ಯುವ ವಿದ್ಯಾರ್ಥಿಗಳಲ್ಲಿ ನಾಟಕ ಸಂಸ್ಕೃತಿ ಅನಾವರಣವಾಗಬೇಕು. ವಿದ್ಯಾರ್ಥಿಗಳ ನಾಟಕ ತಂಡವನ್ನು ಉಳಿಸಿ ಬೆಳೆಸಲು ಸರ್ವರ ಸಹಕಾರ ಅಗತ್ಯ. ಆಧುನಿಕ ಯುಗದಲ್ಲಿ ಯುವಜನಾಂಗದಲ್ಲಿ ಅಡಕವಾಗಿರುವ ಸುಪ್ತ ಪ್ರತಿಭೆಗಳನ್ನು ಅನಾವರಣಗೊಳಿಸಲು ನಾಟಕ ಶಿಬಿರಗಳು ಅಡಿಗಲ್ಲಾಗಿದೆ ಎಂದು ಕೆ.ಎಸ್.ಎಸ್ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ತುಕರಾಮ್ ಯೇನೆಕಲ್ಲು ಹೇಳಿದರು.

ಸುಬ್ರಹ್ಮಣ್ಯ: ಯುವ ವಿದ್ಯಾರ್ಥಿಗಳಲ್ಲಿ ನಾಟಕ ಸಂಸ್ಕೃತಿ ಅನಾವರಣವಾಗಬೇಕು. ವಿದ್ಯಾರ್ಥಿಗಳ ನಾಟಕ ತಂಡವನ್ನು ಉಳಿಸಿ ಬೆಳೆಸಲು ಸರ್ವರ ಸಹಕಾರ ಅಗತ್ಯ. ಆಧುನಿಕ ಯುಗದಲ್ಲಿ ಯುವಜನಾಂಗದಲ್ಲಿ ಅಡಕವಾಗಿರುವ ಸುಪ್ತ ಪ್ರತಿಭೆಗಳನ್ನು ಅನಾವರಣಗೊಳಿಸಲು ನಾಟಕ ಶಿಬಿರಗಳು ಅಡಿಗಲ್ಲಾಗಿದೆ ಎಂದು ಕೆ.ಎಸ್.ಎಸ್ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ತುಕರಾಮ್ ಯೇನೆಕಲ್ಲು ಹೇಳಿದರು.

ಗುರುವಾರ ನಡೆದ ಸುಬ್ರಹ್ಮಣ್ಯ ಕೆ.ಎಸ್.ಎಸ್ ಕಾಲೇಜಿನ ರಂಗ ಘಟಕ ಕುಸುಮ ಸಾರಂಗದ ನಾಟಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಪ್ರಾಂಶುಪಾಲ ಡಾ.ದಿನೇಶ್ ಪಿ.ಟಿ. ಅಧ್ಯಕ್ಷತೆ ವಹಿಸಿದ್ದರು. ನಾಟಕದ ನಿರ್ದೇಶಕ ಮಿಥುನ್ ಕುಮಾರ್ ಸೋನ, ಪ್ರಾಕ್ತನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ಪ್ರಸಾದ್ ಎನ್, ಕಾರ್ಯದರ್ಶಿ ತೇಜಸ್ ಕಳಿಗೆ ಐಕ್ಯೂಎಸಿ ಸಂಯೋಜಕಿ ಶ್ರೀಲತಾ ಕಮಿಲ ಇದ್ದರು. ನಾಟಕದ ನಿರ್ದೇಶಕ ಮಿಥುನ್ ಕುಮಾರ್ ಸೋನ ಇವರನ್ನು ಸನ್ನಾನಿಸಲಾಯಿತು.ನಾಟಕದ ಸಂಯೋಜಕ ಡಾ.ಪ್ರಸಾದ್.ಎನ್ ಸ್ವಾಗತಿಸಿದರು. ಸಹಕಾರ್ಯದರ್ಶಿ ಕೃತಿಕಾ ಪಿ.ಎಸ್ ವಂದಿಸಿದರು. ಬಳಿಕ ವಿದ್ಯಾರ್ಥಿ ಕಲಾವಿದರಿಂದ ‘ಮುಖವಾಡ’ ನಾಟಕ ಪ್ರದರ್ಶಿತವಾಯಿತು.