ಸುಬ್ರಹ್ಮಣ್ಯ ಗಣೇಶೋತ್ಸವ: ರಜತ ಪ್ರಭಾವಳಿ ಸಮರ್ಪಣೆ

| Published : Aug 29 2025, 01:00 AM IST

ಸಾರಾಂಶ

ಸಾರ್ವಜನಿಕ ಗಣೇಶೋತ್ಸವ ಸಮಿತಿ ಸುಬ್ರಹ್ಮಣ್ಯ ಆಶ್ರಯದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನೂತನ ತಾತ್ಕಾಲಿಕ ಧರ್ಮಸಮ್ಮೇಳನ ಮಂಟಪದಲ್ಲಿ ನಡೆಯುತ್ತಿರುವ ೫೫ನೇ ವರ್ಷದ ಗಣೇಶೋತ್ಸವವು ಭಕ್ತಿ ಸಡಗರದಿಂದ ಆರಂಭವಾಯಿತು. ಚೌತಿಯ ದಿನ ಶ್ರೀ ಮಹಾಗಣಪತಿಗೆ ರಜತ ಪ್ರಭಾವಳಿ ಸಮರ್ಪಣೆ ನೆರವೇರಿತು. ಪುರೋಹಿತ ರಮಾನಂದ ಭಟ್ ವಿವಿಧ ವೈದಿಕ ವಿದಿ ವಿಧಾನಗಳೊಂದಿಗೆ ಶ್ರೀ ದೇವರಿಗೆ ಪ್ರಭಾವಳಿ ಅರ್ಪಿಸಿದರು.

ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ

ಸಾರ್ವಜನಿಕ ಗಣೇಶೋತ್ಸವ ಸಮಿತಿ ಸುಬ್ರಹ್ಮಣ್ಯ ಆಶ್ರಯದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನೂತನ ತಾತ್ಕಾಲಿಕ ಧರ್ಮಸಮ್ಮೇಳನ ಮಂಟಪದಲ್ಲಿ ನಡೆಯುತ್ತಿರುವ ೫೫ನೇ ವರ್ಷದ ಗಣೇಶೋತ್ಸವವು ಭಕ್ತಿ ಸಡಗರದಿಂದ ಆರಂಭವಾಯಿತು. ಚೌತಿಯ ದಿನ ಶ್ರೀ ಮಹಾಗಣಪತಿಗೆ ರಜತ ಪ್ರಭಾವಳಿ ಸಮರ್ಪಣೆ ನೆರವೇರಿತು. ಪುರೋಹಿತ ರಮಾನಂದ ಭಟ್ ವಿವಿಧ ವೈದಿಕ ವಿದಿ ವಿಧಾನಗಳೊಂದಿಗೆ ಶ್ರೀ ದೇವರಿಗೆ ಪ್ರಭಾವಳಿ ಅರ್ಪಿಸಿದರು.೧೧ ಕೆಜಿ ೬೦೦ ಗ್ರಾಂನ ಪ್ರಭಾವಳಿ:ಚೌತಿಯ ದಿನ ಶ್ರೀ ಮಹಾಗಣಪತಿಯನ್ನು ವಿಗ್ರಹ ಶಿಲ್ಪಿ, ಬ್ಯಾಂಕ್ ಪ್ರಬಂಧಕ ಕೃಷ್ಣ ಪ್ರಸಾದ್ ಸುಬ್ರಹ್ಮಣ್ಯ ಅವರ ಮನೆಯಿಂದ ಮೆರವಣಿಗೆಯಲ್ಲಿ ತರಲಾಯಿತು. ಗಣಪತಿ ಪ್ರತಿಷ್ಠೆಯ ಬಳಿಕ ಪುರೋಹಿತರು ವಿವಿಧ ವೈದಿಕ ವಿದಿ ವಿಧಾನಗಳನ್ನು ನೆರವೇರಿಸಿದರು. ಅಲ್ಲದೆ ಸಮಿತಿ ಅಧ್ಯಕ್ಷ ಕೆ.ಯಜ್ಞೇಶ್ ಆಚಾರ್ ಮತ್ತು ನಿಕಟಪೂರ್ವಾಧ್ಯಕ್ಷ ದಿನೇಶ್ ಮೊಗ್ರ ಬ್ರಹ್ಮಾರ್ಪಣೆ ಮೂಲಕ ಸುಮಾರು ೧೧ ಕೆ.ಜಿ. ೬೦೦ ಗ್ರಾಂ ತೂಕದ ೧೬ ಲಕ್ಷ ರು. ಮೌಲ್ಯದ ಪ್ರಭಾವಳಿಯನ್ನು ಮಹಾಗಣಪತಿಗೆ ಸಮರ್ಪಿಸಿದರು.ಈ ಸಂದರ್ಭ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ವ್ಯವಸ್ಥಾಪನಾ ಸಮಿತಿ ಸದಸ್ಯ ಅಶೋಕ್ ನೆಕ್ರಾಜೆ, ಗಣೇಶೋತ್ಸವ ಟ್ರಸ್ಟ್ ಅಧ್ಯಕ್ಷ ಎ.ವೆಂಕಟ್ರಾಜ್, ಟ್ರಸ್ಟ್ ಪದಾಧಿಕಾರಿಗಳು, ಸಮಿತಿ ಪದಾಧಿಕಾರಿಗಳು, ಪೂರ್ವಾಧ್ಯಕ್ಷರು ಮತ್ತು ಭಕ್ತರು ಉಪಸ್ಥಿತರಿದ್ದರು. ನಂತರ ೧೦೮ ತೆಂಗಿನಕಾಯಿ ಗಣಪತಿ ಹೋಮ ನಡೆಯಿತು. ಮಧ್ಯಾಹ್ನ ಮಹಾಪೂಜೆ ಬಳಿಕ ಸರ್ವರಿಗೂ ಪ್ರಸಾದ ವಿತರಣೆ ನೆರವೇರಿತು. ನಂತರ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ನೆರವೇರಿತು.