ಸಾರಾಂಶ
ರಾಜ್ಯ ಮಟ್ಟದ ದೇಶಭಕ್ತಿ ಗೀತ ಗಾಯನ ಸ್ಪರ್ಧೆ ಉದ್ಘಾಟಿಸಿ ಜಿಲ್ಲಾಧಿಕಾರಿ ದಿವ್ಯಾಪ್ರಭುಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಸಾಧನೆ ಮಾಡಿದವರ ಹಿಂದೆ ಅವರದ್ದೇ ಆದ ಪರಿಶ್ರಮ ಇರುತ್ತದೆ. ಶ್ರಮ ಇಲ್ಲದೆ ಯಶಸ್ಸು ಲಭಿಸುವುದು ಅಸಾಧ್ಯವೆಂದು ಜಿಲ್ಲಾಧಿಕಾರಿ ದಿವ್ಯಾಪ್ರಭು ಹೇಳಿದರು.ಚಿತ್ರದುರ್ಗ ಹೊರವಲಯದಲ್ಲಿರುವ ಎಸ್ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟ ಕ ಹಾಗೂ ಚಿತ್ರದುರ್ಗ ಜಿಲ್ಲಾ ಸಂಸ್ಥೆ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ದೇಶಭಕ್ತಿ ಗೀತ ಗಾಯನ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸಾಧನೆಗೆ ನೆಪ ಅಡ್ಡಿಯಾಗಬಾರದು. ನಮ್ಮ ಯಶಸ್ಸಿನ ಹಿಂದೆ ಪೋಷಕರ ಶ್ರಮ ಅಡಗಿರುತ್ತದೆ ಎನ್ನುವುದು ಕೂಡ ಮರೆಯಬಾರದು ಎಂದರು.
ಆಧುನಿಕ ತಂತ್ರಜ್ಞಾನ ಭರಾಟೆ ಈ ವೇಳೆ ಮೊಬೈಲ್ ನಮ್ಮ ಶತ್ರುವಾಗಿದೆ. ಮೊಬೈಲ್ ಇಲ್ಲದೆ ಬದುಕು ಇಲ್ಲ ಎನ್ನುವಂ ತಹ ವಾತಾವರಣವನ್ನು ನಾವೇ ಸೃಷ್ಟಿಸಿಕೊಂಡಿದ್ದೇವೆ. ಯಾರದೇ ಬದುಕಿನಲ್ಲಿ ಯಶಸ್ಸು ಅವಕಾಶ ಆಗಬಾರದು. ಅದೊಂದು ಆಯ್ಕೆಯಾಗಿ ಪರಿಗಣನೆಯಾಗಬೇಕೆಂದರು.ಯಶಸ್ಸು ಗಳಿಸಬೇಕಾದರೆ ಗಮನ ಆ ಕೆಲಸದ ಮೇಲಿರಬೇಕು. ಗಮನ ಬೇರೆಡೆ ಹರಿಸಿದರೆ ಭಯ, ಆತಂಕದಿಂದ ಸಾಧನೆ ಮಾಡಲು ತೊಡಕಾಗುತ್ತದೆ. ಭರವಸೆ ಹಾಗೂ ನಂಬಿಕೆ ಕಡಿಮೆಯಾಗುತ್ತದೆ. ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಒಳ್ಳೆಯ ರೀತಿಯಲ್ಲಿ ಭಾಗವಹಿಸಿ ಯಶಸ್ಸು ಗಳಿಸಬೇಕು. ರಾಷ್ಟ್ರೀಯ ಹಬ್ಬಗಳಲ್ಲಿ ಮಾತ್ರ ನಾವು ರಾಷ್ಟ್ರ ಭಕ್ತಿ ತೋರುತ್ತೇವೆ. ಆದರೆ ಆಗಾಗ್ಗೆ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನಿರಂತರವಾಗಿ ಭಕ್ತಿ ಮೆರೆಯಬೇಕು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಧರ್ಮೇಂದ್ರಕುಮಾರ್ ಮೀನಾ ಮಾತನಾಡಿ, ಸಮವಸ್ತ್ರವು ನಮ್ಮನ್ನು ಶಿಸ್ತಿನಿಂದ ನಡೆದುಕೊ ಳ್ಳುವಂತೆ ಮಾಡುತ್ತದೆ.ರಾಜ್ಯದಲ್ಲಿ ಸುಮಾರು 4 ಲಕ್ಷ ಸ್ಕೌಟ್ಸ್ ಮತ್ತು ಗೈಡ್ಸ್, ರೋವರ್ಸ್, ಕಪ್ಸ್, ಬುಲ್‌ಬುಲ್‌ಗಳಿದ್ದಾರೆ. ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಸಿಸಿ, ಎನ್‌ಎಸ್‌ಎಸ್ ನಂತಹ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ವೈಯಕ್ತಿಯವಾಗಿ ಸುಧಾರಣೆ ಹೊಂದಲು ಸಹಕಾರಿಯಾಗಲಿದೆ. ಶಿಸ್ತು, ಸಂಯಮ, ಉತ್ಸಾಹ, ಪ್ರೇರಣೆ, ಕೌಶಲ್ಯ, ಸಾಮರ್ಥ್ಯ ಇವೆಲ್ಲವನ್ನು ಗಳಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಅನುಕೂಲವಾಗಲಿದೆ ಎಂದರು.ಮುಖಂಡ ಕೆ.ಸಿ.ನಾಗರಾಜ್ , ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ, ಜಿಲ್ಲಾ ಮುಖ್ಯ ಆಯುಕ್ತ ಕೆ.ರವಿಶಂಕರ್‌ರೆಡ್ಡಿ, ಜಿಲ್ಲಾ ಆಯುಕ್ತ ನಾಗಭೂಷಣ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಬಿ.ಎ. ಲಿಂಗಾರೆಡ್ಡಿ, ರಾಜ್ಯ ಕಾರ್ಯದರ್ಶಿ ರಂಗಪ್ಪಗೌಡ್ರು, ರಾಜ್ಯ ಆಯುಕ್ತೆ ಗೀತಾ ನಟರಾಜ್, ಮುಕ್ತ ಕಾಗ್ಲೆ, ಜಿಲ್ಲಾ ಪದಾಕಾರಿಗ ಳಾದ ಸವಿತಾ ಶಿವಕುಮಾರ್, ವಿ.ಎಲ್.ಪ್ರಶಾಂತ್, ಜಿ.ಎಸ್.ಉಜ್ಜನಪ್ಪ, ಪರಮೇಶ್, ಸುಜಯ ಶಿವಪ್ರಕಾಶ್, ಹೇಮಂತಿನಿ ಪ್ರಕಾಶ್ ಉಪಸ್ಥಿತರಿದ್ದರು. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸುಮಾರು 1200ಕ್ಕೂ ಸ್ಕೌಟ್ಸ್ ಮತ್ತು ಗೈಡ್ಸ್, ಕಪ್ಸ್, ಬುಲ್‌ಬುಲ್, ರೋವರ್ಸ್ ಮತ್ತು 200 ಕ್ಕೂ ಹೆಚ್ಚು ಶಿಕ್ಷಕರು, ಪೋಷಕರು ಪಾಲ್ಗೊಂಡಿದ್ದರು.