ದುಶ್ಚಟಗಳಿಂದ ಕುಟುಂಬ ಹಾಗೂ ಸಾಮಾಜಿಕ ಘನತೆಗೆ ಧಕ್ಕೆಯುಂಟಾಗುತ್ತದೆ. ಇದರಿಂದ ಮಾನ- ಪ್ರಾಣ ಕಳೆದುಕೊಳ್ಳುವಂತೆ ಆಗಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಜಿಲ್ಲಾ ನಿರ್ದೇಶಕ ಲಕ್ಷ್ಮಣ ಎಂ. ಹೇಳಿದ್ದಾರೆ.
- ಹೊನ್ನಾಳಿ ಹಿರೇಕಲ್ಮಠದಲ್ಲಿ ಗಾಂಧಿ ಸ್ಮೃತಿ- ವ್ಯಸನಮುಕ್ತ ಸಾಧಕರ ಸಮಾವೇಶ ಉದ್ಘಾಟನೆ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ದುಶ್ಚಟಗಳಿಂದ ಕುಟುಂಬ ಹಾಗೂ ಸಾಮಾಜಿಕ ಘನತೆಗೆ ಧಕ್ಕೆಯುಂಟಾಗುತ್ತದೆ. ಇದರಿಂದ ಮಾನ- ಪ್ರಾಣ ಕಳೆದುಕೊಳ್ಳುವಂತೆ ಆಗಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಜಿಲ್ಲಾ ನಿರ್ದೇಶಕ ಲಕ್ಷ್ಮಣ ಎಂ. ಹೇಳಿದರು.ಪಟ್ಟಣದ ಹಿರೇಕಲ್ಮಠದ ಸಮುದಾಯ ಭವನದಲ್ಲಿ ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧಿ ಸ್ಮೃತಿ ಮತ್ತು ವ್ಯಸನಮುಕ್ತ ಸಾಧಕರ ಸಮಾವೇಶದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಗಂಡ, ಹೆಂಡತಿ, ಮಕ್ಕಳೊಂದಿಗೆ ಸುಖ ಜೀವನ ಸಾಗಿಸಬೇಕು. ಆದರೆ, ಕುಡಿತದ ಚಟಕ್ಕೆ ದಾಸರಾಗಿ ಮೈತುಂಬ ಸಾಲ ಮಾಡಿಕೊಂಡು ನೆರೆಹೊರೆಯವರಿಂದ ಹಾಗೂ ಸಮಾಜದಿಂದಲೂ ಬೆಲೆ ಸಿಗದಂತಹ ಜೀವನ ನಡೆಸುವುವುದ ಸರಿಯಲ್ಲ. ಇಂಥ ನರಕ ಯಾತನೆ ಅನುಭವಿಸುತ್ತಿರುವವರನ್ನು ಗ್ರಾಮ, ಪಟ್ಟಣ, ನಗರಗಳಲ್ಲಿ ಕಾಣುತ್ತೇವೆ. ಅಂತಹವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ. ಆ ಮೂಲಕ ಸ್ವಯಂಪ್ರೇರಿತರಾಗಿ ಕುಡಿತದ ಚಟವನ್ನು ತೊರೆದು ಸಮಾಜದಲ್ಲಿ ಗೌರವದಿಂದ ಬದುಕುತ್ತಿದ್ದಾರೆ. ಇದು ಅನುಕರಣೀಯ ಎಂದರು.ಅಖಿಲ ಕರ್ನಾಟಕ ಜನಜಾಗೃತಿಯ ಸ್ಥಾಪಕ ಅಧ್ಯಕ್ಷ ಡಾ.ಸುರೇಶ್ ಹೊಸಕೆರೆ ಮಾತನಾಡಿ, ಹಲವಾರು ಕಾರಣಗಳಿಂದ ಜನರು ಕುಡಿತದಂತಹ ದುಶ್ಚಟಗಳಿಗೆ ದಾಸರಾಗುತ್ತಾರೆ. ದುಡಿದ ಹಣವನ್ನೆಲ್ಲ ಮದ್ಯ ಸೇವನೆ ಚಟಕ್ಕೆ ವ್ಯಯ ಮಾಡಿ ಸಂಸಾರದಲ್ಲಿ ನೆಮ್ಮದಿ ಕಳೆದುಕೊಳ್ಳುತ್ತಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗೆಡೆ ಅವರ ಆಶಯದಂತೆ ಕೈಗೊಂಡಿರುವ ಮದ್ಯವರ್ಜನಾ ಶಿಬಿರದ ಕನಸು ಇಂದು ನಾಡಿನಲ್ಲಿ ಪರಿಣಾಮಕಾರಿಯಾಗಿದೆ. ಶಿಬಿರದಲ್ಲಿ ಪಾಲ್ಗೊಂಡ ಜನರು ದುಶ್ಚಟಗಳನ್ನು ಬಿಟ್ಟು ಉತ್ತಮವಾಗಿ ಜೀವನ ಸಾಗಿಸುವ ಮೂಲಕ ಸಾಧಕರಾಗಿರುವವರನ್ನು ಗೌರವಿಸುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿ ಹನುಮಂತಪ್ಪ ಕತ್ತಿಗಿ ಅವರು ಗಾಂಧೀಜಿಯ ಜೀವನ ಚರಿತ್ರೆಯನ್ನು ಜನರಿಗೆ ತಿಳಿಸಿದರು. ಎಂ.ಯು. ನಟರಾಜ್ ನ್ಯಾಮತಿ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆ ಸದಸ್ಯರಾದ ಬಿ.ಎಲ್. ಕುಮಾರಸ್ವಾಮಿ, ಲಿಂಗರಾಜು ಸಿ. ಹವಳದ, ಕತ್ತಿಗಿ ನಾಗರಾಜ್, ಮಂಜಪ್ಪ ಸರಳಿನ ಮನೆ, ಶ್ರೀನಿವಾಸ್ ರಾವ್, ಜಿ.ವಿ.ರುದ್ರೇಶಪ್ಪ, ಸುರೇಶ್ ಕುರುವ, ರಮೇಶ್ ಬಿ. ಕತ್ತಿಗೆ, ಯೋಗೇಶ್ ಜಿ.ಬಿ, ಸಿದ್ದಣ್ಣ ಎಸ್.ಎಚ್. ಎಲ್.ಜಿ. ಮಧುಕರ್ ಇತರರು ಉಪಸ್ಥಿತರಿದ್ದರು.
- - -(ಕೋಟ್)
ಮಹಾತ್ಮ ಗಾಂಧೀಜಿಯವರು ದೇಶ ಉದ್ಧಾರ ಆಗಬೇಕಾದರೆ ಗ್ರಾಮಗಳ ಅಭಿವೃದ್ಧಿ ಆಗಬೇಕು, ದೇಶ ಸ್ವಚ್ಛವಾಗಿ ಇರಬೇಕಾದರೆ ಗ್ರಾಮಗಳು ಸ್ವಚ್ಛವಾಗಬೇಕು, ಮದ್ಯಮುಕ್ತ ಗ್ರಾಮಗಳಾಗಬೇಕು ಎಂದು ಬಯಸಿದ್ದರು. ಅದರಂತೆ ಗಾಂಧೀಜಿ ಪರಿಕಲ್ಪನೆಯಲ್ಲಿ ಶ್ರೀ ಕ್ಷೇತ್ರದ ಡಾ.ವೀರೇಂದ್ರ ಹೆಗ್ಗಡೆಯವರು ಮದ್ಯನರ್ಜನ ಶಿಬಿರಗಳನ್ನು ರಾಜ್ಯಾದಂತ ಆಯೋಜಿಸುವ ಮೂಲಕ ಸಮಾಜ ಸೇವೆ ಮಾಡುತ್ತಿದ್ದಾರೆ.- ಶಾಂತರಾಮ್, ತಾಲೂಕು ಯೋಜನಾಧಿಕಾರಿ
- - --9ಎಚ್.ಎಲ್.ಐ2:
ಕಾರ್ಯಕ್ರಮವನ್ನು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಜಿಲ್ಲಾ ನಿರ್ದೇಶಕ ಲಕ್ಷ್ಮಣ್ ಎಂ. ಉದ್ಘಾಟಿಸಿದರು.