ಮನೋಬಲ, ಆತ್ಮಸ್ಥೈರ್ಯದಿಂದ ಮಾತ್ರ ಯಶಸ್ಸು ಸಾಧ್ಯ

| Published : Jul 21 2025, 01:30 AM IST

ಸಾರಾಂಶ

ಹೊಸದುರ್ಗ ಪಟ್ಟಣದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಪ್ರತಿಭಾ ಪುರಸ್ಕಾರ ಅಭಿನಂದನೆ ಹಾಗೂ ಶೈಕ್ಷಣಿಕ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ದಾನಿಗಳನ್ನು ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಪ್ರತಿಭಾ ಪುರಸ್ಕಾರ, ಅಭಿನಂದನೆ, ಶೈಕ್ಷಣಿಕ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಸಾಣೆಹಳ್ಳಿ ಶ್ರೀ ಅಭಿಮತ ಕನ್ನಡಪ್ರಭ ವಾರ್ತೆ ಹೊಸದುರ್ಗ

ಮನುಷ್ಯ ಸಮಾಧಾನದೊಂದಿಗೆ ಮನೋಬಲ ಆತ್ಮಸ್ಥೈರ್ಯ ಹೊಂದಿದಾಗ ಮಾತ್ರ ಯಶಸ್ಸನ್ನು ಕಾಣಲು ಸಾಧ್ಯ ಎಂದು ಸಾಣೆಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ವೀರಶೈವ-ಲಿಂಗಾಯತ ನೌಕರರ ಕ್ಷೇಮಭಿವೃದ್ಧಿ ಸಂಘದ ಆಶ್ರಯದಲ್ಲಿ ನಡೆದ 2024-25ನೇ ಸಾಲಿನ ಪ್ರತಿಭಾ ಪುರಸ್ಕಾರ ಅಭಿನಂದನೆ ಹಾಗೂ ಶೈಕ್ಷಣಿಕ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸಮಾಜವನ್ನು ಕೇವಲ ಸ್ವಾಮಿಗಳಿಂದ ಬೆಳಸಲು ಸಾಧ್ಯವಿಲ್ಲ ಶಿಷ್ಯರು ಸೇರಿದಾಗ ಉತ್ತಮ ಸಮಾಜ ಬೆಳೆಸಲು ಸಾಧ್ಯ. ಪಾರದರ್ಶಕತೆ ಎನ್ನುವುದು ಮನೆಯಲ್ಲು ಇರಬೇಕು ಮಠಗಳಲ್ಲೂ ಇದ್ದಾಗ ಯಾವುದೇ ಸಂಘರ್ಷಕ್ಕೆ ಅವಕಾಶ ವಿರುವುದಿಲ್ಲ. ಸಮಾಜದಲ್ಲಿ ಸಂಸ್ಕಾರ ಹೀನವಂತರವು ಇಂದು ಹೆಚ್ಚಾಗುತ್ತಿದ್ದಾರೆ ಆಚಾರ ಅರಿವು ಇಲ್ಲದಿದ್ದರೆ ಎಷ್ಟೇ ಹಣವಿದ್ದರೂ ಶ್ರೀಮಂತರಾಗಲು ಸಾಧ್ಯವಿಲ್ಲ ಹಾಗಾಗಿ ಇನ್ನು ಮುಂದಾದರು ಮಕ್ಕಳಿಗೆ ಇಷ್ಟಲಿಂಗ ದೀಕ್ಷೆ ಮಾಡುವ ಮೂಲಕ ಸಂಸ್ಕಾರ ಕಲಿಸಬೇಕಿದೆ ಎಂದರು.

ಸಮಾಜದಲ್ಲಿ ಪ್ರತಿಭಾವಂತರಿಗೆ ಕೊರತೆಯಿಲ್ಲ ಆದರೆ ಅವರಿಂದ ಸಮಾಜಕ್ಕೆ ಕೊಡುಗೆ ಏನು ಎಂಬುದನ್ನು ಅರಿಯಬೇಕು ಇತಿಹಾಸ ಮರೆತವನು ಭವಿಷ್ಯ ಕಟ್ಟಲು ಸಾಧ್ಯವಿಲ್ಲ ಎಂದರು.

ಕರಡಿ ಗವಿ ಮಠದ ಶಿವಶಂಕರ ಶಿವಯೋಗಿ ಸ್ವಾಮೀಜಿ ಮಾತನಾಡಿ, ಮನುಷ್ಯ ಎಷ್ಟೇ ವಿದ್ಯಾವಂತನಾದರು, ಹಣವಂತನಾದರು ಸಂಸ್ಕಾರ, ಗುಣ ವಿನಯತೆಯಿಲ್ಲದಿದ್ದರೆ ಆತನಿಗೆ ಬೆಲೆಯಿಲ್ಲ. ಹಾಗಾಗಿ ಪೋಷಕರು ತಮ್ಮ ಮಕ್ಕಳಿಗೆ ವಿದ್ಯೆ ಕಲಿಸುವ ಬರದಲ್ಲಿ ಸಂಸ್ಕಾರ ಕಲಿಸುವುದನ್ನು ಮರೆಯಬಾರದು .ಇಂದು ಜನರಲ್ಲಿ ಅಧಿಕಾರ ಮಧ, ಹಣ ಮಧ, ಯವ್ವನಮಧವನ್ನು ಕಾಣುತ್ತಿದ್ದೇವೆ ಎಂದರು.

ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಮಾತನಾಡಿ, ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಒಂದು ಕಟ್ಟಡ ನಿರ್ಮಿಸಿ ಅಲ್ಲಿ ಸಮಾಜದ ಸಂಘಟನೆ ಹಾಗೂ ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಿ ಎಂದು ಹೇಳಿದರು.

ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್.ಲಿಂಗಮೂರ್ತಿ ಮಾತನಾಡಿ, ಲಿಂಗಾಯತದಲ್ಲಿನ ಒಳ ಪಂಗಡಗಳನ್ನು ಒಟ್ಟು ಗೂಡಿಸುವ ಕೆಲಸವನ್ನು ನೌಕರರ ಕ್ಷೇಮಭಿವೃದ್ಧಿ ಸಂಘ ಮಾಡುತ್ತಿದೆ. ಕಲುಷಿತ ರಾಜಕೀಯ ವ್ಯವಸ್ಥೆಯಲ್ಲಿ ಸ್ವಾಭಿಮಾನಿ ಸಮಾಜವನ್ನು ಕಟ್ಟುವ ಕೆಲಸವನ್ನು ಪ್ರಾಮಾಣಿಕ ವಾಗಿ ಮಾಡಬೇಕಿದೆ ಎಂದರು.

ಗೌರವಾಧ್ಯಕ್ಷ ಎಲ್.ಜಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಬಡ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ಮೂಲಕ ಅವರನ್ನು ಪ್ರೋತ್ಸಾಹಿಸುವ ಮೂಲಕ ಉನ್ನತ ಸ್ಥಾನಗಳಿಗೆ ಕೊಂಡೋಯ್ಯಬೇಕು ಎನ್ನುವ ಆಶಯ ದಿಂದ ಈ ಸಂಘವನ್ನು ಸ್ಥಾಪಿಸಲಾಗಿದೆ. ಸಂಘದಿಂದ ಸನ್ಮಾನ ಸ್ವೀಕರಿಸಿದ ಮಕ್ಕಳು ಸಮಾಜಮುಖಿ ಯಾಗಿ ಕೆಲಸ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಕ್ಷೇಮಭಿವೃದ್ಧಿ ಸಂಘದ ಅಧ್ಯಕ್ಷ ಶಶಿಧರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಸಿದ್ದರಾಮಪ್ಪ, ಮಾಜಿ ಶಾಸಕ ಟಿ.ಎಚ್.ಬಸವರಾಜಪ್ಪ, ಮರಿದಿಮ್ಮಪ್ಪ, ಬಿಪಿ ಒಂಕಾರಪ್ಪ, ದ್ಯಾಮಪ್ಪ, ವಕೀಲರಾದ ಎಂ ಶಿವಲಿಂಗಪ್ಪ, ಸಫಾರಿ ಶಿವಲಿಂಗಪ್ಪ ಮತ್ತಿತರರು ಹಾಜರಿದ್ದರು. ಕಾರ್ಯಕ್ರಮದಲ್ಲಿ ದಾನಿಗಳನ್ನು ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಿ ಗೌರವಿಸಲಾಯಿತು.