ಕಾರೇಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಸುಜಾತ ನಾಗೇಂದ್ರ

| Published : Aug 09 2024, 12:30 AM IST

ಸಾರಾಂಶ

ಬಾಗೂರು ಹೋಬಳಿಯ ಕಾರೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸುಜಾತ ನಾಗೇಂದ್ರ ಅವಿರೋಧವಾಗಿ ಆಯ್ಕೆಯಾದರು. ಈ ಹಿಂದೆ ಅಧ್ಯಕ್ಷರಾಗಿದ್ದ ಪುಷ್ಪಲತಾ ನಟೇಶ್ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು ಅಧ್ಯಕ್ಷ ಸ್ಥಾನಕ್ಕೆ ಸುಜಾತ ನಾಗೇಂದ್ರ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಹರೀಶ್ ಘೋಷಿಸಿದರು.

ಕನ್ನಡಪ್ರಭ ವಾರ್ತೆ ಬಾಗೂರು

ಹೋಬಳಿಯ ಕಾರೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸುಜಾತ ನಾಗೇಂದ್ರ ಅವಿರೋಧವಾಗಿ ಆಯ್ಕೆಯಾದರು.

ಈ ಹಿಂದೆ ಅಧ್ಯಕ್ಷರಾಗಿದ್ದ ಪುಷ್ಪಲತಾ ನಟೇಶ್ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು ಅಧ್ಯಕ್ಷ ಸ್ಥಾನಕ್ಕೆ ಸುಜಾತ ನಾಗೇಂದ್ರ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಹರೀಶ್ ಘೋಷಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಕೆ.ಎ.ಸತೀಶ್ ಮಾತನಾಡಿ, ಸದಸ್ಯರ ಸಹಕಾರದಿಂದ ಅವಿರೋಧವಾಗಿ ಅಧ್ಯಕ್ಷರು ಆಯ್ಕೆಗೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಒತ್ತು ನೀಡಬೇಕು. ಜೊತೆಗೆ ಕುಡಿಯುವ ನೀರು, ಸ್ವಚ್ಛತೆ, ರಸ್ತೆ ನಿರ್ಮಾಣ ಸೇರಿದಂತೆ ಅನೇಕ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಕ್ಷೇತ್ರದ ಶಾಸಕರ ನೆರವಿನಿಂದ ಹೆಚ್ಚಿನ ಅನುದಾನ ತರುವ ಮೂಲಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಅಭಿವೃದ್ಧಿಗೆ ಹೆಚ್ಚು ಗಮನಹರಿಸುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಸದಸ್ಯರಾದ ಸಿಜೆ ಕುಮಾರ್, ಪುಷ್ಪಲತಾ ನಟೇಶ್, ಗೌರಮ್ಮ ವೀರಭದ್ರಯ್ಯ, ವಸಂತ್ ಕುಮಾರ್, ಜೀನತ್ ಫೈರೋಜ್ ಖಾನ್ , ಮುಖಂಡರಾದ ಕೆ.ಟಿ. ನಟೇಶ್, ಕೆ.ಎನ್ ರಾಮಚಂದ್ರು, ಅಣತಿ ವೆಂಕಟೇಶ್, ಸಿ ಕೆ ರವಿಶಂಕರ್, ಸಿ.ಡಿ.ರೇವಣ್ಣ, ತಿಮ್ಮಲಾಪುರ ಸುರೇಶ್, ರೇಚಿಹಳ್ಳಿ ನಾಗೇಶ್, ನಾಗೇನಹಳ್ಳಿ ವಿಜಯಕುಮಾರ್, ತಿಮ್ಮಲಾಪುರ ಗೋವಿಂದ್ ರಾಜ್, ಹೊನ್ನಾಕೊಪ್ಪಲು ಮಂಜಣ್ಣ, ಕುಮಾರ್, ನ್ಯಾಯ ಬೆಲೆ ಅಂಗಡಿ ಜಗದೀಶ್, ನಟೇಶ್, ಉಮಾಯಿನ್, ಸಮೀ ಉಲ್ಲಾ, ಬಸವಗೌಡ, ಪಿಡಿಒ ಶ್ರೀಧರ್ ಸೇರಿದಂತೆ ಅನೇಕರು ಹಾಜರಿದ್ದರು.