ಇದರಿಂದ ಹಾನಿಯಾದ ಬೆಳೆಗಳ ಬಗ್ಗೆ ಕೃಷಿ, ಕಂದಾಯ ಮತ್ತು ತೋಟಗಾರಿಕೆ ಅಧಿಕಾರಿಗಳೊಂದಿಗೆ ತಹಸೀಲ್ದಾರ್ ಸ್ಥಳ ಪರಿಶೀಲನೆ ನಡೆಸಿ, ಬೆಳೆ ನಷ್ಟದ ಅಂದಾಜು ವರದಿ ಸಲ್ಲಿಸುವಂತೆ ನ್ಯಾಮತಿ ತಹಸೀಲ್ದಾರ್ ಗೋವಿಂದಪ್ಪ ಅವರಿಗೆ ಸೂಚಿಸಿರುವುದಾಗಿ ತಿಳಿಸಿದರು.

ಈ ಸಂದರ್ಭ ಹೊನ್ನಾಳಿ ಉಪವಿಭಾಗಾಧಿಕಾರಿ ವಿ.ಅಭಿಷೇಕ್, ಹೊನ್ನಾಳಿ ತಹಸೀಲ್ದಾರ್ ಪಟ್ಟರಾಜಗೌಡ, ನ್ಯಾಮತಿ ತಹಸೀಲ್ದಾರ್ ಗೋವಿಂದಪ್ಪ, ತುಂಗಾ ಮೇಲ್ದಂಡೆ ಎಂಜಿನಿಯರ್ ಕೃಷ್ಣಮೂರ್ತಿ, ಎಇಇ ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಉಮಾ, ಬಿಸಿಎಂ ಇಲಾಖೆ ಅಧಿಕಾರಿ ಮೃತ್ಯುಂಜಯ ಸ್ವಾಮಿ, ಪುರಸಭಾ ಮುಖ್ಯಾಧಿಕಾರಿ ಲೀಲಾವತಿ, ಎಂಜಿನಿಯರ್ ದೇವರಾಜ್, ಆರ್‌ಐಗಳಾದ ರಮೇಶ್, ದಿನೇಶ್, ಮೌನೇಶ್ ಇತರರು ಇದ್ದರು.

- - - -31ಎಚ್.ಎಲ್.ಐ1:

ಸುಂಕದಕಟ್ಟೆ ಸಮೀಪ ಇರುವ ಮಲ್ಲದೇವರಕಟ್ಟೆ ಬೇಚಾರಕ್ ಗ್ರಾಮದ ಸರ್ವೆನಂ4 ರಲ್ಲಿ 29.17 ಎಕರೆಯಲ್ಲಿ ಆಶ್ರಯ ಯೋಜನೆಯಡಿ ಬಡವರಿಗೆ ನಿವೇಶನ ಹಂಚಿಕೆ ಮಾಡಲು ಗುರುತಿಸಲಾಗಿದ್ದ ಸ್ಥಳವನ್ನು ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಪರಿಶೀಲಿಸಿ, ಎಸಿ ಅವರಿಂದ ಮಾಹಿತಿ ಪಡೆದರು. --31ಎಚ್.ಎಚ್.ಐ1ಎ:

ನ್ಯಾಮತಿ ತಾಲೂಕಿನಲ್ಲಿ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ತುಂಗಾ ಮೇಲ್ದಂಡೆ ಕಾಲುವೆ ದುರಸ್ತಿ ಕಾಮಗಾರಿಯನ್ನು ವೀಕ್ಷಿಸಿದರು. -31ಎಚ್.ಎಲ್.ಐ1ಬಿ:

ಹೊನ್ನಾಳಿಯ ಮೆಟ್ರಿಕ್ ನಂತರದ ಹಾಸ್ಟೆಲ್‌ಗಳ ಭೇಟಿ ವೇಳೆ ವಿದ್ಯಾರ್ಥಿಗಳೊಂದಿಗೆ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಸಮಾಲೋಚನೆ ನಡೆಸಿದರು.