ಅಸ್ಥಿ ವಿಸರ್ಜನೆ ವೈಜ್ಞಾನಿಕವಾಗಿ ನಡೆಸಲು ವರದಿ ಸಲ್ಲಿಸಿ: ಡಾ ಕುಮಾರ

| Published : Jan 31 2025, 12:46 AM IST

ಅಸ್ಥಿ ವಿಸರ್ಜನೆ ವೈಜ್ಞಾನಿಕವಾಗಿ ನಡೆಸಲು ವರದಿ ಸಲ್ಲಿಸಿ: ಡಾ ಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀರಂಗಪಟ್ಟಣದ ಕಾವೇರಿ ನದಿ ಪಾತ್ರದಲ್ಲಿ ಸಾರ್ವಜನಿಕರು ಅವೈಜ್ಞಾನಿಕವಾಗಿ ಅಸ್ಥಿ ವಿಸರ್ಜನೆ ಮಾಡುತ್ತಿರುವುದರಿಂದ ನದಿ ಕಲುಷಿತವಾಗುತ್ತಿದ್ದು, ವೈಜ್ಞಾನಿಕವಾಗಿ ಯೋಜನೆ ರೂಪಿಸಿ ವರದಿ ನೀಡುವಂತೆ ನ್ಯಾಯಾಲಯದ ನಿರ್ದೇಶನವಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಶ್ರೀರಂಗಪಟ್ಟಣದ ಕಾವೇರಿ ನದಿ ಪಾತ್ರದಲ್ಲಿ ಸಾರ್ವಜನಿಕರು ಅವೈಜ್ಞಾನಿಕವಾಗಿ ಅಸ್ಥಿ ವಿಸರ್ಜನೆ ಮಾಡುತ್ತಿರುವುದರಿಂದ ನದಿ ಕಲುಷಿತವಾಗುತ್ತಿದ್ದು, ವೈಜ್ಞಾನಿಕವಾಗಿ ಯೋಜನೆ ರೂಪಿಸಿ ವರದಿ ನೀಡುವಂತೆ ನ್ಯಾಯಾಲಯದ ನಿರ್ದೇಶನವಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ, ವೈಜ್ಞಾನಿಕವಾಗಿ ವಿಸರ್ಜನೆ ಮಾಡುವ ಕುರಿತು ಅಧಿಕಾರಿಗಳ ಸಮಿತಿ ರಚಿಸಿದ್ದು, ನೈಸರ್ಗಿಕವಾಗಿ ವಿಘಟವಾಗುವ ರೀತಿ ಅಸ್ಥಿ ವಿಸರ್ಜನೆಗೆ ಬೇಕಿರುವ ಯಂತ್ರಗಳ ಕುರಿತಂತೆ ತಾಂತ್ರಿಕ ತಜ್ಞರಿಂದ ವರದಿ ಪಡೆದು ಡಿಪಿಆರ್ ಸಿದ್ಧಪಡಿಸುವಂತೆ ತಿಳಿಸಿದರು.

ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾಯಣ್ಣ, ಶ್ರೀರಂಗಪಟ್ಟಣ ನಗರಸಭೆ ಆಯುಕ್ತ ರಾಜಣ್ಣ ಇತರರು ಉಪಸ್ಥಿತರಿದ್ದರು.

ಫೆ.೨ರಂದು ಭರತನಾಟ್ಯ ನೃತ್ಯ ಪ್ರದರ್ಶನ

ಕನ್ನಡಪ್ರಭ ವಾರ್ತೆ ಮಂಡ್ಯ

ನೃತ್ಯ ಚೇತನ ಕಲಾ ಟ್ರಸ್ಟ್ ವತಿಯಿಂದ ಫೆ.೨ರಂದು ಸಂಜೆ ೫ ಗಂಟೆಗೆ ನಗರದ ವಿವೇಕಾನಂದ ರಂಗಮಂದಿರದಲ್ಲಿ ಕಲಾವೈಭವ ಶಾಸ್ತ್ರೀಯ ಭರತನಾಟ್ಯ ಪ್ರದರ್ಶನ ನಡೆಯಲಿದೆ. ಸಾಹಿತಿ ಪ್ರದೀಪ್‌ಕುಮಾರ್ ಹೆಬ್ರಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ನಗರಸಭಾಧ್ಯಕ್ಷ ಎಂ.ವಿ. ಪ್ರಕಾಶ್ (ನಾಗೇಶ್) ಉದ್ಘಾಟಿಸುವರು. ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಎಸ್.ಡಿ. ಜಯರಾಂ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನವೀನ್‌ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಕಲಾವಿದರಾದ ಸಿ.ಎಸ್.ಲಕ್ಷ್ಮಿ, ಬಿಂದುರಾವ್ ಮತ್ತು ಅಮೃತಾ ಶಶಾಂಕ್, ಹನುಮಂತರಾಜು, ತಾಂಡವಮೂರ್ತಿ, ರಾಜೇಶ್ ಮುದಗಂದೂರು ಅವರು ಭಾಗವಹಿಸಲಿದ್ದು, ಇದೇ ವೇಳೆ ಗರ್ಭಿಣಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಡಿ.ಉಷಾರಾಣಿ ಅವರನ್ನು ಸನ್ಮಾನಿಸಲಾಗುವುದು ಎಂದು ಟ್ರಸ್ಟ್‌ನ ವ್ಯವಸ್ಥಾಪಕ ನಿರ್ದೇಶಕ ಚೇತಕ್ ಎನ್.ಎಸ್. ಅವರು ತಿಳಿಸಿದ್ದಾರೆ.