ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಒಬ್ಬ ವ್ಯಕ್ತಿಯ ಜೀವನದಲ್ಲಿ ಹಿಂದೆ ಗುರು ಮುಂದೆ ಗುರಿ ಇದ್ದರೆ ಮಾತ್ರ ಯಶಸ್ಸು ಸಾಧ್ಯ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ ಮಾತನಾಡಿದರು.ಶಿಕ್ಷಕರ ದಿನಾಚರಣೆ ಅಂಗವಾಗಿ ವೇದಿಕೆ ವತಿಯಿಂದ ನಡೆದ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ನಮಗಾಗಿ ನಾವು ಯೋಚಿಸಲು ನಮಗೆ ಸಹಕಾರ ಮಾಡಿದವರೇ ಗುರು. ಶಿಕ್ಷಣ ಪ್ರತಿಯೊಂದು ವ್ಯಕ್ತಿಯಲ್ಲಿ ಪರಿಪೂರ್ಣತೆ ತರಬೇಕು. ಜೀವನವನ್ನು ಮುನ್ನಡೆಸುವ ಸಾಮರ್ಥ್ಯವನ್ನು ನೀಡಬೇಕು. ಆದ್ದರಿಂದ ವಿದ್ಯಾರ್ಥಿಗಳಿಗೆ ತಿದ್ದಿ ಬುದ್ದಿ ಹೇಳಿ, ಸಮಾಜವನ್ನು ತಿದ್ದುವ ಶಕ್ತಿ ಗುರುವಿಗೆ ಮಾತ್ರವಿದೆ ಎಂದು ತಿಳಿಸಿದರು.
ಜಿಲ್ಲಾ ರೈತ ಮುಖಂಡ ಸೊ.ಶಿ.ಪ್ರಕಾಶ್ ಮಾತನಾಡಿ, ಸಂಘಟನೆ ಕೇವಲ ಹೋರಾಟಗಳಿಗೆ ಮಾತ್ರ ಸೀಮಿತವಾಗದೆ ಶಿಕ್ಷಣವನ್ನು ಕಲಿಸಿದ ಗುರುಗಳಿಗೆ ಗೌರವಿಸುವ ಕಾರ್ಯಕ್ರಮಗಳಿಗೂ ವಿಸ್ತರಿಸಿರುವುದು ಶ್ಲಾಘನೀಯ ಎಂದರು.ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ ಮಾತನಾಡಿ, ಆರಕ್ಷಕರಿಲ್ಲದೆ ರಕ್ಷಣೆ ಇಲ್ಲ. ವಕೀಲರಿಲ್ಲದೆ ನ್ಯಾಯವಿಲ್ಲ. ವೈದ್ಯರಿಲ್ಲದೆ ಆರೋಗ್ಯವಿಲ್ಲ, ಅಭಿಯಂತರರಿಲ್ಲದೆ ಅಭಿವೃದ್ಧಿ ಇಲ್ಲ. ತಂತ್ರಜ್ಞರಿಲ್ಲದೇ ತಂತ್ರಜ್ಞಾನವಿಲ್ಲ, ಗುರುಗಳಿಲ್ಲದಿದ್ದರೆ ಈ ಮೇಲಿನವರು ಯಾರೂ ಇಲ್ಲ ಎಂದು ಹೇಳಿದರು.
ಗುರು ಎಂದರೆ ವ್ಯಕ್ತಿಯಲ್ಲ, ಅದೊಂದು ಶಕ್ತಿ. ಅಜ್ಞಾನದ ಕತ್ತಲೆಯ ಕಳೆದು ಸುಜ್ಞಾನದ ಕಡೆಗೆ ಕರೆದೊಯ್ಯುವ ಅದ್ಭುತ ಶಬ್ದವೇ ಗುರು. ಒಬ್ಬ ಶಿಕ್ಷಕ ತಾನು ಕಲಿಯದೆ ಇನ್ನೊಬ್ಬರಿಗೆ ಕಲಿಸಲಾರ, ತಾನು ಉರಿಯದ ದೀಪ ಮತ್ತೊಂದು ದೀಪವನ್ನು ಬೆಳಗಲು ಸಾಧ್ಯವಿಲ್ಲ. ಅರಿವೇ ಗುರು ಎಂಬುದನ್ನು ಸಾಕಾರಗೊಳಿಸುವ ಸುಂದರ ಶಿಲ್ಫಿಯೇ ಗುರು ಎಂದರು.ಗುರುಗಳನ್ನು ಪೂಜಿಸಿ ಆರಾಧಿಸುವ ಸಂಸ್ಕೃತಿ, ಸಂಸ್ಕಾರ ನಮ್ಮ ಯುವ ಪೀಳಿಗೆ ತಮ್ಮೊಳಗೆ ಬೆಳೆಸಿಕೊಳ್ಳಬೇಕು. ಸರ್ಕಾರ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕು. ಇದರಿಂದ ಮತ್ತಷ್ಟು ಶಿಕ್ಷಕರ ಸಂಖ್ಯೆ ಹೆಚ್ಚುವುದರ ಜೊತೆಗೆ ಉದ್ಯೋಗ ಸೃಷ್ಟಿಯಾಗಿ ಶಿಕ್ಷಕರಾಗಿ ಸೇವೆ ಸಲ್ಲಿಸಲು ಅವಕಾಶ ದೊರೆಯುತ್ತದೆ ಎಂದು ಹೇಳಿದರು.
ಪ್ರಾಂಶುಪಾಲ ನಿಂಗೇಗೌಡ, ಶಿಕ್ಷಕರಾದ ನಾರಾಯಣ, ಲಕ್ಷ್ಮಣ, ಆಲೂರು ಚನ್ನಪ್ಪ, ಅಂಕಯ್ಯ, ಚಿಕ್ಕಮರಿಗೌಡ, ಉಮಾ, ಶಂಕರ, ಚಂದ್ರಶೇಖರ್, ಬಲರಾಮ, ಸಿ.ಟಿ.ದಾಸಯ್ಯರನ್ನು ಸನ್ಮಾನಿಸಿ ಸತ್ಕರಿಸಲಾಯಿತು.ಕಾರ್ಯಕ್ರಮದಲ್ಲಿ ಮಾಜಿ ಸೆನೆಟ್ ಸದಸ್ಯ ವಿ.ಕೆ.ಜಗದೀಶ್, ತಾಪಂ ಮಾಜಿ ಸದಸ್ಯ ಚಿಕ್ಕಮರಿಯಪ್ಪ, ತೈಲೂರು ರಾಜೇಂದ್ರ, ತಾಲೂಕು ಅಧ್ಯಕ್ಷ ತಿಪ್ಪೂರು ರಾಜೇಶ್, ಕಾರ್ಯದರ್ಶಿ ಸೋಂಪುರ ಉಮೇಶ್, ಮಹಾಲಿಂಗು, ವಿ.ಟಿ.ಕೆಂಚಪ್ಪ, ಪಟೇಲ ಹರೀಶ, ರಾಮನಗರ ಜಿಲ್ಲಾಧ್ಯಕ್ಷ ಯೋಗೇಶ್, ವಿ.ಆರ್.ಸತೀಶ್, ವಿಶ್ವಾಸ್, ವಿ.ಎಂ.ರಮೇಶ್, ಬ್ಯಾಂಕ್ ಚಿಕ್ಕಣ್ಣ, ಸುಮಾ, ರೈತ ಮುಖಂಡರಾದ ರಾಮಲಿಂಗು, ಕೆ.ಜಿ.ಉಮೇಶ್, ಸಕ್ಕರೆ ನಾಗರಾಜು ಸಂಘಟನೆ ಮುಖಂಡರು ಹಾಜರಿದ್ದರು.