ಸಮಯದ ಸಾರ್ಥಕತೆಯಿಂದ ವಿದ್ಯಾರ್ಥಿಗಳಲ್ಲಿ ಯಶಸ್ಸು

| Published : Jan 29 2025, 01:34 AM IST

ಸಾರಾಂಶ

ಶಿಕ್ಷಣದ ಉದ್ದೇಶ ಕೇವಲ ಪದವಿ ಸಂಪಾದನೆಯಲ್ಲಿ ಜ್ಞಾನದ ಪ್ರತೀಕ ಮಾತನಾಡುವದು ಜೀವನದ ಕಲೆ ಅದನ್ನು ಎಲ್ಲಿ, ಹೇಗೆ ಮಾತನಾಡಬೇಕೆಂಬುದನ್ನು ಕಲಿಯಬೇಕು

ಗದಗ: ಕೌಶಲ್ಯ ಅರಿತು ಶಿಕ್ಷಣದ ಬಗೆಗಿನ ಆಯ್ಕೆ ಮಾಡಿಕೊಂಡು ಹೋದರೆ ಯಶಸ್ಸು ಸಂಪಾದನೆ ಸಾಧ್ಯ. ವೈಯಕ್ತಿಕ ಪ್ರತಿಭೆ ಮೊಟಕುಗೊಳಿಸದೆ ಸಮಯದ ಸಾರ್ಥಕತೆ ಮಾಡಿಕೊಂಡು ಯಶಸ್ಸನ್ನು ವಿದ್ಯಾರ್ಥಿಗಳು ಸಂಪಾದಿಸಿ ಕಾಲೇಜಿಗೆ ಕೀರ್ತಿ ತರಬೇಕೆಂದು ಸಂಗೀತ ವಿದ್ವಾಂಸ ಚನ್ನವೀರಸ್ವಾಮಿ ಹಿರೇಮಠ(ಕಡಣಿ) ಹೇಳಿದರು.

ನಗರದ ಜ. ಶಿವಾನಂದ ಪಪೂ ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಡಾ. ಜಿ.ಬಿ.ಪಾಟೀಲ ಮಾತನಾಡಿ, ಶಿಕ್ಷಣದ ಉದ್ದೇಶ ಕೇವಲ ಪದವಿ ಸಂಪಾದನೆಯಲ್ಲಿ ಜ್ಞಾನದ ಪ್ರತೀಕ ಮಾತನಾಡುವದು ಜೀವನದ ಕಲೆ ಅದನ್ನು ಎಲ್ಲಿ, ಹೇಗೆ ಮಾತನಾಡಬೇಕೆಂಬುದನ್ನು ಕಲಿಯಬೇಕು. ಒಬ್ಬ ಪಾಲಕನಾಗಿ ಮಗುವನ್ನು ಕಾಣುವ ಬಗೆ ಹೇಗೆ ಎಂಬುದನ್ನು ತಿಳಿಯುವದು ಅವಶ್ಯಕವಾಗಿದೆ. ವಿದ್ಯಾರ್ಥಿಗಳು ಚೆನ್ನಾಗಿ ವಿದ್ಯಾರ್ಜನೆ ಮಾಡಿ ನಮ್ಮ ಕಾಲೇಜಿಗೆ ಉತ್ತಮ ಫಲಿತಾಂಶ ತಂದುಕೊಡಬೇಕೆಂದರು.

ಪ್ರಾ. ಎಸ್.ವಿ. ವೆರ್ಣೆಕರ ಮಾತನಾಡಿ, ಪರೀಕ್ಷಾ ಸಮಯ ಚೆನ್ನಾಗಿ ಉಪಯೋಗಿಸಿಕೊಂಡು ಆಯಾ ವಿಷಯಗಳಲ್ಲಿ ಉತ್ತಮ ಅಂಕ ಪಡೆಯಲು ತಮ್ಮ ಪ್ರಯತ್ನ ಮುಖ್ಯವಾಗಿದೆ ಎಂದು ತಿಳಿಸಿದರು.

ಕನ್ನಡ ಪ್ರತಿಭಾ ಪರೀಕ್ಷೆ ವಿವಿಧ ಕ್ರೀಡೆ ಹಾಗೂ ಮಹಿಳಾ ಸಂಘದಿಂದ ನಡೆದ ಸ್ಫರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಯನ್ನು ಕೃಷ್ಣಪ್ರಸಾದ ಜಾಧವ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಪ್ರತಿಭಾ ಕುರ್ತಕೋಟಿ ಪ್ರಾರ್ಥಿಸಿದರು. ಸಬೀನಾ ಬಾಗಲಕೋಟಿ ಸ್ವಾಗತಿಸಿದರು. ಬಸನಗೌಡ ಪಾಟೀಲ ವರದಿ ವಾಚಿಸಿದರು. ದೀಪಾ ಮುಂಡರಗಿ ನಿರೂಪಿಸಿದರು. ಎಸ್.ಬಿ. ಹಿರೇಮಠ ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.