ಸಾರಾಂಶ
ಚಳ್ಳಕೆರೆ ನಗರದ ನಗರಸಭೆಯ ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸುಮಾ ಭರಮಣ್ಣನವರನ್ನು ಸದಸ್ಯರು, ಅಧಿಕಾರಿಗಳು ಅಭಿನಂದಿಸಿದರು.
ನಗರಸಭೆ ಹರಾಜು ಪ್ರಕ್ರಿಯೆ ಮುಂದೂಡಿಕೆ: ಪೌರಾಯುಕ್ತ ಜಗರೆಡ್ಡಿ ಮಾಹಿತಿಕನ್ನಡಪ್ರಭ ವಾರ್ತೆ ಚಳ್ಳಕೆರೆ
ನಗರಸಭೆ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಜೈತುಂಬಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಜೀನಾಮೆಯನ್ನು ಜಿಲ್ಲಾಧಿಕಾರಿಗಳು ಅಂಗೀಕರಿಸಿದ ಕಾರಣ ಉಪಾಧ್ಯಕ್ಷೆ ಸುಮಾ ಭರಮಣ್ಣ ಪ್ರಭಾರ ಅಧ್ಯಕ್ಷೆಯಾಗಿ ಬುಧವಾರ ಸಂಜೆ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಪೌರಾಯುಕ್ತ ಎಚ್.ಜಿ.ಜಗರೆಡ್ಡಿ ತಿಳಿಸಿದರು.ಪತ್ರಿಕೆಯೊಂದಿಗೆ ಮಾತನಾಡಿದ ಅವರು, ನಗರಸಭೆಯ ಅಭಿವೃದ್ಧಿ ಸಂಬಂಧಪಟ್ಟಂತೆ ಹಲವಾರು ಯೋಜನೆಗಳ ಅನುಷ್ಠಾನಗೊಳಿಸಲು ಸಿದ್ಧತೆ ನಡೆದಿವೆ. ಪ್ರತಿ ವರ್ಷದಂತೆ ಈ ವರ್ಷವೂ 2025-26ನೇ ಸಾಲಿನ ದಿನವಹಿ, ವಾರದ ಸಂತೆ, ಬಸ್ ಮತ್ತು ದ್ವಿಚಕ್ರವಾಹನ ನಿಲುಗಡೆ ಹರಾಜು ಪ್ರಕ್ರಿಯೆ ಬುಧವಾರ ನಡೆಯಬೇಕಿದ್ದು, ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದರು.ಪ್ರಭಾರ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡ ಸುಮಾ ಭರಮಣ್ಣನವರನ್ನು ಅಭಿನಂದಿಸಿದರು.
ಈ ವೇಳೆ ಪೌರಾಯುಕ್ತ ಜಗರೆಡ್ಡಿ, ನಗರಸಭಾ ಸದಸ್ಯರಾದ ಆರ್.ಮಂಜುಳಾ, ವೈ.ಪ್ರಕಾಶ್, ಬಿ.ಟಿ.ರಮೇಶ್‌ಗೌಡ, ಎಂ.ಜೆ.ರಾಘವೇಂದ್ರ, ಹೊಯ್ಸಳ ಗೋವಿಂದ, ನಾಮಿನಿ ಸದಸ್ಯರಾದ ಆರ್.ವೀರಭದ್ರಪ್ಪ, ಅನ್ವರ್ ಮಾಸ್ಟರ್, ನಟರಾಜ್, ಬಡಗಿ ಪಾಪಣ್ಣ, ಕಾಂಗ್ರಸ್ ಮುಖಂಡರಾದ ಪ್ರಸನ್ನಕುಮಾರ್, ಎಚ್.ಶಶಿಧರ, ಕೃಷ್ಣ, ಮುರುಳಿ, ಖಾದರ್, ಬೋರಯ್ಯ, ಸುರೇಶ್, ಭರಮಣ್ಣ ಉಪಸ್ಥಿತರಿದ್ದರು.