ನದಿಗೆ ಜಿಗಿದು ಆತ್ಮಹತ್ಯೆ: 3 ದಿನದ ನಂತರ ಯುವತಿ ಶವ ಪತ್ತೆ

| Published : Jul 18 2024, 01:37 AM IST

ಸಾರಾಂಶ

ಕುರಿಕೋಟಾ ಸೇತುವೆ ಮೇಲಿಂದ ಬೆಣ್ಣೆ ತೊರೆ ಜಲಾಶಯ ಹಿನ್ನೀರಿಗೆ ಸೋಮವಾರ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರೇಮಿಗಳ ಜೋಡಿಯಲ್ಲಿ ಯುವತಿಯ ದೇಹ 3 ದಿನಗಳ ನಿರಂತರ ಶೋಧಕಾರ್ಯದ ನಂತರ ಬುಧವಾರ ಪತ್ತೆಯಾಗಿದೆ.

ಕನ್ನಡಪ್ರಭ ವಾರ್ತೆ ಕಮಲಾಪುರ

ಕುರಿಕೋಟಾ ಸೇತುವೆ ಮೇಲಿಂದ ಬೆಣ್ಣೆ ತೊರೆ ಜಲಾಶಯ ಹಿನ್ನೀರಿಗೆ ಸೋಮವಾರ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರೇಮಿಗಳ ಜೋಡಿಯಲ್ಲಿ ಯುವತಿಯ ದೇಹ 3 ದಿನಗಳ ನಿರಂತರ ಶೋಧಕಾರ್ಯದ ನಂತರ ಬುಧವಾರ ಪತ್ತೆಯಾಗಿದೆ. ಕಮಲಾಪುರ ತಾಲೂಕಿನ ಮುದ್ದುಡಗ ಗ್ರಾಮದ ಅನಿಲ್ ತಂದೆ ರೇವಣಸಿದ್ದಪ್ಪ ಮೂಲಗೆ (27) ಹಾಗೂ ಸಂಧ್ಯಾರಾಣಿ ಇಬ್ಬರೂ ಸೋಮವಾರ ಹಿನ್ನೀರಿಗೆ ಹಾರಿ ಪ್ರಾಣ ಬಿಟ್ಟಿದ್ದರು. ಅಂದೇ ಸಂಜೆ ಅನೀಲನ ಶವ ದೊರಕಿತ್ತಾದರೂ ಯುವತಿ ಶವ ಸಿಕ್ಕಿರಲಿಲ್ಲ.

ನೀರಿಗೆ ಹಾರಿದ್ದ ಸಂಧ್ಯಾರಾಣಿ ಮಲ್ಲಿಕಾರ್ಜುನ್ ಕೊಳೊರ ಮೃತದೇಹಕ್ಕಾಗಿ ಮೂರು ದಿನಗಳ ನಿರಂತರ ಅಗ್ನಿಶಾಮಕ ದಳದ ಈಜುಗಾರರು, ಪೊಲೀಸ್‌ ಸಿಬ್ಬಂದಿ ಶೋಧ ಕಾರ್ಯಾಚರಣೆ ಮುಂದುವರಿಸಿದ್ದರು, ಬುಧವಾರ ಮಧ್ಯಾಹ್ನದ ನಂತರ ಶೊಧ ಕಾರ್ಯಚರಣೆ ನಡೆಸಿದ ಸಮಯದಲ್ಲಿ ಯುವತಿಯ ಶವ ಪತ್ತೆಯಾಗಿದೆ. ಅಗ್ನಿಶಾಮಕ ದಳ ಜಿಲ್ಲಾ ಫೈಯರ್ ಆಫೀಸರ್ ಗುರುದತಾ, ಅಂಕುಶ, ಜಬರಸಿಂಗ್ ಸಿಬ್ಬಂದಿ ಪಿಎಸ್ಐ ಆಶಾ ರಾಠೋಡ ಕಿಶನ್ ಜಾದವ್ ಅಮರನಾಥ ಶವ ಹೊರತೆಗೆದರು. ನಿರಂತರವಾಗಿ ಆತ್ಮಹತ್ಯೆ ಪ್ರಕರಣ ದಾಖಲಾಗುತ್ತಿರುವುದರಿಂದ ಭದ್ರತೆ ಹಿನ್ನೆಲೆಯಲ್ಲಿ ಕುರಿಕೋಟಾ ಸೇತುವೆ ಮೇಲೆ ರಾತ್ರಿಯ ಸಮಯದಲ್ಲಿ ಇಬ್ಬರು ಪೊಲೀಸ್‌ ಪೆದೆಗಳನ್ನು ನಿಯೋಜಿಸಿದ್ದರು ಪೊಲೀಸರ ಕಣ್ಣ ತಪ್ಪಿಸಿ ನಿರಿಗೆ ಜಿಗ್ಗಿದಿದ್ದಾರೆ ಎಂದು ಮಹಾಗಾಂವ ಪಿಎಸ್ಐ ಆಶಾ ರಾಠೋಡ ಹೇಳಿದ್ದಾರೆ.