ಒಂದೂವರೆ ಕೆಜಿ ತೂಕದ ಶಿಶುವಿಗೆ ಎಂಟು ಗಂಟೆಗಳ ಯಶಸ್ವಿ ಶಸ್ತ್ರಚಿಕಿತ್ಸೆ

| Published : Mar 13 2025, 12:49 AM IST

ಒಂದೂವರೆ ಕೆಜಿ ತೂಕದ ಶಿಶುವಿಗೆ ಎಂಟು ಗಂಟೆಗಳ ಯಶಸ್ವಿ ಶಸ್ತ್ರಚಿಕಿತ್ಸೆ
Share this Article
  • FB
  • TW
  • Linkdin
  • Email

ಸಾರಾಂಶ

ಒಂದೂವರೆ ಕೆಜಿ ತೂಕದ ನವಜಾತ ಶಿಶುವಿಗೆ ಎಂಟು ಗಂಟೆಗಳ ಕಾಲ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸುವಲ್ಲಿ ನಗರದ ಪ್ರತಿಷ್ಠಿತ ಖಾಸಗಿ ಜೀವನ್ ಆಸ್ಪತ್ರೆ ಗಮನಾರ್ಹ ವೈದ್ಯಕೀಯ ಮೈಲಿಗಲ್ಲು ಸಾಧಿಸಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಒಂದೂವರೆ ಕೆಜಿ ತೂಕದ ನವಜಾತ ಶಿಶುವಿಗೆ ಎಂಟು ಗಂಟೆಗಳ ಕಾಲ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸುವಲ್ಲಿ ನಗರದ ಪ್ರತಿಷ್ಠಿತ ಖಾಸಗಿ ಜೀವನ್ ಆಸ್ಪತ್ರೆ ಗಮನಾರ್ಹ ವೈದ್ಯಕೀಯ ಮೈಲಿಗಲ್ಲು ಸಾಧಿಸಿದೆ.

ಜೀವನ್ ಆಸ್ಪತ್ರೆಯ ಮುಖ್ಯಸ್ಥ ಹಾಗೂ ಹೆಸರಾಂತ ಪ್ರಸೂತಿ ತಜ್ಞ ಡಾ. ಐ.ಎಸ್.ರಾವ್ ಪತ್ರಿಕೆಯೊಂದಿಗೆ ಮಾತನಾಡಿ, ಮೊದಲ ಬಾರಿಗೆ ನಮ್ಮ ತಜ್ಞ ಶಸ್ತ್ರಚಿಕಿತ್ಸಕರ ತಂಡವು ಟ್ರಾಕಿಯೊ ಸೊಫೇಜಿಯಲ್ ಫಿಸ್ಟುಲಾ (ಟಿಇಎಫ್) ಎಂಬ ವಿಚಿತ್ರ ಕಾಯಿಲೆ ಪೀಡಿತ, ಅವಧಿ ಪೂರ್ವ ಜನಿಸಿದ ನವಜಾತ ಶಿಶುವಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದೆ. 1.5 ಕೆಜಿ ತೂಕವಿದ್ದರೂ ಮಗು ಸತತವಾಗಿ 8 ಗಂಟೆಗಳ ಕಾಲ ಸಂಕೀರ್ಣವಾದ ಶಸ್ತ್ರಚಿಕಿತ್ಸೆಗೆ ಒಳಗಾಗಿ ಸದ್ಯ ಚೇತರಿಸಿಕೊಂಡಿದೆ ಎಂದು ಪತ್ರಿಕೆಗೆ ತಿಳಿಸಿದರು.

ನಗರದ ಇಂಜನಿಯರ್ ದಂಪತಿಗೆ ಈ ಮಗು ಜನಿಸಿದ್ದು, ಮಗುವಿನ ಬೆಳವಣಿಗೆಗೆ ಮತ್ತು ಆರೈಕೆ ಮಾಡುವುದು ಸಾಕಷ್ಟು ಕಠಿಣವಾಗುತ್ತಿತ್ತು. ಮಗು ಜೀವಿಸುವುದೂ ಸಹಾ ಕಷ್ಟಕರವಾಗಿತ್ತು. ಈಗ ಶಸ್ತ್ರ ಚಿಕಿತ್ಸೆಯಿಂದ ಈ ಮಗು ಮುಂದೆ ಸಾಮಾನ್ಯ ಮಕ್ಕಳಂತೆ ಜೀವನ ಸಾಗಿಸಬಹುದಾಗಿದೆ ಎಂದರು.

ನವಜಾತ ಶಿಶುವಿಗೆ ಮಾಡಿದ ಯಶಸ್ವಿ ಶಸ್ತ್ರಚಿಕಿತ್ಸೆಯಲ್ಲಿ ಸಮರ್ಪಿತ ವೈದ್ಯ ಡಾ. ಶೇಷಾದ್ರಿ ಮತ್ತು ತಂಡ. ಅರಿವಳಿಕೆ ತಂಡ: ಡಾ. ಅಮೃತ್ ಮತ್ತು ಡಾ. ಶಿವಕುಮಾರ್. ಎನ್ಐಸಿಯು ತಂಡ: ಡಾ. ಶ್ರೀಕಾಂತ್ ರೆಡ್ಡಿ ಮತ್ತು ತಂಡದ ಜೊತೆಗೆ ನಿರಂತರ ಬೆಂಬಲ ಮತ್ತು ಮಾರ್ಗದರ್ಶನ ನೀಡಿದ ಡಾ. ಐ.ಎಸ್. ರಾವ್ ಮತ್ತು ಡಾ. ರಾಜಲಕ್ಷ್ಮೀ ನೆರವಾಗಿದ್ದರು.

ಮಗುವಿಗೆ ಶಸ್ತ್ರಚಿಕಿತ್ಸೆ ಯಶಸ್ವಿ ಆಗಲು ಶ್ರಮಿಸಿದ ಎಲ್ಲಾ ವೈದ್ಯ ತಂಡ ಹಾಗೂ ಸಿಬ್ಬಂದಿ ಮತ್ತು ಓಟಿ ತಂಡಕ್ಕೆ ಡಾ. ಐ. ಎಸ್. ರಾವ್ ಹಾಗೂ ಡಾ. ರಾಜಲಕ್ಷ್ಮೀ ರಾವ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಜೀವನ್ ಆಸ್ಪತ್ರೆಯ ವೈದ್ಯರ ಮೇಲೆ ನಂಬಿಕೆ ಇಟ್ಟ ಪೋಷಕರಿಗೂ ಇದೇ ವೇಳೆ ಕೃತಜ್ಞತೆ ಹೇಳಿದ ಡಾ. ಐ. ಎಸ್. ರಾವ್ ನಿಮ್ಮ ನಂಬಿಕೆಯು ನಮಗೆ ಇನ್ನಷ್ಟು ಶ್ರಮಿಸುವುದನ್ನು ಮುಂದುವರಿಸಲು ಸ್ಫೂರ್ತಿ ನೀಡುತ್ತದೆ ಎಂದು ಸ್ಮರಿಸಿದರು.