ಪಟ್ಟಣದ ಕೆ.ಎಲ್.ಎಸ್. ಸಂಸ್ಥೆಯ ವಿ.ಡಿ.ಐ.ಟಿ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಭಾರತದ ಖ್ಯಾತ ವಿಜ್ಞಾನಿ ಡಾ. ಸಿ.ವಿ. ರಾಮನ್ ಅವರ ಜನ್ಮದಿನ ಪ್ರಯುಕ್ತ ಆಯೋಜಿಸಿದ ರಾಷ್ಟ್ರೀಯ ವಿಜ್ಞಾನ ದಿನದ ಸಮಾರೋಪ ಸಮಾರಂಭ ಇತ್ತೀಚೆಗೆ ನಡೆಯಿತು.
ಹಳಿಯಾಳದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಮಾರೋಪ
ಕನ್ನಡಪ್ರಭ ವಾರ್ತೆ ಹಳಿಯಾಳಪಟ್ಟಣದ ಕೆ.ಎಲ್.ಎಸ್. ಸಂಸ್ಥೆಯ ವಿ.ಡಿ.ಐ.ಟಿ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಭಾರತದ ಖ್ಯಾತ ವಿಜ್ಞಾನಿ ಡಾ. ಸಿ.ವಿ. ರಾಮನ್ ಅವರ ಜನ್ಮದಿನ ಪ್ರಯುಕ್ತ ಆಯೋಜಿಸಿದ ರಾಷ್ಟ್ರೀಯ ವಿಜ್ಞಾನ ದಿನದ ಸಮಾರೋಪ ಸಮಾರಂಭ ಇತ್ತೀಚೆಗೆ ನಡೆಯಿತು.
ಡಾ. ಸಿ.ವಿ. ರಾಮನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ. ವಿ.ಎ. ಕುಲಕರ್ಣಿ ಅವರು, ಜೀವನದಲ್ಲಿ ಯಶಸ್ಸನ್ನು ಪಡೆಯಲು ಸತತ ಪರಿಶ್ರಮ, ತ್ಯಾಗ ಅವಶ್ಯಕವಾಗಿದೆ. ನಾವಿಂದು ಕಾಣುವ ಪ್ರತಿಯೊಬ್ಬ ಆದರ್ಶ ಪುರುಷರು, ಸಾಧಕರ ಸಾಧನೆಯ ಹಿಂದೆ ಶ್ರಮ, ಸತತ ಪ್ರಯತ್ನದ ಕಥೆಯಿದೆ ಎಂದರು.ಡಾ. ಸಮೀರ ಗಲಗಲಿ ಮಾತನಾಡಿ, ಡಾ. ಸಿ.ವಿ. ರಾಮನ್ ಅವರ ಕುರಿತು ಸಂಪೂರ್ಣ ಮಾಹಿತಿ ನೀಡಿದರು.
ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಸ್ನೇಹಾ ಕುಲಕರ್ಣಿ, ಡಾ. ಎಂ.ಎಸ್. ಸನಾಯಕರ ಹಾಗೂ ಕಾಲೇಜಿನ ಎಲ್ಲ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ. ವಿನೋದ ನಾಯ್ಕ, ಡಾ. ಜಿ.ಎಸ್. ಕುರ್ಡೇಕರ್, ಡಾ. ಮಲ್ಲಿಕಾರ್ಜುನ ಪಿ. ಕಾರ್ಯಕ್ರಮ ಆಯೋಜಿಸಿದ್ದರು.ಸ್ಪರ್ಧೆ:
ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ನಡೆದವು. ರಸಪ್ರಶ್ನೆ ಸ್ಪರ್ಧೆಯಲ್ಲಿ ಗೌರಿ ಕುಲಕರ್ಣಿ ಪ್ರಥಮ, ಪಲ್ಲವಿ ಶಿಂಧೆ ಹಾಗೂ ಲಹರಿ ದ್ವಿತೀಯ, ಫರಭಾನು ಮತ್ತು ಬಿ.ಬಿ. ಜೈನಾಬ್ ತೃತೀಯ ಸ್ಥಾನ ಗಳಿಸಿದರು.ಚರ್ಚಾ ಸ್ಪರ್ಧೆಯಲ್ಲಿ ತೇಜಸ್ ಬಿರಾದಾರ ಪ್ರಥಮ, ಸುಪ್ರೀತ ಗೌಡಾ ದ್ವಿತೀಯ, ಭವಾನಿ ಗೌಡರ್ ತೃತೀಯ ಸ್ಥಾನ ಗಳಿಸಿದರು.
ಭಿತ್ತಿಚಿತ್ರ ನಿರ್ಮಾಣ ಸ್ಪರ್ಧೆಯಲ್ಲಿ ಶಿವಾನಿ ಬಾನಿ ಪ್ರಥಮ, ನಮಿತಾ ಗುಡಿ ದ್ವಿತೀಯ, ನಿಲೋಪರ್ ತೃತೀಯ ಸ್ಥಾನ ಪಡೆದರು. ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು.