ಸುಜಲಾ ಕಪ್‌ ಕ್ರಿಕೆಟ್ ಪಂದ್ಯಾವಳಿ

| Published : Dec 24 2024, 12:47 AM IST

ಸಾರಾಂಶ

ಇಡೀ ವರ್ಷವೆಲ್ಲಾ ಓದುವುದರಲ್ಲೇ ಸಮಯ ಕಳೆಯುವ ವಿದ್ಯಾರ್ಥಿಗಳಿಗೆ ಇಂತಹ ಕ್ರಿಕೆಟ್ ಕ್ರೀಡೆಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಸ್ಥೈರ್ಯ ತುಂಬಲಿದೆ ಎಂದು ಸುಜಲಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಸ್. ಲೋಕೇಶ್ ತಿಳಿಸಿದರು. ಈ ಆಟೋಟ ಮೂಲಕ ಲವಲವಿಕೆಯಿಂದ ಭಾಗವಹಿಸಿದ್ದಾರೆ. ಈ ಒಂದು ದಿವಸ ಎಲ್ಲಾ ಉಪನ್ಯಾಸಕರು, ವಿದ್ಯಾರ್ಥಿಗಳು ನಗುವಿನಿಂದ ಪಾಲ್ಗೊಂಡಿದ್ದು, ಕ್ರೀಡೆ ಎಂಬುದು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯಕ್ಕೆ ಉತ್ತಮವಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಇಡೀ ವರ್ಷವೆಲ್ಲಾ ಓದುವುದರಲ್ಲೇ ಸಮಯ ಕಳೆಯುವ ವಿದ್ಯಾರ್ಥಿಗಳಿಗೆ ಇಂತಹ ಕ್ರಿಕೆಟ್ ಕ್ರೀಡೆಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಸ್ಥೈರ್ಯ ತುಂಬಲಿದೆ ಎಂದು ಸುಜಲಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಸ್. ಲೋಕೇಶ್ ತಿಳಿಸಿದರು.

ನಗರದ ಸಾಲಗಾಮೆ ರಸ್ತೆ ಬಳಿ ಇರುವ ಸರ್ಕಾರಿ ವಿಜ್ಞಾನ ಕಾಲೇಜಿನ ಕ್ರಿಕೆಟ್ ಮೈದಾನದಲ್ಲಿ ಸುಜಲಾ ಪಿಯು ಕಾಲೇಜಿನಿಂದ ಹಮ್ಮಿಕೊಳ್ಳಲಾಗಿದ್ದ ಸುಜಲಾ ಕಪ್‌ ಒಂದು ದಿನದ ಕ್ರಿಕೆಟ್ ಪಂದ್ಯಾವಳಿಯನ್ನು ಬ್ಯಾಟಿಂಗ್ ಮಾಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸುಜಲ ಕಪ್‌ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ದು, ವರ್ಷವೆಲ್ಲಾ ಓದು ಓದು ಎಂದು ಒತ್ತಡದಲ್ಲಿರುವ ವಿದ್ಯಾರ್ಥಿಗಳು ದೈಹಿಕವಾಗಿ ಕುಗ್ಗಿ ಹೋಗುತ್ತಿದ್ದಾರೆ. ಮಾನಸಿಕ ಸ್ಥೈರ್ಯ ತುಂಬ ಬೇಕಾದರೇ ಓದಿನ ಜೊತೆ ಇಂತಹ ಕ್ರೀಡೆ ಪ್ರಮುಖವಾಗಿದೆ ಎಂದು ಕಿವಿಮಾತು ಹೇಳಿದರು.

ಈ ಆಟೋಟ ಮೂಲಕ ಲವಲವಿಕೆಯಿಂದ ಭಾಗವಹಿಸಿದ್ದಾರೆ. ಈ ಒಂದು ದಿವಸ ಎಲ್ಲಾ ಉಪನ್ಯಾಸಕರು, ವಿದ್ಯಾರ್ಥಿಗಳು ನಗುವಿನಿಂದ ಪಾಲ್ಗೊಂಡಿದ್ದು, ಕ್ರೀಡೆ ಎಂಬುದು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯಕ್ಕೆ ಉತ್ತಮವಾಗಿದೆ ಎಂದರು. ಕೊನೆಯ ಪಂದ್ಯಾವಳಿಯು ಯಾವ ತಂಡ ಗೆಲುವು ಪಡೆದಿರುತ್ತದೆ, ಆ ತಂಡದ ವಿರುದ್ಧ ಉಪನ್ಯಾಸಕರ ಮ್ಯಾಚ್ ನಡೆಯಲಿದೆ. ಮ್ಯಾನ್ ಆಫ್ ದ ಮ್ಯಾಚ್, ರನ್ನರ್ಸ್‌, ವಿನ್ನರ್ಸ್‌ ಇವರಿಗೆಲ್ಲಾ ನಮ್ಮ ಕಾಲೇಜು ಡೇ ಸಮಯದಲ್ಲಿ ಬಹುಮಾನ ವಿತರಣೆ ಮಾಡಲಾಗುವುದು ಎಂದು ಹೇಳಿದರು.

ಸುಜಲಾ ಕಾಲೇಜಿನ ವಿದ್ಯಾರ್ಥಿ ಎಚ್.ಕೆ. ಅಭಿ ಮಾಧ್ಯಮದೊಂದಿಗೆ ಮಾತನಾಡಿ, ಎಲ್ಲಾ ಕಾಲೇಜಿನಲ್ಲಿ ಓದುವುದಕ್ಕೆ ಮಾತ್ರ ಹೆಚ್ಚಿನ ಪ್ರೋತ್ಸಾಹ ಕೊಟ್ಟರೇ ನಮ್ಮ ಕಾಲೇಜಿನಲ್ಲಿ ಓದುವುದರ ಜೊತೆಗೆ ಕ್ರೀಡೆ ಸೇರಿದಂತೆ ಯಾವುದೇ ಒಂದು ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರೋತ್ಸಾಹ ಕೊಡುತ್ತಾ ಬಂದಿದ್ದಾರೆ. ಈ ನಿಟ್ಟಿನಲ್ಲಿ ಸುಜಲಾ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ತುಂಬ ಸಂತೋಷದಿಂದ ಕ್ರೀಡೆಯಲ್ಲಿ ಪಾಲ್ಗೊಂಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಸುಜಲಾ ಪಿಯು ಕಾಲೇಜಿನ ಕಾರ್ಯದರ್ಶಿ ಶ್ವೇತಾ ಲೋಕೇಶ್, ಪ್ರಾಂಶುಪಾಲ ನಾಗೇಶ್, ಚಂದ್ರಶೇಖರ್, ಅಶೋಕ್ ಹಾಗೂ ಉಪನ್ಯಾಸಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.