ಯಾವುದೇ ಒಂದು ಕ್ಷೇತ್ರದಲ್ಲಿ ನಾವು ಸಾಧನೆ ಮಾಡಬೇಕಾದರೆ ಸತತ ಪ್ರಯತ್ನದ ಜೊತೆಗೆ ಪ್ರಾಮಾಣಿಕತೆ, ತಾಳ್ಮೆ ಬಹಳ ಮುಖ್ಯ. ಸಾಧಕರನ್ನು ಗುರುತಿಸಿ ಸನ್ಮಾನ ಮಾಡುವ ಕಾರ್ಯಕ್ರಮ ಅನನ್ಯವಾದುದು ಎಂದು ಕಾಂಗ್ರೆಸ್ ಮುಖಂಡ ಹಾಗೂ ಅಸ್ಕಿ ಫೌಂಡೇಶನ್ ಮುಖ್ಯಸ್ಥ ಸಿ.ಬಿ ಅಸ್ಕಿ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಯಾವುದೇ ಒಂದು ಕ್ಷೇತ್ರದಲ್ಲಿ ನಾವು ಸಾಧನೆ ಮಾಡಬೇಕಾದರೆ ಸತತ ಪ್ರಯತ್ನದ ಜೊತೆಗೆ ಪ್ರಾಮಾಣಿಕತೆ, ತಾಳ್ಮೆ ಬಹಳ ಮುಖ್ಯ. ಸಾಧಕರನ್ನು ಗುರುತಿಸಿ ಸನ್ಮಾನ ಮಾಡುವ ಕಾರ್ಯಕ್ರಮ ಅನನ್ಯವಾದುದು ಎಂದು ಕಾಂಗ್ರೆಸ್ ಮುಖಂಡ ಹಾಗೂ ಅಸ್ಕಿ ಫೌಂಡೇಶನ್ ಮುಖ್ಯಸ್ಥ ಸಿ.ಬಿ ಅಸ್ಕಿ ಹೇಳಿದರು.

ಪಟ್ಟಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸಮಾನ ಮನಸ್ಕ ಗೆಳೆಯರ ಬಳಗದಿಂದ ಮಂಗಳವಾರ ಸಂಜೆ ನಡೆದ ತಾಲೂಕು ಸರ್ಕಾರಿ ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿಗೆ ಸರ್ಕಾರದಿಂದ ನಾಮನಿರ್ದೇಶಕರಾಗಿ ಆಯ್ಕೆಯಾದ ಸದಸ್ಯರ ಹಾಗೂ ವಿವಿಧ ಕ್ಷೇತ್ರ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಧನೆ ಯಾರ ಸೊತ್ತು ಅಲ್ಲ, ಹಾಗಂತ ನಾವು ಯಾವುದೇ ಚಟುವಟಿಕೆಗಳಿಲ್ಲದೆ ವ್ಯರ್ಥ ಕಾಲಹರಣ ಮಾಡಿ ಸಾಧಿಸಲು ಸಾಧ್ಯವಿಲ್ಲ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಿಕ್ಕೆ ಬಂದು ಎರಡೂವರೇ ವರ್ಷ ಗತಿಸಿ, ಉತ್ತಮ ಆಡಳಿತ ನಡೆಸುತ್ತಿದೆ. ಅದರಂತೆ ಮತಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಸರ್ಕಾರದ ಎಲ್ಲ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವುದರ ಜೊತೆಗೆ ಸಮಗ್ರ ಮತಕ್ಷೇತ್ರದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಸದ್ಯ ಸರ್ಕಾರಿ ಆಸ್ಪತ್ರೆಯ ನಾಮನಿರ್ದೇಶಕರ ಆಯ್ಕೆಗೆ ವರ್ಷದ ಹಿಂದೆ ಸಚಿವರ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಕೆಲ ಕಾರಣಾಂತರದಿಂದ ಆಗಿರಲಿಲ್ಲ, ಆದರೀಗ 8 ಜನ ನಾಮನಿರ್ದೇಶಕರನ್ನು ಆಯ್ಕೆ ಮಾಡಿ ಅಂತಿಮ ಆದೇಶ ನೀಡುವಂತೆ ಮಾಡಿದ್ದರಿಂದ ಕಾರ್ಯಕರ್ತರಲ್ಲಿ ಮತ್ತಷ್ಟು ಉತ್ಸಾಹ ಹೆಚ್ಚಾಗಿದೆ. ಈ ಹಿನ್ನೆಲೆ ಕಾಮರಾಜ ಬಿರಾದಾರ ನೇತೃತ್ವದಲ್ಲಿ ವಿವಿಧ ಸಾಧಕರನ್ನು ಗುರುತಿಸಿ ಸಮಾಜಕ್ಕೆ ಪರಿಚಯ ಮಾಡುವ ಮೂಲಕ ಸಾಧಕರನ್ನು ಪ್ರೋತ್ಸಾಹಿಸುತ್ತಿದ್ದೇವೆ ಎಂದರು.

ತಾಲೂಕು ಸರ್ಕಾರಿ ಆಸ್ಪತ್ರಗೆ ಕಡು ಬಡವರೇ ಹೆಚ್ಚು ಚಿಕಿತ್ಸೆಗೆಂದು ಬರುತ್ತಾರೆ ಅವರ ಆರೋಗ್ಯ ರಕ್ಷಣೆ ಜವಾಬ್ದಾರಿ ಹೊತ್ತು ಸಕಾಲಕ್ಕೆ ಚಿಕಿತ್ಸೆ ದೊರಕುವಂತೆ ನೋಡಿಕೊಳ್ಳಬೇಕು. ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತು ಪರಿಸ್ಥಿಯಲ್ಲಿ ಕೆಲವೊಮ್ಮೆ ರಕ್ತ ದೊರಕುವುದು ಸಂಕಷ್ಟದ ಕೆಲಸ ಇಂತಹ ಸಂದರ್ಭದಲ್ಲಿ ರಕ್ತ ಭಂಡಾರ ತೆರೆಯುವಂತೆ ಜನಪ್ರತಿನಿಧಿಗಳನ್ನು ಒತ್ತಾಯಿಸ ಬೇಕೆಂದರು.

ತಾಲೂಕು ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಮಾತನಾಡಿ, ಕೆಲವರು ಎಲೆಮರಿ ಕಾಯಿಯಂತೆ ಯಾವುದೇ ಸ್ವಾರ್ಥವಿಲ್ಲದೇ ನಿಸ್ವಾರ್ಥತೆಯಿಂದ ಸಮಾಜ ಮುಖಿಯಾಗಿ ಕೆಲಸ ಮಾಡುತ್ತಾರೆ. ಅಂತಹವರ ಸಾಲಿನಲ್ಲಿ ಈ ಸಾಧಕರಿದ್ದಾರೆ. ಒಂದು ಪಕ್ಷಕ್ಕೆ, ಜಾತಿಗೆ ಸೀಮಿತವಾಗದೆ ಜಾತ್ಯಾತೀತವಾಗಿ ಸಮಾಜಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಅವರನ್ನು ಗೌರವಿಸುವುದು ನಮ್ಮ ಸೌಭಾಗ್ಯ ಎಂದರು.

ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ನೂತನ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾಗಿರುವ ಡಾ.ವಿಜಯಕುಮಾರ.ಸಿ ಗೂಳಿ (ಆಲೂರ), ಶಿವನಗೌಡ.ಎಂ ಪಾಟೀಲ (ಕುಂಟೋಜಿ), ಮಹಮ್ಮದ ರಫೀಕ ಶಿರೋಳ (ಗಣೇಶ ನಗರ), ಸದಾಶಿವಯ್ಯ ಹಿರೇಮಠ (ಮಾರುತಿ ನಗರ), ಮಾಬೂಬಿ ಬಾಗವಾನ, ನಿರ್ಮಲಾ.ಆರ್ ರಾಯಗೊಂಡ (ಹುಡ್ಕೋ ಬಡಾವಣೆ), ಸವಿತಾ.ಎಸ್ ನಾಲತವಾಡ (ನೇತಾಜಿ ನಗರ), ಅಂಬರೀಶ ಬಿರಾದಾರ ಹಾಗೂ ದೈಹಿಕ ಶಿಕ್ಷಕ ಎ.ಜೆ.ದಖನಿ, ದೀಪಾ ರತ್ನಶ್ರೀ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.

ಗಣ್ಯರಾದ ವೈ.ಎಚ್.ವಿಜಯಕರ, ಅಮರೇಶ ಗೂಳಿ, ಜಹಾಂಗೀರ ಮುಲ್ಲಾ, ರಾಜು ಬಳ್ಳೋಳ್ಳಿ, ಟಿ.ವಿಜಯಭಾಸ್ಕರ, ಅಶೋಕ ಚೆಟ್ಟೆರ, ಸಂಗಪ್ಪ ಮೇಲಿನಮನಿ, ಗೌರಿಶಂಕರ ಹಿರೇಮಠ, ಸಾಹೇಬಲಾಲ ದೇಸಾಯಿ, ಜಾವಿದ ಇನಾಮದಾರ, ಹುಲಿಗೇಶ ಈಳಗೇರ, ಹುಸೇನ್ ಮುಲ್ಲಾ, ತಾಲೂಕು ಮಹಿಳಾ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷೆ ಅಕ್ಷತಾ ಚಲವಾದಿ, ಶೋಭಾ ಶಳ್ಳಗಿ, ರೇಣುಕಾ ದೊಡಮನಿ ಸೇರಿದಂತೆ ಹಲವರಿದ್ದರು.