ಸಾರಾಂಶ
ಸುರಪುರ ತಾಲೂಕಿನ ಸಮೀಪದ ರುಕ್ಮಾಪುರ ಗ್ರಾಮದ ಭಂಡಾರೆ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅಧಿಕ ಅಂಕಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಕನ್ನಡಪ್ರಭ ವಾರ್ತೆ, ಸುರಪುರ
ತಾಲೂಕಿನ ರುಕ್ಮಾಪುರ ಗ್ರಾಮದ ಶ್ರೀ ಕೊಟ್ಟೂರು ಬಸವೇಶ್ವರ ಶಿಕ್ಷಣ ಸಂಸ್ಥೆಯ ಸಂಚಾಲಿತ ಭೀಮಾಬಾಯಿ ನಾರಾಯಣಪ್ಪ ಭಂಡಾರೆ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪ್ರಸಕ್ತ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಮಾತನಾಡಿದ ನಿವೃತ್ತ ಉಪ ಲೋಕಾಯುಕ್ತ ಎಸ್‌ಪಿ ಸಿ.ಎನ್. ಭಂಡಾರೆ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಮೊದಲ ಮೆಟ್ಟಿಲಾಗಿದೆ. ಸಮಯ ವ್ಯರ್ಥ ಮಾಡದೇ ನಿರಂತರ ಅಧ್ಯಯನದಿಂದ ಯಶಸ್ಸು ಪಡೆಯಲು ಸಾಧ್ಯ ಎಂದರು.
ಈ ವೇಳೆ ರುಕ್ಮಾಪುರ ಗ್ರಾಮದ ಹಿರಿಯ ಪತ್ರಕರ್ತ ಸುಭಾಸ ಬಣಗಾರ ಹಾಗೂ ಪತ್ನಿ ಶಾರದಾ ಅವರನ್ನು ಸನ್ಮಾನಿಸಲಾಯಿತು. ಸುರಪುರದ ಐತಿಹಾಸಿಕ ದೇಶಭಕ್ತರು ಹಾಗೂ ದೇಶ ದ್ರೋಹಿಗಳು ಭಾಷಾಂತರ ಕೃತಿ ರಚಿಸಿದ ರಂಗನಗೌಡ ಅಂಜಳ ಅವರನ್ನು ಸತ್ಕರಿಸಲಾಯಿತು. ಈ ವೇಳೆ ಸಂಗಣ್ಣ ಶಿರೇಗೋಳ, ಶಿಕ್ಷಕಿ ಪ್ರಭಾವತಿ, ಬಸಪ್ಪ ಸಲೇಗಾರ, ಸಂಗಣ್ಣ ಮಿಣಜಿಗಿ, ಗಿರಿಜಾ ದೇವಿ ಮಿಣಜಿಗಿ ಸೇರಿ ಇತರರಿದ್ದರು.