ಶಿಕ್ಷಣ ಕ್ಷೇತ್ರಕ್ಕೆ ಸುಕುನ್ ಫೌಂಡೇಶನ್‌ ಆದ್ಯತೆ: ಸಂಸ್ಥಾಪಕ ಮಹಮ್ಮದ್‌ ರಿಹಾನ್‌

| Published : Jul 02 2025, 12:20 AM IST

ಶಿಕ್ಷಣ ಕ್ಷೇತ್ರಕ್ಕೆ ಸುಕುನ್ ಫೌಂಡೇಶನ್‌ ಆದ್ಯತೆ: ಸಂಸ್ಥಾಪಕ ಮಹಮ್ಮದ್‌ ರಿಹಾನ್‌
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಸೋಮವಾರ ಸುಕುನ್ ಫೌಂಡೇಶನ್ ವತಿಯಿಂದ ಪುಸ್ತಕಗಳು, ಜಾಮಿಟ್ರಿ ಬಾಕ್ಸ್, ಪೆನ್ಸಿಲ್, ರಬ್ಬರ್ ಸೇರಿದಂತೆ ವಿವಿಧ ಅಧ್ಯಯನ ಸಾಮಗ್ರಿಗಳನ್ನು ವಿತರಿಸಲಾಯಿತು.

- ಉರ್ದು ಶಾಲೆ ವಿದ್ಯಾರ್ಥಿಗಳಿಗೆ ಕಲಿಕಾ ಪರಿಕರಗಳ ವಿತರಣೆ

- - -

ಕನ್ನಡಪ್ರಭ ವಾರ್ತೆ ಹರಿಹರ

ನಗರದ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಸೋಮವಾರ ಸುಕುನ್ ಫೌಂಡೇಶನ್ ವತಿಯಿಂದ ಪುಸ್ತಕಗಳು, ಜಾಮಿಟ್ರಿ ಬಾಕ್ಸ್, ಪೆನ್ಸಿಲ್, ರಬ್ಬರ್ ಸೇರಿದಂತೆ ವಿವಿಧ ಅಧ್ಯಯನ ಸಾಮಗ್ರಿಗಳನ್ನು ವಿತರಿಸಲಾಯಿತು.

ಫೌಂಡೇಶನ್ ಸಂಸ್ಥಾಪಕ ಮಹಮ್ಮದ್ ರಿಹಾನ್ ಮಾತನಾಡಿ, ಹಲವು ವರ್ಷಗಳಿಂದ ಸಾಮಾಜಿಕ ಸೇವೆಗಳನ್ನು ನಿರಂತರವಾಗಿ ಸಂಸ್ಥೆ ನಡೆಸುತ್ತಿದೆ. ವಿಶೇಷವಾಗಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಬಡಮಕ್ಕಳಿಗೆ ಅನುಕೂಲ ಆಗಲೆಂದು ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ರಂಜಾನ್ ತಿಂಗಳಲ್ಲಿ ದಾನ ಧರ್ಮಗಳ ಸೇವೆ, ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್‍ಗಳನ್ನು, ಮಕ್ಕಳಿಗೆ ನೂತನ ಬಟ್ಟೆಗಳನ್ನು ವಿತರಿಸುತ್ತದೆ. ಈ ಸೇವಾ ಕಾರ್ಯಗಳನ್ನು ಸಂಸ್ಥೆಯ ಮಾನವೀಯತೆ ಹಾಗೂ ಜವಬ್ದಾರಿ ಸೂಚಿಸುತ್ತದೆ. ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅನೇಕರು ದಾನಧರ್ಮದ ಕಾರ್ಯಗಳಲ್ಲಿ ಸಹಕಾರ ನೀಡುತ್ತಿದ್ದಾರೆ ಎಂದರು.

ಫೌಂಡೇಶನ್‍ ಪದಾಧಿಕಾರಿಗಳಾದ ಸಮೀವುಲ್ಲಾ, ಇಮ್ರಾನ್ ಅಬು ಸಾಲಿಹ, ಸಯ್ಯದ್ ಮತೀನ್, ಜಬಿ ಉಲ್ಲಾ, ನಜೀರ್ ಸಾಬ್, ಸೈಯದ್ ರಫೀಕ್, ಇರ್ಫಾನ್ ಡಿ, ಶಕೀಲ್, ನಫೀಸ್, ಮುಖ್ಯೋ ಉಪಾಧ್ಯಾಯೆ ಅಲಮ್ಸ್ ಗೌಹರ್ ಜಾನ್, ಶಿಕ್ಷಕಿ ಜಾಹೇರ ಬೇಗಂ, ಸೈಯದಾ ಗುಲ್ಜಾರ್, ದುರ್ಗಮ್ಮ ಇತರರು ಉಪಸ್ಥಿತರಿದ್ದರು.

- - -

-30ಎಚ್‍ಆರ್‍ಆರ್03.ಜೆಪಿಜಿ:

ಹರಿಹರ ನಗರದ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಸುಕುನ್ ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ಅಗತ್ಯವಿರುವ ವಿವಿಧ ಅಧ್ಯಯನ ಸಾಮಗ್ರಿಗಳನ್ನು ವಿತರಿಸಲಾಯಿತು.