ಸಾರಾಂಶ
ಜನಪ್ರಿಯತೆ ಪಡೆದ ಯಾವುದೇ ಕಲಾವಿದರಾಗಲಿ, ದಾರ್ಶನಿಕರಾಗಿರಲಿ ಅವರನ್ನು ಒಂದು ಜಾತಿಗೆ ಸೀಮಿತರನ್ನಾಗಿ ಮಾಡಬಾರದು. ಅವರು ಸೇವಕರಾಗಿ, ಆದರ್ಶ ವ್ಯಕ್ತಿಗಳಾಗಿ ಸಮಾಜಕ್ಕೆ ಬೆಳಕು ತೋರಿದಂತಹ ಮಹಾನೀಯರು ಎಂದು ದಾವಣಗೆರೆ ವಿ.ವಿ.ಯ ಮಾಜಿ ಸಿಂಡಿಕೇಟ್ ಸದಸ್ಯ ಮಾಡಾಳು ಮಲ್ಲಿಕಾರ್ಜುನ್ ಚನ್ನಗಿರಿಯಲ್ಲಿ ಹೇಳಿದ್ದಾರೆ.
- ಕಿಚ್ಚ ಸುದೀಪ್ ಸೇವಾ ಸಮಿತಿಯಿಂದ ಹುಟ್ಟುಹಬ್ಬಕಾರ್ಯಕ್ರಮದಲ್ಲಿ ಮಾಡಾಳು ಮಲ್ಲಿಕಾರ್ಜುನ - - - ಕನ್ನಡಪ್ರಭ ವಾರ್ತೆ ಚನ್ನಗಿರಿ
ಜನಪ್ರಿಯತೆ ಪಡೆದ ಯಾವುದೇ ಕಲಾವಿದರಾಗಲಿ, ದಾರ್ಶನಿಕರಾಗಿರಲಿ ಅವರನ್ನು ಒಂದು ಜಾತಿಗೆ ಸೀಮಿತರನ್ನಾಗಿ ಮಾಡಬಾರದು. ಅವರು ಸೇವಕರಾಗಿ, ಆದರ್ಶ ವ್ಯಕ್ತಿಗಳಾಗಿ ಸಮಾಜಕ್ಕೆ ಬೆಳಕು ತೋರಿದಂತಹ ಮಹಾನೀಯರು ಎಂದು ದಾವಣಗೆರೆ ವಿ.ವಿ.ಯ ಮಾಜಿ ಸಿಂಡಿಕೇಟ್ ಸದಸ್ಯ ಮಾಡಾಳು ಮಲ್ಲಿಕಾರ್ಜುನ್ ಹೇಳಿದರು.ಸೋಮವಾರ ಪಟ್ಟಣದ ಮಹಾತ್ಮ ಗಾಂಧಿ ವೃತ್ತದಲ್ಲಿ "ಕಿಚ್ಚ " ಸುದೀಪ್ ಸೇವಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಚಿತ್ರನಟ ಸುದೀಪ್ ಅವರ 51ನೇ ಹುಟ್ಟುಹಬ್ಬ ಸಮಾರಂಭದಲ್ಲಿ ದೀಪ ಬೆಳಗಿಸಿ, ಬೃಹತ್ ಕೇಕ್ ಕತ್ತರಿಸಿ ಅವರು ಮಾತನಾಡಿದರು. ಡಾ.ರಾಜ್ ಕುಮಾರ್ ಅವರಂಥ ಚಿತ್ರನಟ ಸಮಾಜಕ್ಕೆ ಆದರ್ಶವಾಗುತ್ತಾರೆ. ಅವರು ಸದಭಿರುಚಿ ಚಿತ್ರಗಳ ಮೂಲಕ ಎಲ್ಲ ಜನರ ಮನದಾಳದಲ್ಲಿ ಉಳಿದಿದ್ದಾರೆ. ಅದೇ ರೀತಿ ಸುದೀಪ್ ಸಹಾ ಅಭಿನಯದ ಮೂಲಕ ರಾಜ್ಯದ ಜನತೆ ಮನಗೆದ್ದಂತಹ ಪ್ರತಿಭಾವಂತ ಕಲಾವಿದ ಎಂದು ಶ್ಲಾಘಿಸಿದರು.
ಸಮಾರಂಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ವಡ್ನಾಳ್ ಜಗದೀಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹೊದಿಗೆರೆ ರಮೇಶ್, ತಾಪಂ ಮಾಜಿ ಅಧ್ಯಕ್ಷ ಲೋಹಿತ್ ಕುಮಾರ್, ಕನ್ನಡನಾಡು ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಕೆ.ವಿ. ಕೃಷ್ಣಮೂರ್ತಿ, ಬುಳಸಾಗರ ನಾಗರಾಜ್, ಮೆದಿಕೆರೆ ಸಿದ್ದೇಶ್, ಸರ್ದಾರ್ ಅಹಮದ್, ನಟರಾಜ ರಾಯ್ಕರ್, ಪಿ.ಬಿ.ನಾಯಕ, ಅಣ್ಣೋಜಿ ರಾವ್, ಯೋಗರಾಜ್, ಸಚಿನ್, ಶಶಿಕಲಾ ನಾಗರಾಜ್, ಮಾಚನಾಯ್ಕನಹಳ್ಳಿ ಮಂಜುನಾಥ್, ಎ.ಸಿ.ಚಂದ್ರು, ನವೀನ್, ಮಹಾರುದ್ರಪ್ಪ, ಅಭಿಮಾನಿಗಳು ಭಾಗವಹಿಸಿದ್ದರು.- - - -2ಕೆಸಿಎನ್‌ಜಿ1:
ಚನ್ನಗಿರಿ ಪಟ್ಟಣದ ಮಹಾತ್ಮ ಗಾಂಧಿ ವೃತ್ತದಲ್ಲಿ ಕಿಚ್ಚ ಸುದೀಪ್ ಸೇವಾ ಸಮಿತಿ ವತಿಯಿಂದ ಚಿತ್ರನಟ ಸುದೀಪ್ ಹುಟ್ಟುಹಬ್ಬವನ್ನು ಬೃಹತ್ ಕೇಕ್ ಕತ್ತರಿಸಿ, ಹಂಚುವ ಮೂಲಕ ಆಚರಿಸಲಾಯಿತು.