ಮಕ್ಕಳ ಸಾಧನೆಗೆ ಅವರ ಸೃಜನಶೀಲ ವ್ಯಕ್ತಿತ್ವ, ಆಸಕ್ತಿ ಪ್ರಮುಖ ಕಾರಣವಾಗಿದೆ. ಶಿಬಿರದಿಂದ ಅನೇಕ ವಿಷಯಗಳನ್ನು ಕಲಿಯಬಹುದು.
ಮುಂಡರಗಿ: ರಜೆ ವೇಳೆ ಹೆಚ್ಚಾಗಿ ಮಕ್ಕಳು ಮನೆಯಲ್ಲಿ ಮೊಬೈಲ್, ಟಿವಿ ಮುಂದೆ ಕುಳಿತು ಸಮಯ ವ್ಯರ್ಥ ಮಾಡುತ್ತಾರೆ. ಹೀಗಾಗಿ ಮಕ್ಕಳು ಬೇಸಿಗೆ ಶಿಬಿರಗಳಲ್ಲಿ ಪಾಲ್ಗೊಂಡರೆ ಸಾಕಷ್ಟು ಮಾಹಿತಿ ಪಡೆದುಕೊಳ್ಳಬಹುದು ಎಂದು ವಿಶ್ರಾಂತ ಪ್ರಾ. ಡಾ. ಡಿ.ಸಿ. ಮಠ ತಿಳಿಸಿದರು.
ರಾಮೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಲಿಂ. ಶರಣ ಎಚ್.ಎಸ್. ಪಾಟೀಲ ಪ್ರತಿಷ್ಠಾನದ ಆಶ್ರಯದಲ್ಲಿ ಕನ್ನಡ ಕವಿತೆಗಳ ವಾಚನ ಹಾಗೂ ಗೀತಗಾಯನ ಮಕ್ಕಳ ಎರಡು ದಿನಗಳ ಬೇಸಿಗೆ ಶಿಬಿರ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದರು.ಮಕ್ಕಳ ಸಾಧನೆಗೆ ಅವರ ಸೃಜನಶೀಲ ವ್ಯಕ್ತಿತ್ವ, ಆಸಕ್ತಿ ಪ್ರಮುಖ ಕಾರಣವಾಗಿದೆ. ಶಿಬಿರದಿಂದ ಅನೇಕ ವಿಷಯಗಳನ್ನು ಕಲಿಯಬಹುದು. ಈ ಶಿಬಿರವು ಕವಿತೆಗಳ ರಚನೆ ಮತ್ತು ಗಾಯನ, ನೃತ್ಯ ಸಂಗೀತಗಳ ಮೂಲಕ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಲಿದೆ. ಇಂತಹ ಶಿಬಿರಗಳಿಂದ ಮಕ್ಕಳ ಉತ್ಸಾಹ ಹೆಚ್ಚಿಸುತ್ತದೆ ಎಂದರು.ಶಿಬಿರದ ನಿರ್ದೇಶಕ ಡಾ. ನಿಂಗು ಸೊಲಗಿ ಮಾತನಾಡಿ, ಲಿಂ. ಶರಣ ಎಚ್.ಎಸ್. ಪಾಟೀಲ ಪ್ರತಿಷ್ಠಾನದ ಮೂಲಕ ಹಲವು ಸಮಾಜಮುಖಿ ಕಾರ್ಯಗಳು ಜರುಗುತ್ತಿವೆ. ಇದೀಗ ಅದರ ಹಾಗೂ ತಾಲೂಕು ಕಸಾಪದ ಸಹಯೋಗದಲ್ಲಿ ಬೇಸಿಗೆ ಶಿಬಿರ ಆಯೋಜಿಸಿದ್ದು, ಸಾಹಿತ್ಯ, ಸಂಗೀತ, ಕಲೆ, ರಂಗಭೂಮಿ, ಕ್ರಿಯಾತ್ಮಕ ಆಟಗಳು ಮಕ್ಕಳ ಕ್ರಿಯಾಶೀಲತೆ ಹೆಚ್ಚಿಸಲು ಶಿಬಿರದ ಉದ್ದೇಶ ಈಡೇರಿದೆ. ಸಂಪನ್ಮೂಲ ವ್ಯಕ್ತಿಗಳಿಂದ, ಗ್ರಾಮಸ್ಥರ ಸಹಕಾರದಿಂದ ಶಿಬಿರ ಯಶಸ್ವಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ, ವೀಣಾ ಪಾಟೀಲ, ಜಯಶ್ರೀ ಅಳವಂಡಿ, ಅಕ್ಕಮ್ಮ ಕೊಟ್ಟೂರ್ ಶೆಟ್ಟರ್, ಎಸ್‌ಡಿಎಂಸಿ ಅಧ್ಯಕ್ಷ ಉಮೇಶ ದಂಡಿನ, ಪಿ.ಆರ್. ಗಾಡದ, ಪಿ.ಎಂ. ಲಾಂಡೆ, ಶಿವಲೀಲಾ ಅಬ್ಬಿಗೇರಿ, ಮಧುಮತಿ ಇಳಕಲ್, ಅವಿನಾಶ ಗೊಡಕಿಂಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಮಂಜುನಾಥ ಮುಧೋಳ ನಿರೂಪಿಸಿ, ವಂದಿಸಿದರು. ಬಿ.ಕೆ. ಹರಿಪ್ರಸಾದ ವಿರುದ್ಧ ಪ್ರತಿಭಟನೆಗದಗ: ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಅವರ ಬಗ್ಗೆ ಅವಹೇಳನಕಾರಿ ಭಾಷಣ ಮಾಡಿದ ಬಿ.ಕೆ. ಹರಿಪ್ರಸಾದ ವಿರುದ್ಧ ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಇತ್ತೀಚೆಗೆ ನಡೆದ ಸಿಇಟಿ ಪರೀಕ್ಷೆಗೆ ಹಾಜರಾಗುವ ಸಮಯದಲ್ಲಿ ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದನ್ನು ಖಂಡಿಸಿದ ಬ್ರಾಹ್ಮಣ ಸಂಘದ ಸದಸ್ಯರು ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಸಂಘದ ಅಧ್ಯಕ್ಷ ವೆಂಕಟೇಶ ಕುಲಕರ್ಣಿ ಮಾತನಾಡಿ, ಸಂಘದ ವತಿಯಿಂದ ರಾಜ್ಯಮಟ್ಟದಲ್ಲಿ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದರು.
ಅನಿಲ ತೆಂಬದಮನಿ, ಗಿರೀಶ ಕುಲಕರ್ಣಿ, ಎಚ್.ಡಿ. ಪಾಟೀಲ, ವಾದಿರಾಜ, ಕೌಜಲಗಿ, ರಾಜೇಂದ್ರ ಕುಲಕರ್ಣಿ, ಶ್ರೀಪಾದ ನಾಯಕ ತಮ್ಮಣ್ಣವರ, ಪ್ರಲ್ಲಾದ ನಾರಪ್ಪನವರ, ರಾಘವೇಂದ್ರ ನಾರಪ್ಪನವರ, ಶಿರೀಷ ದೀಕ್ಷಿತ್, ಭೂಷಣ ಹುಯಿಲಗೋಳ, ರವಿಚಂದ್ರನ್ ಕುಲಕರ್ಣಿ, ಸಂಜೀವ ಕುಲಕರ್ಣಿ, ಸತೀಶ ಕುಲಕರ್ಣಿ, ಶ್ರೀಧರ ದೇಸಾಯಿ, ವಿರೂಪಾಕ್ಷ ಘಳಿಗಿ, ರಾಘವೇಂದ್ರ ಕುಲಕರ್ಣಿ, ಶ್ರೀಧರ ಕುಲಕರ್ಣಿ, ಕುಬೇರ ಸರ್, ಕೃಷ್ಣಾಜಿ ನಾಡಗೇರ, ಸುಧೀಂದ್ರ ದೇಶಪಾಂಡೆ, ಗಿರೀಶ ಜೋಶಿ, ಸಂತೋಷ ಕುಲಕರ್ಣಿ, ಸಂತೋಷ ಪಾಟೀಲ, ಸತೀಶ ಮುಜುಮದಾರ, ನಾಗೇಶ ಗುಡಿ, ವಿನಾಯಕ ಮುತಾಲಿಕ ಮುಂತಾದವರು ಇದ್ದರು.