ಸಾರಾಂಶ
ಏ. 26ರಿಂದ ಮೇ 3ರ ವರೆಗೆ ನಡೆಯುವ ಉರೂಸ್ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಲಾಗಿದೆ. 29ರಂದು ಅನ್ನ ಸಂತರ್ಪಣೆ ನಡೆಯಲಿದೆ.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಸಮೀಪದ ಎಮ್ಮೆ ಮಾಡಿನ ಸೂಫಿ ಶಾಹಿದ್ ವಲಿಯುಲ್ಲಾಹಿ ಅವರ ಉರೂಸ್ ಸಮಾರಂಭ ಏ. 26ರಿಂದ ಆರಂಭಗೊಳ್ಳಲಿರುವ ಅಂಗವಾಗಿ ದಿನಾಂಕ ನಿಗದಿಯ ಉರೂಸ್ ಕುರಿಕ್ಕಲ್ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ದಫ್ ಪ್ರದರ್ಶನದೊಂದಿಗೆ ಸೂಫಿ ಶಾಹಿದ್ ಅವರ ದರ್ಗಾ ತೆರಳಿದ ಸಮುದಾಯ ಬಾಂಧವರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.ಸಯ್ಯದ್ ಇಲ್ಯಾಸ್ ಅಲ್ ಹೈದರೂಸಿ ತಂಗಳ್ ಹಾಗೂ ಮಸೀದಿಯ ಖತೀಬರಾದ ಹಾಫಿದ್ ಜುನೇದ್ ಜಲಾಲಿ ಅವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭ ಎಮ್ಮೆಮಾಡು ಜಮಾಯತ್ ಅಧ್ಯಕ್ಷ ಅಬೂಬಕರ್ ಸಖಾಫಿ ಮಾತನಾಡಿ ಏ. 26ರಿಂದ ಮೇ 3ರವರೆಗೆ ನಡೆಯುವ ಉರೂಸ್ ಕಾರ್ಯಕ್ರಮವನ್ನು ವಿಜೃಂಬಣೆಯಿಂದ ನಡೆಸಲು ತೀರ್ಮಾನಿಸಲಾಗಿದೆ. ಇದರ ಅಂಗವಾಗಿ ಸಂಪ್ರದಾಯದಂತೆ ಉರೂಸ್ ಕುರಿಕ್ಕಲ್ ಕಾರ್ಯಕ್ರಮ ನಡೆಸಲಾಗಿದೆ ಎಂದರು.
ಜಮಾಯತ್ ಉಪಾಧ್ಯಕ್ಷ ಮಹಮ್ಮದ್ ಅಶ್ರಫ್ ಮಾತನಾಡಿ, ಶಾಲಾ, ಕಾಲೇಜು, ಮದರಸ ವಿದ್ಯಾರ್ಥಿಗಳ ರಜೆಯನ್ನು ಪರಿಗಣಿಸಿ ಉರೂಸ್ ಕಾರ್ಯಕ್ರಮವನ್ನು ಏಪ್ರಿಲ್ 26 ರಿಂದ ಮೇ 3 ರವರೆಗೆ ನಡೆಸಲು ತೀರ್ಮಾನಿಸಲಾಗಿದೆ. ಏ. 29 ರಂದು ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉರೂಸ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡುವಂತೆ ಕೋರಿದರು. ಜಮಾಯತ್ ಕಾರ್ಯದರ್ಶಿ ಸಿ. ಕೆ. ಹಾರೀಸ್, ಸೈಯದ್ ಅಜೀಜ್ ತಂಗಳ್, ಜಮಾಯತ್ ಪದಾಧಿಕಾರಿಗಳು ಪಾಲ್ಗೊಂಡಿದ್ದರು.