ಸಾರಾಂಶ
ಸಿಂದಗಿ: ಸಿಂದಗಿ ಪುರಸಭೆಯಲ್ಲಿ ಲೋಪದೋಷಗಳು ಹೆಚ್ಚಾಗಿವೆ ಎಂದು ದೂರುಗಳು ಬಂದ ಹಿನ್ನಲೆಯಲ್ಲಿ ಪುರಸಭೆ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದರು. ದೂರುಗಳ ಆಧಾರದ ಮೇಲೆ ದಾಳಿ ನಡೆಸಿದಾಗ ಜಿಲ್ಲಾದ್ಯಂತ ಎಲ್ಲ ಸರಕಾರಿ ಕಚೇರಿಗಳಲ್ಲಿ ಕೆಲಸ ಕಾರ್ಯಗಳ ಬಗ್ಗೆ ನಿಗಾ ಇಡಬೇಕೆನ್ನುವ ಆದೇಶವಿರುವುದಾಗಿ ಲೋಕಾಯುಕ್ತ ಎಸ್ಪಿ ಟಿ.ಮಲ್ಲೇಶ ಹೇಳಿದರು.

ಪಟ್ಟಣದ ಪುರಸಭೆ ಕಾರ್ಯಾಲಯಕ್ಕೆ ಏಕಾಏಕಿ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳು, ಪರಿಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಿದರು. ಇಲ್ಲಿನ ವಾತಾವರಣ ಹದಗೆಟ್ಟಿದೆ. ಜನನ ಮತ್ತು ಮರಣ ದಾಖಲಾತಿ ನೀಡಿವುದಕ್ಕೆ ತಡ ಮಾಡುತ್ತಿದ್ದಾರೆ.ಈ ಬಗ್ಗೆ ದೂರುಗಳು ಬಂದಿದ್ದು, ಮುಖ್ಯವಾಗಿ ಸ್ವಚ್ಛತೆ ಇಲ್ಲದಿರುವುದು ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ದಾಳಿ ಮಾಡಿದ್ದು, ಆಡಳಿತ ಚುರುಕುಗೊಳಿಸಲು ನಾವು ದಾಳಿ ಮಾಡಿದ್ದೇವೆ ಎಂದರು.ಸಿಬ್ಬಂದಿಗೆ ತರಾಟೆ:
ಕಚೇರಿಯಲ್ಲಿ ಸಿಬ್ಬಂದಿಗೆ ಲೋಕಾ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡ ಘಟನೆ ಕೂಡ ನಡೆದಿದೆ. ಊರಿನ ಶುಚಿತ್ವ ಕಾಪಾಡಬೇಕಾದ ಪುರಸಭೆಯೇ ಮೊದಲು ಶುಚಿತ್ವದಿಂದ ಕೂಡಿಲ್ಲ. ಊರನ್ನು ಹೇಗೆ ಸ್ವಚ್ಛ ಇಡುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು. ನಿಮ್ಮ ಮನೆಯನ್ನು ಹೀಗೆ ಇಟ್ಟುಕೊಳ್ಳುತ್ತೀರಾ ಎಂದು ಪುರಸಭೆ ಮುಖ್ಯ ಅಧೀಕ್ಷಕರಿಗೆ ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳು ಯಾವ ಸಮಯಕ್ಕೆ ಕಚೇರಿಗೆ ಬುರುತ್ತಾರೆ ಎಂದು ನೋಟಿಸ್ ಬೋರ್ಡ್ ಗೆ ಹಾಕುವಂತೆ ಸಿಬ್ಬಂದಿಗೆ ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ಸುರೇಶರೆಡ್ಡಿ ಎಂ.ಎಸ್, ಆನಂದ ಡೋಣಿ, ಪಿಎಸ್‌ಐ ಆನಂದ ಠಕಳೆ ಇದ್ದರು.