ಕ್ರೀಡಾಭ್ಯಾಸದಿಂದ ಯಶಸ್ಸು ಸಾಧ್ಯ: ಸುನೀಲ್ ಲಾರನ್ಸ್

| Published : Feb 10 2025, 01:49 AM IST

ಸಾರಾಂಶ

ಯಾವುದೇ ಸ್ಪರ್ಧಿಯು ನಂಬಿಕೆಯಿಂದ ಆಟ ಆಡುವ ಮನೋಭಾವ ಬೆಳೆಸಿಕೊಳ್ಳಬೇಕು. ಕಠಿಣ ಪರಿಶ್ರಮ ಮತ್ತು ಏಕಾಗ್ರತೆಯಿಂದ ಕ್ರೀಡೆಯಲ್ಲಿ ಭಾಗವಹಿಸುವಿಕೆ ಮುಖ್ಯವಾಗಬೇಕು. ಸೋಲು ಗೆಲುವು ಇದ್ದೆ ಇರುತ್ತದೆ. ಅದಕ್ಕೆ ತಲೆಕಡಿಸಿಕೊಳ್ಳದೇ ಆಟ ಆಡುವುದು ಮುಖ್ಯವಾಗಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ನಿರಂತರ ಅಭ್ಯಾಸ ಮಾಡಿದರೆ ಮಾತ್ರ ಕ್ರೀಡಾಪಟುಗಳಿಗೆ ಯಶಸ್ಸು ಸಾಧ್ಯ ಎಂದು ರಾಷ್ಟ್ರೀಯ ಕ್ರೀಡಾಪಟು ಸುನೀಲ್ ಲಾರೆನ್ಸ್ ಅಭಿಪ್ರಾಯಪಟ್ಟರು.

ನಗರದ ಸರ್‌ಎಂವಿ ಒಳಾಂಗಣ ಕ್ರಿಡಾಂಗಣದಲ್ಲಿ ಭಾನುವಾರ ನಡೆದ ಸರ್‌ಎಂವಿ ಕಪ್ 2025ರ ಓಪನ್ ಶೆಟಲ್ ಬ್ಯಾಡ್ಮಿಂಟನ್ ಟೂರ್ನಿಮೆಂಟ್ ವೇಳೆ ಮಾತನಾಡಿ, ಪಂದ್ಯಾವಳಿಗಳು ಜಾಸ್ತಿಯಾದಂತೆ ಆಟಗಾರರು ಹೆಚ್ಚಾಗುತ್ತಾರೆ ಎನ್ನುವುದು ಸತ್ಯವಾಗಿದೆ ಎಂದರು.

ಯಾವುದೇ ಸ್ಪರ್ಧಿಯು ನಂಬಿಕೆಯಿಂದ ಆಟ ಆಡುವ ಮನೋಭಾವ ಬೆಳೆಸಿಕೊಳ್ಳಬೇಕು. ಕಠಿಣ ಪರಿಶ್ರಮ ಮತ್ತು ಏಕಾಗ್ರತೆಯಿಂದ ಕ್ರೀಡೆಯಲ್ಲಿ ಭಾಗವಹಿಸುವಿಕೆ ಮುಖ್ಯವಾಗಬೇಕು. ಸೋಲು ಗೆಲುವು ಇದ್ದೆ ಇರುತ್ತದೆ. ಅದಕ್ಕೆ ತಲೆಕಡಿಸಿಕೊಳ್ಳದೇ ಆಟ ಆಡುವುದು ಮುಖ್ಯವಾಗಬೇಕು ಎಂದರು.

ಕ್ರೀಡಾ ಸ್ಪರ್ಧಿಗೆ ಮೊದಲು ಫಿಟ್‌ನೆಸ್ ಕಾಪಾಡಿಕೊಳ್ಳಬೇಕು. ವಿದ್ಯಾರ್ಥಿ ದಿಸೆಯಲ್ಲಿಯೇ ಓದಿನ ಜೊತೆಗೆ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕಿದೆ. ಕ್ರೀಡಾ ಪಟುಗಳು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆ ಆಡುವ ಸಾಮಾರ್ಥ್ಯ ಬೆಳೆಸಿಕೊಳ್ಳಬೇಕು ಎಂದರು.

ಎರಡು ದಿನಗಳಿಂದ ಆಯೋಜಿಸಿದ್ದ ಬ್ಯಾಡ್ಮಿಂಟನ್ ಟೂರ್ನಿಮೆಂಟ್‌ನಲ್ಲಿ ಕೇರಳ, ತಮಿಳುನಾಡು, ಹೈದರಾಬಾದ್, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಒಟ್ಟು 100 ತಂಡಗಳು ಭಾಗವಹಿಸಿದ್ದವು. ತಲಾ ಒಂದು ದಿನದಲ್ಲಿ50 ತಂಡಗಳಂತೆ ಆಟ ಆಡಿಸಲಾಯಿತು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ನಾಗೇಶ್, ಉಪಾಧ್ಯಕ್ಷ ಎಂ.ಪಿ.ಅರುಣ್‌ಕುಮಾರ್, ಡಾ.ಎಚ್.ಸಿ.ಶಂಕರೇಗೌಡ, ಕ್ರೀಡಾಪಟು ಆನಂದ್, ಬೋರ್‌ವೆಲ್ ಎಂ.ಮಹದೇವು, ಆಯೋಜಕ ರಾಘು ಗಾಂಧಿನಗರ, ಮುಖಂಡರಾದ ಲೋಕೇಶ್, ಟೆಕ್ನಿಕ್ ಮಂಜಣ್ಣ, ಹೊಸಹಳ್ಳಿ ಉಮೇಶ್ ಭಾಗವಹಿಸಿದ್ದರು.