ಸಾರಾಂಶ
ಸುಧಾಮೂರ್ತಿ ಅವರು ಮೊದಲಿನಿಂದಲೂ ತಮ್ಮ ಅನೇಕ ಸಮಾಜ ಸುಧಾರಣಾ ಸೇವೆಗೆ ಹೆಸರಾದವರು. ಅವರಿಗೆ ಮಹಿಳಾ ಸಬಲೀಕರಣದ ಗುರಿಯಿದೆ. ಗ್ರಾಮೀಣ ಜನರಲ್ಲಿ ಶಿಕ್ಷಣ, ಸಾಮಾಜಿಕ ನೈರ್ಮಲ್ಯ, ಬಡತನ ನಿರ್ಮೂಲನೆ ಮತ್ತು ಇನ್ನೂ ಅನೇಕ ವಿಷಯಗಳ ಕುರಿತು ಅವರ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಗ್ರಾಮದ ಯುವ ಮುಖಂಡ ಶಂಕರ ಪಡತರೆ ಹೇಳಿದರು.
ಕನ್ನಡಪ್ರಭ ವಾರ್ತೆ ಲೋಕಾಪುರ
ಸುಧಾಮೂರ್ತಿ ಅವರು ಮೊದಲಿನಿಂದಲೂ ತಮ್ಮ ಅನೇಕ ಸಮಾಜ ಸುಧಾರಣಾ ಸೇವೆಗೆ ಹೆಸರಾದವರು. ಅವರಿಗೆ ಮಹಿಳಾ ಸಬಲೀಕರಣದ ಗುರಿಯಿದೆ. ಗ್ರಾಮೀಣ ಜನರಲ್ಲಿ ಶಿಕ್ಷಣ, ಸಾಮಾಜಿಕ ನೈರ್ಮಲ್ಯ, ಬಡತನ ನಿರ್ಮೂಲನೆ ಮತ್ತು ಇನ್ನೂ ಅನೇಕ ವಿಷಯಗಳ ಕುರಿತು ಅವರ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಗ್ರಾಮದ ಯುವ ಮುಖಂಡ ಶಂಕರ ಪಡತರೆ ಹೇಳಿದರು.ಸಮೀಪದ ಕಸಬಾ ಜಂಬಗಿ ಗ್ರಾಮದ ಎಲ್ಲಾ ಶಾಲೆಗಳಿಗೆ ಸುಧಾಮೂರ್ತಿ ಅವರ ಹುಟ್ಟು ಹಬ್ಬದ ನಿಮಿತ್ತ ಬುಕ್ ಮತ್ತು ಫೆನ್ ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿದ ಅವರು, ಜನಸಾಮಾನ್ಯನ ಏಳಿಗೆಗಾಗಿ ಹಲವು ಸಂಘ ಸಂಸ್ಥೆಗಳೊಂದಿಗೆ ದುಡಿದವರು ಇನ್ಫೋಸಿಸ್ ಪ್ರತಿಷ್ಠಾನದ ಮೂಲಕ, ಸಮಾಜ ಸೇವೆಯೊಂದಿಗೆ, ಜನ ಸಾಮಾನ್ಯರ ಸಮಸ್ಯೆಗಳಿಗೆ ಮಿಡಿದವರು ಸುಧಾಮೂರ್ತಿ ಅವರು ಎಂದರು.
ಸುಧಾಮೂರ್ತಿ ಅಭಿಮಾನ ಬಳಗದವರಾದ ನಿಸಾರ ಪಟೇಲ್, ಧಿರೇಶ ದೊಡಮನಿ, ಹಸನ್ ಲಾಟಿ, ವಿಜಯಕುಮಾರ ಹುಗ್ಗಿ, ಶಿವಾನಂದ ರಡರಟ್ಟಿ, ಅನೀಲ ಚಂದನಶಿವ, ಸಂತೋಷ ಚಂದನಶಿವ, ಲಕ್ಷö್ಮಣ ಮಾಳಿ, ಲಕ್ಷö್ಮಣ ಚಂದನಶಿವ ಸುಧಾ ಮೂರ್ತಿ ಅಭಿಮಾನದ ಬಳಗದ ಸರ್ವ ಸದಸ್ಯರು ಇದ್ದರು.