ಹಿಂದೂ ಕಾರ್ಯಕರ್ತ ಎಂಬ ಕಾರಣಕ್ಕೆ ಸುಹಾಸ್‌ ಹತ್ಯೆ: ಶೋಭಾ ಆರೋಪ

| Published : May 03 2025, 12:15 AM IST

ಹಿಂದೂ ಕಾರ್ಯಕರ್ತ ಎಂಬ ಕಾರಣಕ್ಕೆ ಸುಹಾಸ್‌ ಹತ್ಯೆ: ಶೋಭಾ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದೂ ಸಂಘಟನೆಯ ಕಾರ್ಯಕರ್ತ ಎಂಬ ಒಂದೇ ವಿಚಾರಕ್ಕೆ ಸುಹಾಸ್ ಶೆಟ್ಟಿಯನ್ನು ಹತ್ಯೆ ಮಾಡಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪ ಮಾಡಿದ್ದಾರೆ. ಅವರು ಸುಹಾಸ್ ಶೆಟ್ಟಿ ಅಂತ್ಯ ಸಂಸ್ಕಾರದ ವೇಳೆ ಅವರ ಮನೆಗೆ ಆಗಮಿಸಿ ಮನೆಯವರಿಗೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮವರ ಜೊತೆಗೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಹಿಂದೂ ಸಂಘಟನೆಯ ಕಾರ್ಯಕರ್ತ ಎಂಬ ಒಂದೇ ವಿಚಾರಕ್ಕೆ ಸುಹಾಸ್ ಶೆಟ್ಟಿಯನ್ನು ಹತ್ಯೆ ಮಾಡಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪ ಮಾಡಿದ್ದಾರೆ.

ಅವರು ಸುಹಾಸ್ ಶೆಟ್ಟಿ ಅಂತ್ಯ ಸಂಸ್ಕಾರದ ವೇಳೆ ಅವರ ಮನೆಗೆ ಆಗಮಿಸಿ ಮನೆಯವರಿಗೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮವರ ಜೊತೆಗೆ ಮಾತನಾಡಿದರು.

ಮಂಗಳೂರಿನ ಪಾಝಿಲ್ ಹತ್ಯೆಯ ಸಂದರ್ಭದಲ್ಲಿ ಅನಾವಶ್ಯಕವಾಗಿ ಹಿಂದು ಸಂಘಟನೆಯ ಕಾರ್ಯಕರ್ತ ಎನ್ನುವ ಒಂದೇ ಕಾರಣಕ್ಕೆ ಸುಹಾಸ್ ಶೆಟ್ಟಿ ಹೆಸರು ಸೇರಿಸಲಾಗಿತ್ತು. ಆತನ ಅ ಪ್ರಕರಣದ ಆರೋಪಿ ಎಂಬುದು ಎಲ್ಲಿಯೂ ಸಾಬೀತು ಆಗಿಲ್ಲ, ಇದೀಗ ಪಾಝಿಲ್ ಹತ್ಯೆಗೆ ಪ್ರತೀಕಾರವಾಗಿ ಹತ್ಯೆ ಮಾಡಿದ್ದೇವೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಅವರ ಸಂಘಟನೆಯವರು ಬಹಳ ಧೈರ್ಯವಾಗಿ ಹಾಕಿಕೊಂಡಿದ್ದಾರೆ ಎಂದರು.

ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರದ ಅವಧಿಯಲ್ಲಿ ಉದ್ಧೇಶಪೂರ್ವಕವಾಗಿ ಯುವಕರ ಮೇಲೆ ಕೇಸುಗಳನ್ನು ದಾಖಲಿಸುವ ಕೆಲಸ ಆಗುತ್ತಿದೆ. ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ ಪೋಲೀಸ್ ಇಲಾಖೆಯ ಮೇಲೆ ದಾಳಿ ಮಾಡಿದರೂ ಅವರ ಮೇಲೆ ಹಲ್ಲೆ ಮಾಡಿದರೂ ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದರು.

ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಕೂಡಲೇ ಇಂತಹ ದೇಶ ದ್ರೋಹಿ ಸಂಘಟನೆಗಳಿಗೆ , ದೇಶ ದ್ರೋಹಿ, ಸಮಾಜದ್ರೋಹಿ‌ಶಕ್ತಿಗಳಿಗೆ ಬಲ ಬರುತ್ತದೆ.ಅದು ಮತ್ತೊಮ್ಮೆ ಮಂಗಳೂರಿನಲ್ಲಿ ಸಾಬೀತು ಆಗಿದೆ. ಈ ಸರ್ಕಾರ ನಮ್ಮನ್ನು ರಕ್ಷಣೆ ಮಾಡುತ್ತದೆ ಎಂಬ ಭರವಸೆ ಇಲ್ಲ ಎಂದರು.

ತಾನು ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಗೆ ಆಗ್ರಹ ಮಾಡಿ ಪತ್ರ ಬರೆದಿದ್ದು ಸುಹಾಸ್ ಶೆಟ್ಟಿ ಹತ್ಯೆ ತನಿಖೆ ಎನ್‌ಐಗೆ ನೀಡಬೇಕು ಎಂದರು.ಆರೋಪಿಗಳಿಗೆ ಗುಂಡಿಕ್ಕಲು ಯತ್ನಾಳ್‌ ಆಗ್ರಹ:

ಸುಹಾಸ್ ಶೆಟ್ಟಿ ಹತ್ಯೆ ಆರೋಪಿಗಳನ್ನು ಪೊಲೀಸರು ಗುಂಡಿಕ್ಕಿ ಕೊಂದರೆ ಮಾತ್ರ ಕರಾವಳಿ ಭಾಗದಲ್ಲಿ ಇಂತಹ ಘಟನೆಗಳು ಮರುಕಳಿಸುವುದಿಲ್ಲ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ.

ಕರಾವಳಿಯಲ್ಲಿ ಧರ್ಮವನ್ನು ಉಳಿಸಲು ಹೋರಾಟ ಮಾಡುವ ಹಿಂದೂ ಕಾರ್ಯಕರ್ತರನ್ನು ವ್ಯವಸ್ಥಿತವಾಗಿ ಹುಡುಕಿ ಟಾರ್ಗೆಟ್ ಮಾಡಿ ಮುಸ್ಲಿಂ ಭಯೋತ್ಪಾದಕರು ನಿರಂತರವಾಗಿ ಹತ್ಯೆ ಮಾಡುತ್ತಿದ್ದಾರೆ. ಯಾವುದೇ ರೀತಿಯ ಕ್ರಮಗಳು ಸರಕಾರ ಮಾಡದೇ ಇರುವುದೇ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.

ರಾತ್ರಿ ಹೊತ್ತಿನಲ್ಲಿ ಓಡಾಡಬೇಡಿ ಎಂದು ಹಿಂದೂ ಕಾರ್ಯಕರ್ತರಿಗೆ ಮನವಿ ಮಾಡುವುದಾಗಿ ತಿಳಿಸಿದರು.

ಸುಹಾಸ್‌ ಕುಟುಂಬಕ್ಕೆ ವೈಯಕ್ತಿಕವಾಗಿ 5 ಲಕ್ಷ ರು. ಆರ್ಥಿಕ ಸಹಾಯ ನೀಡುವುದಾಗಿ ಯತ್ನಾಳ್‌ ಘೋಷಣೆ ‌ಮಾಡಿದರು.

ಪೂರ್ವನಿಯೋಜಿತ ಹತ್ಯೆ-ರವಿ:

ಸುಹಾಸ್ ಶೆಟ್ಟಿ ಹತ್ಯೆ ಪೂರ್ವಯೋಜಿತ ಷಡ್ಯಂತ್ರವಾಗಿದೆ. ಹಿಂದೂ ಕಾರ್ಯಕರ್ತರಲ್ಲಿ ಭಯ ನಿರ್ಮಾಣ ಮಾಡುವ ಉದ್ದೇಶದಿಂದ ಹತ್ಯೆ ಮಾಡಬೇಕು ಎಂದು ಅವರ ಯೋಜನೆಯಲ್ಲಿ ಯಶಸ್ವಿಯಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಹೇಳಿದ್ದಾರೆ.

ಆತ್ಮರಕ್ಷಣೆಗೆ ಇಟ್ಟಕೊಂಡಿದ್ದ ಆಯುಧಗಳನ್ಬು ಪೋಲೀಸ್ ಇಲಾಖೆ ತಪಾಸಣೆ ನೆಪದಲ್ಲಿ ನಿರಾಯುಧನ್ನಾಗಿ ಮಾಡಿ ಬಳಿಕ ಈತನ ಹತ್ಯೆಯಾಗಿದೆ ಎಂದು ಆರೋಪ ಮಾಡಿದ್ದಾರೆ.

ಇನ್ನೊಂದು ವಿಕೆಟ್ ಬೀಳುತ್ತದೆ ಎಂಬ ಪೋಸ್ಟ್ ನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಳ್ಳುವ ಮೂಲಕ ಸಮಾಜದಲ್ಲಿ ಅಶಾಂತಿ ನಿರ್ಮಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸರ್ಕಾರ ರಕ್ಷಣೆ ನೀಡದೆ ನಮ್ಮನ್ನು ನಾವೇ ರಕ್ಷಣೆ ಮಾಡಬೇಕು ಅಂದುಕೊಂಡರೆ ನಾವೇನು ಹಿಂಜರಿಯುವ ಪ್ರಶ್ನೆ ಇಲ್ಲ ಅದನ್ನು ನಾವು ಮಾಡುತ್ತೇವೆ ಎಂದು ಹೇಳಿದರು.