ಧಾರವಾಡ ಜಿಲ್ಲೆಯಲ್ಲಿ 3 ಲಕ್ಷ ಬಿಜೆಪಿ ಸದಸ್ಯತ್ವ ನೋಂದಣಿ ಮಾಡಿಸಿ

| Published : Sep 29 2024, 01:52 AM IST

ಧಾರವಾಡ ಜಿಲ್ಲೆಯಲ್ಲಿ 3 ಲಕ್ಷ ಬಿಜೆಪಿ ಸದಸ್ಯತ್ವ ನೋಂದಣಿ ಮಾಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ನೋಂದಣಿ ಕಾರ್ಯ ಮುಂಚೂಣಿಯಲ್ಲಿದೆ. ಸೆ. 29ರಂದು ಬೆಳಗ್ಗೆ 8ರಿಂದ ರಾತ್ರಿ 8ರ ವರೆಗೆ ಸದಸ್ಯತ್ವ ಅಭಿಯಾನ ನಡೆಯಬೇಕಾಗಿದೆ.

ಹುಬ್ಬಳ್ಳಿ:

ಧಾರವಾಡ ಜಿಲ್ಲೆಯಲ್ಲಿ ಕನಿಷ್ಠವೆಂದರೂ 3 ಲಕ್ಷಕ್ಕೂ ಅಧಿಕ ಬಿಜೆಪಿ ಸದಸ್ಯತ್ವ ನೋಂದಣಿ ಮಾಡಿಸಬೇಕು. ಈ ಸದಸ್ಯತ್ವ ಅಭಿಯಾನವನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸಬೇಕು ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್‌. ರವಿಕುಮಾರ ಹೇಳಿದರು.

ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಸದಸ್ಯತ್ವ ಅಭಿಯಾನದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದ ಅವರು, ಇಲ್ಲಿ ಪಕ್ಷವು ಬಲಿಷ್ಠವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸಲು ಕಾರ್ಯಕರ್ತರು ಹೆಚ್ಚಿನ ಉತ್ಸಾಹ ತೋರಬೇಕೆಂದು ಕರೆ ನೀಡಿದರು.

ಪ್ರಸ್ತುತ ರಾಜ್ಯದಲ್ಲಿ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ನೋಂದಣಿ ಕಾರ್ಯ ಮುಂಚೂಣಿಯಲ್ಲಿದೆ. ಸೆ. 29ರಂದು ಬೆಳಗ್ಗೆ 8ರಿಂದ ರಾತ್ರಿ 8ರ ವರೆಗೆ ಸದಸ್ಯತ್ವ ಅಭಿಯಾನ ನಡೆಯಬೇಕಾಗಿದೆ. ಪ್ರತಿ ಬೂತಿನಲ್ಲಿ ಕನಿಷ್ಠ ಪಕ್ಷ 200ರ ಗಡಿ ದಾಟಬೇಕು ಎಂದರು.

ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಾನಂದ್ ಶೆಟ್ಟಿ, ಉಪ ಮೇಯರ್‌ ದುರ್ಗಮ್ಮ ಶಶಿಕಾಂತ ಬೀಜವಾಡ, ಮಹೇಂದ್ರ ಕೌತಾಳ, ಮಂಡಲ ಅಧ್ಯಕ್ಷರಾದ ಸಂತೋಷ ಚವ್ಹಾಣ, ಬಸವರಾಜ್ ಗರಗ, ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ, ಜಿಲ್ಲಾ ವಕ್ತಾರ ರವಿ ನಾಯಕ, ರಾಜು ಜರತಾರಘರ್, ಹನುಮಂತಪ್ಪ ಹರಿವಾಣ, ಜಗದೀಶ ಬಳ್ಳಾನವರ, ವಿನೋದ ರೇವಣಕರ, ಕೃಷ್ಣ ಗಂಡಗಾಳೆಕರ, ಸೀಮಾ ಲದ್ವ, ಅಕ್ಕಮಹಾದೇವಿ ಹೆಗಡೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.