ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಯಕ್ಷಗಾನ, ನಾಟಕಗಳಿಗೆ ಹೆತ್ತವರು ತಮ್ಮ ಮಕ್ಕಳನ್ನೂ ಕೂಡ ಕರೆತರಬೇಕು. ಅವರಲ್ಲಿಯೂ ಕಲೆಯ ಬಗ್ಗೆ ಉತ್ಸಾಹವನ್ನು ಮೂಡಿಸಬೇಕು ಎಂದು ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಸುರೇಶ್ ರೈ ಕೆ. ಹೇಳಿದರು.ಅವರು ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಇಲ್ಲಿನ ಭುಜಂಗಪಾರ್ಕ್ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ 12ನೇ ವರ್ಷದ ರಂಗಹಬ್ಬದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ನಾಟಕ, ಯಕ್ಷಗಾನಗಳು ಜನರನ್ನು ತಲುಪುವ ಪ್ರಮುಖ ಸಮೂಹ ಮಾಧ್ಯಮ. ಈ ಮಾಧ್ಯಮವನ್ನು ಎಲ್ಲರೂ ಬಳಸಿಕೊಳ್ಳಬೇಕು. ಮಕ್ಕಳು ಶಾಲೆಗೆ ಹೋಗುವ ಮೊದಲು ಯಾವುದೇ ಚಟುವಟಿಕೆಗೆ ಮಾರ್ಗದರ್ಶನ ಇರುವುದಿಲ್ಲ, ನೈಸರ್ಗಿಕವಾಗಿ ಕಲಿಯುತ್ತಾರೆ. ಅವರ ಅಭಿನಯವೂ ಸಹಜವಾಗಿರುತ್ತದೆ. ಅಂಥ ಮಕ್ಕಳನ್ನು ನಾಟಕಗಳಿಗೆ ಕರೆದುಕೊಂಡು ಬಂದರೆ ಅವರ ಮನಸ್ಸಿನಲ್ಲಿ ಈ ರಂಗಕಲೆ ಹಚ್ಚೊತ್ತಿ ಕೂರುತ್ತದೆ ಎಂದು ವಿಶ್ಲೇಷಿಸಿದರು.ಕಲಾವಿದ ಗಣೇಶ ಕೊಲೆಕಾಡಿ ಅವರಿಗೆ ಯಕ್ಷಸುಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾಜ ಸೇವಕ ಕೆ. ಕೃಷ್ಣಮೂರ್ತಿ ಆಚಾರ್ಯ, ಉದ್ಯಮಿಗಳಾದ ಗ್ರೂಪ್ ಪ್ರವರ್ತಕ ಹರಿಯಪ್ಪ ಕೋಟ್ಯಾನ್, ಉದಯ ಕುಮಾರ್, ರಘುನಾಥ್ ಮಾಬಿಯಾನ್, ಗೌತಮ್ ಪ್ರಭು, ರತ್ನಾಕರ್ ಅಮೀನ್, ಉಮೇಶ್ ಎಂ.ಕೆ., ನಗರಸಭೆ ಸದಸ್ಯೆ ರಶ್ಮಿ ಚಿತ್ತರಂಜನ್ ಭಟ್, ‘ಸುಮನಸಾ’ದ ಗೌರವಾಧ್ಯಕ್ಷ ಎಂ. ಎಸ್. ಭಟ್, ಸಂಚಾಲಕ ಭಾಸ್ಕರ ಪಾಲನ್ ಉಪಸ್ಥಿತರಿದ್ದರು.ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಸ್ವಾಗತಿಸಿದರು. ರಾಧಿಕಾ ವಂದಿಸಿದರು. ಪ್ರಜ್ಞಾ ಕೊಡವೂರು ಕಾರ್ಯಕ್ರಮ ನಿರೂಪಿಸಿದರು. ‘ಸುಮನಸಾ’ ಕಲಾವಿದರಿಂದ ‘ಶಿಕಾರಿ’ ನಾಟಕ ಪ್ರದರ್ಶನಗೊಂಡಿತು.