ಸಾರಾಂಶ
ದಿಂಗಾಲೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡಪ್ರಭ ಯುವ ಆವೃತ್ತಿ ಬಿಡುಗಡೆ
ಲಕ್ಷ್ಮೇಶ್ವರ: ವಿದ್ಯಾರ್ಥಿಗಳು ಪ್ರತಿನಿತ್ಯ ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿದಲ್ಲಿ ಯಶಸ್ಸುಗಳಿಸಲು ಸಾಧ್ಯವಾಗುತ್ತದೆ ಎಂದು ಬಾಲೆಹೊಸೂರಿನ ಗುರು ದಿಂಗಾಲೇಶ್ವರ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸಿ.ವಿ. ಅಡಿವೇರ ಅವರು ಹೇಳಿದರು.ಗುರುವಾರ ಸಮೀಪದ ಬಾಲೆಹೊಸೂರ ಗುರು ದಿಂಗಾಲೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ''''ಕನ್ನಡಪ್ರಭ'''' ಯುವ ಆವೃತ್ತಿಯ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.ವಿದ್ಯಾರ್ಥಿಗಳು ''''ಕನ್ನಡಪ್ರಭ'''' ದಿನಪತ್ರಿಕೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಅವರ ಪಠ್ಯಕ್ರಮದಲ್ಲಿನ ವಿಷಯಕ್ಕೆ ಸಂಬಂಧಿಸಿದಂತೆ ಪ್ರಶ್ನೋತ್ತರಗಳನ್ನು ಸರಳವಾಗಿ ವಿದ್ಯಾರ್ಥಿಗಳಿಗೆ ಅರ್ಥವಾಗುವ ರೀತಿಯಲ್ಲಿ ಮಾಹಿತಿ ನೀಡುವ ಕೆಲಸವನ್ನು ಮಾಡುತ್ತಿದ್ದು ಅದರಲ್ಲಿ ಬರುವ ವಿಷಯಗಳನ್ನು ಚೆನ್ನಾಗಿ ಅಭ್ಯಾಸ ಮಾಡುವ ಮೂಲಕ ಹೆಚ್ಚಿನ ಅಂಕಗಳಿಸಬೇಕು. ಕಠಿಣ ಪರಿಶ್ರಮ ಹಾಗೂ ನಿರಂತರ ಅಧ್ಯಯನವು ಯಶಸ್ಸಿಗೆ ದಾರಿಯಾಗಿದೆ ಎಂದು ಹೇಳಿದರು. ಈ ವೇಳೆ ''''ಕನ್ನಡಪ್ರಭ'''' ವರದಿಗಾರ ಅಶೋಕ ಸೊರಟೂರ ಮಾತನಾಡಿ, ದಿನಪತ್ರಿಕೆಯ ಯುವ ಆವೃತ್ತಿಯು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತಯಾರಿಸಲಾಗಿದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಈ ಯುವ ಆವೃತ್ತಿಯಲ್ಲಿ ಬರುವ ವಿಷಯಗಳನ್ನು ಚೆನ್ನಾಗಿ ಅಭ್ಯಾಸ ಮಾಡುವ ಮೂಲಕ ಶಿಕ್ಷಕರ, ಶಾಲೆ ಹಾಗೂ ತಂದೆ ತಾಯಿಗಳ ಹೆಸರನ್ನು ತರುವ ಕಾರ್ಯ ವಿದ್ಯಾರ್ಥಿಗಳು ಮಾಡಬೇಕು ಎಂದು ಹೇಳಿದರು. ಈ ವೇಳೆ ವಿದ್ಯಾರ್ಥಿ ಯುವ ಆವೃತ್ತಿಯನ್ನು ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಿ ಅವರ ಅಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟ ಗೌರಿಶಂಕರ ವಿಭೂತಿ ಹಾಗೂ ವೀರಯ್ಯ ಪಶುಪತಿಮಠ ಅವರನ್ನು ಪತ್ರಿಕೆ ವತಿಯಿಂದ ಸನ್ಮಾನಿಸಲಾಯಿತು. ಈ ವೇಳೆ ಜಿಲ್ಲಾ ಪ್ರಸರಣ ವಿಭಾಗದ ಪ್ರಸಾದ ಕೋಡಿತ್ಕರ್ ಅವರು ಮಾತನಾಡಿದರು. ಈ ವೇಳೆ ವಿಜಯಲಕ್ಷ್ಮೀ ಬಳಿಗಾರ ಹಾಗೂ ಆಶಾ ಅಣ್ಣಿಗೇರಿ ಎಂಬ ವಿದ್ಯಾರ್ಥಿನಿಯರು ಯುವ ಆವೃತ್ತಿಯ ವಿದ್ಯಾರ್ಥಿಗಳಿಗೆ ಹೆಚ್ಚು ಉಪಯುಕ್ತವಾಗಿದೆ ಎಂದು ಹೇಳಿದರು.ಸಭೆಯಲ್ಲಿ ಚನ್ನವೀರಯ್ಯ ಹಿರೇಮಠ, ಎಸ್.ಎಫ್. ಸುತ್ತೂರಮಠ, ಯು.ಎ. ಫುಲ್ಲಿ ಹಾಗೂ ಶಿಕ್ಷಕ ಸಿಬ್ಬಂದಿಗಳು ಹಾಜರಿದ್ದರು. ಆಶಾ ಚನ್ನಾಪೂರಮಠ ಸ್ವಾಗತಿಸಿದರು. ಮೇಘಾ ಅಣ್ಣಿಗೇರಿ ಕಾರ್ಯಕ್ರಮ ನಿರ್ವಹಿಸಿದರು. ವಿಜಯಲಕ್ಷ್ಮೀ ಬಳಿಗಾರ ವಂದಿಸಿದರು.