ಸಾರಾಂಶ
ಕನ್ನಡಪ್ರರ್ಭ ವಾರ್ತೆ ಮಂಗಳೂರುಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ದ.ಕ. ಜಿಲ್ಲಾ ಘಟಕದಿಂದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರನ್ನು ಮಂಗಳೂರಿನ ನಂತೂರು ಶ್ರೀ ಭಾರತೀ ವಿದ್ಯಾ ಸಂಸ್ಥೆಯಲ್ಲಿ ಭೇಟಿಯಾಗಿ ಕಾಷಾಯಂಬರ ಸಹಿತ ಗುರುವಂದನಾ ಕಾರ್ಯಕ್ರಮ ಸಲ್ಲಿಸಲಾಯಿತು. ಶ್ರೀಗಳು ಮಹಾಸಭಾದ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಸಂಘಟನೆಯಿಂದ ಯಶಸ್ಸು ಸಾಧ್ಯ ಎಂದು ಆಶೀರ್ವಾದಪೂರ್ವಕ ಮಂತ್ರಾಕ್ಷತೆಯನ್ನು ನೀಡಿ ಹರಸಿದರು.ರಾಜ್ಯ ಉಪಾಧ್ಯಕ್ಷ, ನ್ಯಾಯವಾದಿ ಮಹೇಶ್ ಕಜೆ, ಜಿಲ್ಲಾ ಪ್ರಧಾನ ಸಂಚಾಲಕ, ಭರತಾಂಜಲಿಯ ವಿದ್ವಾನ್ ಶ್ರೀಧರ ಹೊಳ್ಳ, ರಾಜ್ಯ ಸಂಘಟನಾ ಕಾರ್ಯದರ್ಶಿ ಪೊಳಲಿ ಗಿರಿಪ್ರಕಾಶ್ ತಂತ್ರಿ, ರಾಜ್ಯಯುವ ಘಟಕದ ಸಹ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಕೊರಿಯಾರ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಶ್ರೀಕರ ದಾಮ್ಲೆ, ಮಹಿಳಾ ಘಟಕದ ಕಾತ್ಯಾಯಿನಿ ಸೀತಾರಾಂ, ಜಿಲ್ಲಾ ಸಂಚಾಲಕರಾದ ಕದ್ರಿ ಕೃಷ್ಣ ಭಟ್, ನ್ಯಾಯವಾದಿ ಪುರುಷೋತ್ತಮ ಭಟ್, ಪದ್ಮಾ ಭಿಡೆ, ಹರ್ಷ ಕುಮಾರ್ ಕೇದಿಗೆ, ಗಣೇಶ್ ಕಾಶೀಮಠ, ಎಂ. ಟಿ. ಭಟ್, ಗೌರವ ಸಲಹೆಗಾರ ಸಿಎ ಆರ್.ಡಿ.ಶಾಸ್ತ್ರಿ, ಸಮತಾ ಬಳಗದ ಅಧ್ಯಕ್ಷೆ ವಂದನಾ ಮತ್ತಿತರರಿದ್ದರು.