ಸಾರಾಂಶ
ತರೀಕೆರೆ, ಪವಿತ್ರ ಕಾರ್ತಿಕ ಮಾಸದ ಶುದ್ಧ ಪೂರ್ಣಿಮೆ ಶುಕ್ರವಾರ ಸಂಜೆ ಆರತಿ ಕಾರ್ಯಕ್ರಮ ಅತ್ಯಂತ ಶ್ರೇಷ್ಠ. ಈ ದಿನ ಮಾಡುವ ಪೂಜೆ ಪುನಸ್ಕಾರಗಳಿಂದ ಜೀವನದಲ್ಲಿ ಯಶಸ್ಸು ಸಿಗುತ್ತದೆಂದು ಶ್ರೀ ಸಪ್ತಗಿರಿ ಭಜನಾ ಮಂಡಳಿ ಅಧ್ಯಕ್ಷೆ ಲೀಲಾ ಸೋಮಶೇಖರಯ್ಯ ಹೇಳಿದರು.
ಕನ್ನಡಪ್ರಭ ವಾರ್ತೆ, ತರೀಕೆರೆ
ಪವಿತ್ರ ಕಾರ್ತಿಕ ಮಾಸದ ಶುದ್ಧ ಪೂರ್ಣಿಮೆ ಶುಕ್ರವಾರ ಸಂಜೆ ಆರತಿ ಕಾರ್ಯಕ್ರಮ ಅತ್ಯಂತ ಶ್ರೇಷ್ಠ. ಈ ದಿನ ಮಾಡುವ ಪೂಜೆ ಪುನಸ್ಕಾರಗಳಿಂದ ಜೀವನದಲ್ಲಿ ಯಶಸ್ಸು ಸಿಗುತ್ತದೆಂದು ಶ್ರೀ ಸಪ್ತಗಿರಿ ಭಜನಾ ಮಂಡಳಿ ಅಧ್ಯಕ್ಷೆ ಲೀಲಾ ಸೋಮಶೇಖರಯ್ಯ ಹೇಳಿದರು.ಪಟ್ಟಣದ ಚಿಕ್ಕೆರೆಯಲ್ಲಿ, ಶ್ರೀ ಸಪ್ತಗಿರಿ, ಶ್ರೀಶೇಷಗಿರಿ, ಶ್ರೀಪತಿ, ಶ್ರೀಹರಿ, ಶ್ರೀ ಕೃಷ್ಣ ಭಜನಾ ಮಂಡಳಿ ಎಲ್ಲಾ ಸದಸ್ಯರು ಸೇರಿ ಚಿಕ್ಕೆರೆಯಲ್ಲಿ ಸಾಮೂಹಿಕ ಭಜನೆ ಮಾಡಿ, ಹಣತೆಯನ್ನು ಕುಂಕುಮ, ಅರಿಸಿನ, ವಿಧ ವಿಧವಾದ ಪುಷ್ಪಗಳಿಂದ ಅಲಂಕರಿಸಿ ದೀಪ ಹಚ್ಚಿ ಸಂಕಲ್ಪದೊಂದಿಗೆ ದೀಪ ಬೆಳಗಿಸಿ ಗಂಗೆಯಲ್ಲಿ ಬಿಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.ಕಾರ್ತಿಕ ಹುಣ್ಣಿಮೆ ದಿನ ಗಂಗೆ ಪೂಜೆ ಮಾಡುವುದರಿಂದ ಜೀವನದಲ್ಲಿ ಆರೋಗ್ಯ, ಸಂಪತ್ತು, ಪುಣ್ಯಪ್ರಾಪ್ತಿಯಾಗುವುದು ಎಂದು ತಿಳಿಸಿದರು.
ಶ್ರೀ ಪತಿ ಭಜನೆ ಮಂಡಳಿ ಅಧ್ಯಕ್ಷೆ ರತ್ನಮ್ಮಜಯಣ್ಣ ಮಾತನಾಡಿ ಗಂಗೆಯಲ್ಲಿ ದೀಪ ಬಿಡುವುದರಿಂದ ಮನೆಯಲ್ಲಿ ಸಂತೋಷ, ನೆಮ್ಮದಿ, ಸುಖ ಸಮೃದ್ಧಿ ನೆಲೆಸುವುದು ಎಂದರು. ಶ್ರೀ ಕೃಷ್ಣ ಭಜನೆ ಮಂಡಳಿ ಅಧ್ಯಕ್ಷೆ ವೀಣಾ ಪರಮೇಶ ಮಾತನಾಡಿ ಮಹಿಳೆಯರು ಪೂರ್ಣಿಮೆಯಂದು ಮನೆ ಮುಖ್ಯ ಬಾಗಿಲಲ್ಲಿ ದೀಪ ಹಚ್ಚಿಸುವುದರಿಂದ ಆರ್ಥಿಕ ಸಮೃದ್ಧಿ ಕಾಣಬಹುದೆಂದು ಹೇಳಿದರು. ಕಾರ್ತಿಕ ಪೂರ್ಣಿಮೆ ವಿಶೇಷ ಪೂಜೆಗೆ ಪುರಸಭೆ ಮುಖ್ಯ ಅಧಿಕಾರಿ ಎಚ್. ಪ್ರಶಾಂತ, ಅಧಿಕಾರಿಗಳು ಮತ್ತು ಪೌರಕಾರ್ಮಿಕರು ಚಿಕ್ಕೆರೆ ಸುತ್ತ ಮುತ್ತ ಗಿಡಗಂಟೆ ಹಾಗೂ ಮೆಟ್ಟಲುಗಳನ್ನು ಸ್ವಚ್ಛಗೊಳಿಸಿ ಪೂಜೆಗೆ ಅನುವು ಮಾಡಿಕೊಟ್ಟರು. ಎಲ್ಲರಿಗೂ ಭಜನಾ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರು ಕೃತಜ್ಞತೆ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಎಲ್ಲಾ ಭಜನಾ ಮಂಡಳಿ ಸದಸ್ಯರು, ಸಾರ್ವಜನಿಕರು ಭಾಗವಹಿಸಿದ್ದರು.15ಕೆಟಿಆರ್.ಕೆ.15ಃತರೀಕೆರೆಯಲ್ಲಿ ಚಿಕ್ಕೆರೆಯಲ್ಲಿ ಶ್ರೀಸಪ್ತಗಿರಿ, ಶ್ರೀಶೇಷಗಿರಿ, ಶ್ರೀಪತಿ, ಶ್ರೀಹರಿ, ಶ್ರೀ ಕೃಷ್ಣ ಭಜನಾ ಮಂಡಳಿಯ ಎಲ್ಲಾ ಸದಸ್ಯರು ದೀಪ ಬೆಳಗಿಸಿ ಗಂಗೆಯಲ್ಲಿ ಬಿಡುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.