ಬೇಸಿಗೆ ಶಿಬಿರಗಳಿಂದ ಮಕ್ಕಳ ವ್ಯಕ್ತಿತ್ವ ವಿಕಸನ: ಶಿವಬಸವ ಸ್ವಾಮೀಜಿ

| Published : Apr 19 2025, 12:33 AM IST

ಬೇಸಿಗೆ ಶಿಬಿರಗಳಿಂದ ಮಕ್ಕಳ ವ್ಯಕ್ತಿತ್ವ ವಿಕಸನ: ಶಿವಬಸವ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಬೇಸಿಗೆ ರಜೆ ವೇಳೆ ಪೋಷಕರಿಗೆ ಮಕ್ಕಳ ಗಲಾಟೆ, ಗದ್ದಲ ಇವುಗಳಿಂದ ಕಿರಿಕಿರಿಯಾಗುವುದನ್ನು ಕೇಳಿದ್ದೇವೆ. ಆದರೆ, ಶಾಲಾ ದಿನಗಳಲ್ಲಿ ಕಲಿತ ಪಠ್ಯವನ್ನು ಮನನ ಮಾಡಿಕೊಳ್ಳುವ ಬದಲು ಮಕ್ಕಳು ಸಿಕ್ಕ ಅವಕಾಶವನ್ನು ಆಟೋಟಗಳಲ್ಲಿ ಕಳೆಯಲು ಇಷ್ಟಪಡುತ್ತಾರೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಬೇಸಿಗೆ ಶಿಬಿರಗಳು ಸಹಕಾರಿಯಾಗಿವೆ ಎಂದು ಬೇಬಿಬೆಟ್ಟದ ಶ್ರೀರಾಮಯೋಗೀಶ್ವರ ಮಠದ ಪೀಠಾಧ್ಯಕ್ಷ ಶಿವಬಸವ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲೂಕಿನ ಚಿನಕುರಳಿ ಗ್ರಾಮದ ಬಿಜಿಎಸ್ ವಿದ್ಯಾಲಯದಲ್ಲಿ ಕಳೆದ 15 ದಿನಗಳಿಂದ ನಡೆದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ಬೇಸಿಗೆ ರಜೆ ವೇಳೆ ಪೋಷಕರಿಗೆ ಮಕ್ಕಳ ಗಲಾಟೆ, ಗದ್ದಲ ಇವುಗಳಿಂದ ಕಿರಿಕಿರಿಯಾಗುವುದನ್ನು ಕೇಳಿದ್ದೇವೆ. ಆದರೆ, ಶಾಲಾ ದಿನಗಳಲ್ಲಿ ಕಲಿತ ಪಠ್ಯವನ್ನು ಮನನ ಮಾಡಿಕೊಳ್ಳುವ ಬದಲು ಮಕ್ಕಳು ಸಿಕ್ಕ ಅವಕಾಶವನ್ನು ಆಟೋಟಗಳಲ್ಲಿ ಕಳೆಯಲು ಇಷ್ಟಪಡುತ್ತಾರೆ ಎಂದರು.

ಬೇಸಿಗೆ ರಜೆ ದಿನಗಳನ್ನು ಅತ್ಯುತ್ತಮ ಕಲಿಕೆಗೆ ಬಳಸಿಕೊಳ್ಳಲು ಇಂತಹ ಶಿಬಿರಗಳು ಉತ್ತಮ ವೇದಿಕೆ ಒದಗಿಸುತ್ತವೆ. ಇಲ್ಲಿ ಅನೇಕ ರೀತಿಯ ಆಟೊಟಗಳು ಮಕ್ಕಳ ಮಾನಸಿಕ ವಿಕಸನಕ್ಕೆ ಅಗತ್ಯವಾದ ಸ್ಪರ್ಧಾತ್ಮಕ ಪರೀಕ್ಷೆಗಳು, ಮಕ್ಕಳನ್ನು ಹೆಚ್ಚು ಕ್ರಿಯಾಶೀಲರನ್ನಾಗಿಸಲು ಅನುಕೂಲ ಮಾಡಿಕೊಡಲಿದೆ ಎಂದರು.

ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕ, ಶಿಕ್ಷಕಿಯರು ಸೇರಿದಂತೆ ಹಲವರು ಹಾಜರಿದ್ದರು.

ಆರ್.ರಕ್ಷಿತಾಗೆ ಪಿಎಚ್.ಡಿ ಪದವಿ

ಮಂಡ್ಯ: ತಾಲೂಕಿನ ಮಂಗಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ, ಚಾಮುಂಡೇಶ್ವರಿ ನಗರದ ಎಸ್.ರಾಜಶೇಖರ್ ಮತ್ತು ಕೆ.ಸಿ.ಯಶೋಧ ದಂಪತಿ ಪುತ್ರಿ ಆರ್.ರಕ್ಷಿತಾ ಅವರು ಪರಿಸರ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಪಲ್ಲವಿ ಅವರ ಮಾರ್ಗದರ್ಶನದಲ್ಲಿ ರಿಸ್ಪಾನ್ಸ್ ಸರ್ಫೆಸ್ ಮೆಥಡಾಲಜೀ ಮಾಡೆಲಿಂಗ್ ಫಾರ್ ದ ರಿಮೂವಲ್ ಆಫ್ ಪರ್ಸಿಸ್ಟೆಂಟ್ ಆರ್ಗ್ಯಾನಿಕ್ ಪಾಲ್ಯೂಟೆಂಟ್ಸ್ ಯೂಸಿಂಗ್ ನ್ಯಾನೋಕಾಂಪೋಸಿಟ್ಸ್ ಎಂಬ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಮೈಸೂರು ವತಿಯಿಂದ ಪರಿಸರ ವಿಜ್ಞಾನದಲ್ಲಿ ಡಾಕ್ಟರೇಟ್ (ಪಿಎಚ್.ಡಿ) ಪದವಿ ಪಡೆದಿದ್ದಾರೆ. ಆರ್.ರಕ್ಷಿತಾ ಪ್ರಸ್ತುತ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.