ಸಾರಾಂಶ
ರಬಕವಿ-ಬನಹಟ್ಟಿ: ಏಪ್ರಿಲ್ ಆರಂಭವಾಗುತ್ತಿದ್ದಂತೆ ಎಲ್ಲೆಡೆ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ತಾಪಮಾನ 40 ಡಿಗ್ರಿವರೆಗೂ ಹೋಗಿ ತಲುಪಿದ ಪರಿಣಾಮ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಅದಕ್ಕಾಗಿ ಸರ್ಕಾರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಕಾರದ ಆದೇಶದಂತೆ ಅವಳಿ ನಗರದ ಸ್ಲಂ ಏರಿಯಾಗಳು ಸೇರಿದಂತೆ ಅನೇಕ ಕಡೆಗಳಲ್ಲಿ 14ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಒಆರ್‌ಎಸ್ ಸೇರಿದಂಗೆ ಇನ್ನಿತರ ದೇಹ ತಂಪುಗೊಳಿಸಲು ಪದಾರ್ಥಗಳನ್ನು ನೀಡುತ್ತಿದ್ದಾರೆ ಎಂದು ಕಿರಿಯ ಆರೋಗ್ಯ ಸಹಾಯಕಿ ಅನು ಬಡಿಗೇರ ಹಾಗೂ ಸಾವಿತ್ರಿ ಪವಡಶೆಟ್ಟಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಏಪ್ರಿಲ್ ಆರಂಭವಾಗುತ್ತಿದ್ದಂತೆ ಎಲ್ಲೆಡೆ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ತಾಪಮಾನ 40 ಡಿಗ್ರಿವರೆಗೂ ಹೋಗಿ ತಲುಪಿದ ಪರಿಣಾಮ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಅದಕ್ಕಾಗಿ ಸರ್ಕಾರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಕಾರದ ಆದೇಶದಂತೆ ಅವಳಿ ನಗರದ ಸ್ಲಂ ಏರಿಯಾಗಳು ಸೇರಿದಂತೆ ಅನೇಕ ಕಡೆಗಳಲ್ಲಿ 14ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಒಆರ್‌ಎಸ್ ಸೇರಿದಂಗೆ ಇನ್ನಿತರ ದೇಹ ತಂಪುಗೊಳಿಸಲು ಪದಾರ್ಥಗಳನ್ನು ನೀಡುತ್ತಿದ್ದಾರೆ ಎಂದು ಕಿರಿಯ ಆರೋಗ್ಯ ಸಹಾಯಕಿ ಅನು ಬಡಿಗೇರ ಹಾಗೂ ಸಾವಿತ್ರಿ ಪವಡಶೆಟ್ಟಿ ತಿಳಿಸಿದರು.ಸೋಮವಾರ ರಬಕವಿ ನಗರದ ಸ್ಲಂ ಏರಿಯಾಗಳಲ್ಲಿ ಬಿಸಿಲಿನಿಂದಾಗುವ ಹಾನಿಗಳು ಮತ್ತು ಅದರಿಂದ ಹೇಗೆ ರಕ್ಷಿಸಿಕೊಳ್ಳಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸಿ ಒಆರ್‌ಎಸ್ ಪ್ಯಾಕೆಟ್ ವಿತರಿಸಿ ಮಾತನಾಡಿದ ಅವರು, ಕಾಟನ್ ಬಟ್ಟೆಯನ್ನೇ ಧರಿಸಿ, ರಸ್ತೆ ಬದಿಯಲ್ಲಿ ಕತ್ತರಿಸಿ ಇಟ್ಟ ಹಣ್ಣು ಅಥವಾ ಆಹಾರ ತಿನ್ನಬೇಡಿ. ಆಗಾಗ ನೀರು ಸೇವಿಸಿ. ಬಿಸಿಲಿನಿಂದ ಏನಾದರೂ ತೊಂದರೆಯಾದರೆ ೧೦೭೭ ಸಹಾಯವಾಣಿಗೆ ಕರೆ ಮಾಡಲು ತಿಳಿಸಿದರು.
ಆಶಾ ಕಾರ್ಯಕರ್ತೆ ಬೇಬಿಶ್ರೀ ಹಾಸಿಲಕರ ಮಾತನಾಡಿ, ಬಿಸಿಲಿನ ತಾಪಕ್ಕೆ ವಯೋವೃದ್ಧರಿಗೆ ತುಂಬಾ ತೊಂದರೆಯಾಗುವ ಸಾಧ್ಯತೆ ಇದೆ. ಆದಕಾರಣ ಅವರನ್ನು ತಂಪಾದ ಸ್ಥಳಗಳಲ್ಲಿ ಇರುವಂತೆ ನೋಡಿಕೊಳ್ಳಿ. ನಿಂಬೆ ರಸ, ಒಆರ್‌ಎಸ್ ಕುಡಿಸಿರಿ ಎಂದು ತಿಳಿಹೇಳಿದರು.ಈ ವೇಳೆ ಸಾವಿತ್ರಿ ಪವಡಶೆಟ್ಟಿ, ಲಕ್ಷ್ಮೀ ತಳವಾರ, ಭಾರತಿ ಸಿರಗೂರ, ಶೋಭಾ ಗುಣಕಿ, ಸಕ್ಕೂಬಾಯಿ ಪೂಜಾರಿ, ಸವಿತಾ ಬಾವಲತ್ತಿ, ಸವಿತಾ ಔವರಸಂಗ, ಶೀವಲೀಲಾ ಪಾಟೀಲ, ಕವಿತಾ ಆಲಗೂರ, ಯಲ್ಲವ್ವ ಉಂಕಿ, ಲಕ್ಷ್ಮೀ ಹಳ್ಳಿ, ಪೂಜಾ ಅಡವಿತೋಟ, ಗೀತಾ ಆರಗಿ ಸೇರಿದಂತೆ ಅನೇಕರಿದ್ದರು.