ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ನಗರದ ಶ್ರೀ ಹಾಸನಾಂಬ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಿಂದ ಹಾಸನದಲ್ಲಿ ಮೊದಲ ಬಾರಿಗೆ ಎದೆಗೂಡಿನ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಆಸ್ಪತ್ರೆ ಮುಖ್ಯಸ್ಥ ಹಾಗೂ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಬಸವರಾಜು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಅರಕಲಗೂಡು ತಾಲೂಕು ಮೂಲದ ಶಿವರುದ್ರಪ್ಪ ಎಂಬ ರೋಗಿಯೂ ಜುಲೈ 21ರಂದು ಶ್ರೀ ಹಾಸನಾಂಬ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಇವರಿಗೆ ಕಳೆದ 12 ವರ್ಷದಿಂದ ಬಲಭಾಗದ ಎದೆಭಾಗದಲ್ಲಿ ನೋವು ಕಾಣಿಸಿಕೊಂಡಿರುತ್ತದೆ. ಹಲವಾರು ಕಡೆ ತೋರಿಸಿದರೂ ಕಾಯಿಲೆ ಏನೆಂಬುದು ಗೊತ್ತಾಗಿರಲಿಲ್ಲ, ಕಳೆದ ಎರಡು ತಿಂಗಳಿಂದ ನೋವು ತೀವ್ರವಾಗಿ ಶ್ರೀ ಹಾಸನಾಂಬ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಹೊರರೋಗಿಯಾಗಿ ಬಂದು ತೋರಿಸಿರುತ್ತಾರೆ. ಅವರು ರೋಗಿಯನ್ನು ಪರೀಕ್ಷಿಸಿ ಎದೆಯ CT SCAN ಮಾಡಿಸಲು ತಿಳಿಸಿದೆ ಎಂದರು.CT SCAN REPORT ನಲ್ಲಿ ಬಲಭಾಗದ ಶ್ವಾಸಕೋಶದಲ್ಲಿ ಒಂದು ಅತೀ ದೊಡ್ಡ 16x8 CM ಗಾತ್ರದ ಗೆಡ್ಡೆ ಕಂಡು ಬಂದಿರುತ್ತದೆ. ಆದ್ದರಿಂದ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಬಸವರಾಜ ಅವರು ರೋಗಿಯ ಕಡೆಯವರಿಗೆ ಎದೆ ಗೂಡಿನ ಶಸ್ತ್ರಚಿಕಿತ್ಸೆ ಅತಿ ದೊಡ್ಡ ಶಸ್ತ್ರ ಚಿಕಿತ್ಸೆ ಮಾಡಿ ಶ್ವಾಸಕೋಶದಿಂದ ಬೇರ್ಪಡಿಸಿ ತೆಗೆಯಬೇಕು ಎಂದ ತಿಳಿಸಿರುತ್ತಾರೆ. ರೋಗಿಯ ಕಡೆಯವರು ಶಸ್ತ್ರಚಿಕಿತ್ಸೆಗೆ ಸಮ್ಮತಿಸಿದ್ದ 23/07/2025ರಂದು ಎದೆಗೂಡಿನ ಶಸ್ತ್ರಚಿಕಿತ್ಸೆ ಮಾಡುವಾಗ ಬಲಭಾಗದ ಶ್ವಾಸಕೋಶದಲ್ಲಿ ಎರಡು ದೊಡ್ಡ ಗಾತ್ರದ ಗೆಡ್ಡೆಗಳು ಕಂಡುಬಂದಿರುತ್ತವೆ.ಅವುಗಳನ್ನು ಬಲಭಾಗದ ಶ್ವಾಸಕೋಶದಿಂದ ಬೇರ್ಪಡಿಸಿ ಮತ್ತು ಶ್ವಾಸಕೋಶದ ಸ್ವಲ್ಪ ಭಾಗವನ್ನು ಕೂಡ ಯಶಸ್ವಿಯಾಗಿ ತೆಗೆದಿರುತ್ತಾರೆ. ನಂತರ ಉಳಿದ ಶ್ವಾಸಕೋಶಕ್ಕಾಗಲೀ ಹೃದಯ ಹಾಗೂ ಇತರ ಅಂಗಗಳಿಗೆ ಯಾವುದೇ ಹಾನಿ ಆಗದಂತೆ ಯಶಸ್ವಿ ಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದರು.
ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಬಸವರಾಜ ಜಿ. ಎನ್ ಹಾಗೂ ಅರವಳಿಕೆ ತಜ್ಞ ಡಾ. ಶಿವಕುಮಾರ್ ನೇತೃತ್ವದಲ್ಲಿ ಯಶಸ್ವಿಯಾಗಿರುತ್ತದೆ. ಶಸ್ತ್ರಚಿಕಿತ್ಸೆ ಫಲಕಾರಿಯಾದ ನಂತರ ದಿನಗಳ ಕಾಲ ರೋಗಿಯು ತೀವ್ರ ನಿಗಾ ಘಟಕದಲ್ಲಿ ನುರಿತ ತಜ್ಞರಾದ ಡಾ. ಪ್ರೇಮಾ ಗುರುನಾಥ್ ಬ್ಯಾಹಟ್ಟಿ ಇವರ ನೇತೃತ್ವದಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಹಾಗೂ ಇವರ ಚಿಕಿತ್ಸೆಗೆ ಆಸ್ಪತ್ರೆಯ ಸಿಬ್ಬಂದಿಗಳೂ ಕೂಡ ಸಹಕರಿಸಿದ್ದಾರೆ ಎಂದರು ರೋಗಿಯೂ ಸಂಪೂರ್ಣವಾಗಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇದು ಅತ್ಯುನ್ನತ ಶ್ರೇಣಿಯ ಶಸ್ತ್ರಚಿಕಿತ್ಸೆಯಾಗಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಡಾ. ಪ್ರೇಮ, ಡಾ. ಅಶ್ವಿನಿ ಇತರರು ಉಪಸ್ಥಿತರಿದ್ದರು.