ಮಕ್ಕಳಲ್ಲಿ ಪುಸ್ತಕಪ್ರೇಮ ಹೆಚ್ಚಿಸುವ ನಿಟ್ಟಿನಲ್ಲಿ “ನನ್ನ ನೆಚ್ಚಿನ ಪುಸ್ತಕ” ವಿಮರ್ಶೆ ಸ್ಪರ್ಧೆಯಲ್ಲಿ ಸಿದ್ಧಗಂಗಾ ಪ್ರೌಢಶಾಲೆಯ 8ನೇ ತರಗತಿ ಮಕ್ಕಳು ಭಾಗವಹಿಸಿ ಅದ್ವಿತೀಯ ಸಾಧನೆ ಮಾಡಿದ್ದಾರೆ.
- ಡಾ: ಸದ್ಯೋಜಾತ ಶಿವಾಚಾರ್ಯ ಶ್ರೀಗಳ ಸ್ಮರಣಾರ್ಥ, ಶಿಕ್ಷಕರ ದಿನ ಅಂಗವಾಗಿ ಕಾರ್ಯಕ್ರಮ - - -
* (ಜಿಲ್ಲಾಮಟ್ಟದ ಪುಸ್ತಕ ವಿಮರ್ಶೆ ಸ್ಪರ್ಧೆ)- - -
ಕನ್ನಡಪ್ರಭ ವಾರ್ತೆ ದಾವಣಗೆರೆಮಕ್ಕಳಲ್ಲಿ ಪುಸ್ತಕಪ್ರೇಮ ಹೆಚ್ಚಿಸುವ ನಿಟ್ಟಿನಲ್ಲಿ “ನನ್ನ ನೆಚ್ಚಿನ ಪುಸ್ತಕ” ವಿಮರ್ಶೆ ಸ್ಪರ್ಧೆಯಲ್ಲಿ ಸಿದ್ಧಗಂಗಾ ಪ್ರೌಢಶಾಲೆಯ 8ನೇ ತರಗತಿ ಮಕ್ಕಳು ಭಾಗವಹಿಸಿ ಅದ್ವಿತೀಯ ಸಾಧನೆ ಮಾಡಿದ್ದಾರೆ.
ಕುವೆಂಪು ಅವರ “ಶೂದ್ರತಪಸ್ವಿ”, ಎಪಿಜೆ ಅಬ್ದುಲ್ ಕಲಾಂರವರ “ವಿಂಗ್ಸ್ ಆಫ್ ಫೈರ್”, ಸುಮತೀಂದ್ರ ನಾಡಿಗರ “ತ್ಯಾಗಮಯಿ” ಪುಸ್ತಕಗಳನ್ನು ವಿಮರ್ಶಾತ್ಮಕ ದೃಷ್ಠಿಯಿಂದ ವೀಕ್ಷಕ ಮತ್ತು ತೀರ್ಪುಗಾರರೆದುರು ಮಂಡಿಸಿ ಹೇಗೆ ಈ ಪುಸ್ತಕಗಳು ತಮಗೆ ನೆಚ್ಚಿನ ಪುಸ್ತಕಗಳಾಗಿವೆ ಎಂಬುದನ್ನು ಪ್ರತಿಪಾದಿಸಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ಪಡೆದ ಅಪೂರ್ವ ಕಾರ್ಯಕ್ರಮಕ್ಕೆ ಡಾ: ಸದ್ಯೋಜಾತ ಶಿವಾಚಾರ್ಯ ಮಹಾಮಂಟಪದ ವೇದಿಕೆ ಭಾನುವಾರ ಸಾಕ್ಷಿಯಾಯಿತು.ಸಿದ್ಧಗಂಗಾ ಸಂಸ್ಥೆಯ ಬಾಲಕ- ಬಾಲಕಿಯರು ಪ್ರಸ್ತುತಪಡಿಸಿದ ಅವರ ನೆಚ್ಚಿನ ಪುಸ್ತಕಗಳಾದ “ರಿಫ್ರೆಶ್ ಯುವರ್ ಮೈಂಡ್”, “ಡ್ರಾಗನ್ ಇನ್ ದಿ ಟನಲ್”, “ಚಾಣಕ್ಯ ನೀತಿ”, “ಮಂಕುತಿಮ್ಮನ ಕಗ್ಗ”, “ಸೋತವನ ಸಾವಿರ ಕಥೆಗಳು”, “ಅಣ್ಣನ ನೆನಪು”, “ದಿ ಅಲ್ಕೆಮಿಸ್ಟ್” ಹೀಗೆ ಹಲವಾರು ಪುಸ್ತಕಗಳ ವಿಮರ್ಶೆಮಾಡಿ ವಿವಿಧ ವಿಭಾಗಗಳಿಗೆ ಮೀಸಲಾದ 15 ಬಹುಮಾನಗಳನ್ನು ಪಡೆದಿದ್ದಾರೆ.
ಮನಾಲ್ ಜಾನ್, ದೀಕ್ಷಾಜೆ. ಗಿರೀಶ್ ಎಸ್. ಪುಸ್ತಕಪ್ರೇಮಿ ಪುರಸ್ಕಾರ ಪಡೆದರೆ, ಗ್ರೀಷ್ಮಾ ಎಸ್. ಚೇತನ್ ರೆಡ್ಡಿ ಕಥಾಜನಕರೆನಿಸಿಕೊಂಡರು. ಧಾನ್ವಿ, ಅಕ್ಷತ ಪವಾರ್, “ಸೂಕ್ಷ್ಮ ದೃಷ್ಠಿಯ ಓದುಗರು” ಎಂದು ಕರೆಸಿಕೊಂಡರು. ಗೌತಮಿ “ದಿ ಸ್ಟೋರಿ ಆಫ್ ಮೈಲೈಫ್” ಶ್ರೀವತ್ಸ “ರಿಚ್ ಡ್ಯಾಡ್ ಪೂರ್ ಡ್ಯಾಡ್” ಪುಸ್ತಕಗಳನ್ನು ತಮ್ಮ ಮೆಚ್ಚಿನ ಪುಸ್ತಕಗಳೆಂದು ಬಿಂಬಿಸಿದರು.ಭಾನುವಾರ ಡಾ: ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳವರ ಸ್ಮರಣಾರ್ಥ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ದಾವಣಗೆರೆ ಜಿಲ್ಲಾಮಟ್ಟದ “ನನ್ನ ನೆಚ್ಚಿನ ಪುಸ್ತಕ” ವಿಮರ್ಶೆ ಸ್ಪರ್ಧೆಯಲ್ಲಿ ಜಿಲ್ಲೆಯ ಹಲವಾರು ಪ್ರೌಢಶಾಲೆಯ ಮಕ್ಕಳು ಭಾಗವಹಿಸಿದ್ದರು.
ತೀರ್ಪುಗಾರರ ಮೆಚ್ಚುಗೆ ಪಡೆದ ಸಿದ್ಧಗಂಗಾ ಸಂಸ್ಥೆಯ ನಯಾಸ ಡಿ.ಎಸ್. ಪ್ರಥಮ ಬಹುಮಾನವಾಗಿ ₹1000, ದ್ವಿತೀಯ ಬಹುಮಾನ ಗಳಿಸಿದ ಜಾಹ್ನವಿ ₹750 ಮತ್ತು ತೃತೀಯ ಬಹುಮಾನ ಗಳಿಸಿದ ಚೈತನ್ಯ ವಿ.ಎಸ್. ₹500 ನಗದು ಬಹುಮಾನ ಪಡೆದರು. ಜೊತೆಗೆ ಈ ಮಕ್ಕಳಿಗೆ ಆಯೋಜಕರು ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. ಅಲ್ಲದೇ ಎಳೆಯರ ಪ್ರಬುದ್ಧತೆಯನ್ನು ಶ್ಲಾಘಿಸಿದರು.ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೌಜ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಪಾಲಕರ ಪ್ರೋತ್ಸಾಹ ಈ ಯಶಸ್ಸಿಗೆ ಕಾರಣವಾಗಿದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಠ್ಯಪುಸ್ತಕಗಳ ಜೊತೆಗೆ ಉತ್ತಮ ಕಾದಂಬರಿಗಳು, ಕಥಾ ಸಂಕಲನಗಳು, ಸಾಧಕರ ಆತ್ಮಕಥೆ ಕುರಿತಾದ ಪುಸ್ತಕಗಳನ್ನು ಓದುವ ಹವ್ಯಾಸ ಅತ್ಯಂತ ಮಹತ್ವದ್ದು. ಓದಿನ ಮೂಲಕ ಜ್ಞಾನವೃದ್ಧಿ ಆಗುವುದರ ಜೊತೆಗೆ ಚಿಂತನೆ, ವಿಶ್ಲೇಷಣೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯವೂ ವೃದ್ಧಿ ಆಗುತ್ತದೆ. ವಿದ್ಯಾರ್ಥಿಗಳು ಮುಂದೆಯೂ ಇಂತಹ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಹೆಚ್ಚಿನ ಸಾಧನೆ ಮಾಡಬೇಕು ಎಂದು ಶುಭ ಹಾರೈಸಿದರು.
- - --22ಕೆಡಿವಿಜಿ33:
ದಾವಣಗೆರೆಯಲ್ಲಿ ನಡೆದ ಜಿಲ್ಲಾಮಟ್ಟದ ಪುಸ್ತಕ ವಿಮರ್ಶೆ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ ಸಿದ್ಧಗಂಗಾ ಸಂಸ್ಥೆ ಮಕ್ಕಳಿಗೆ ಅಭಿನಂದಿಸಲಾಯಿತು.