ಸಾರಾಂಶ
ಇಂದಿನ ಮಕ್ಕಳಿಗೆ ಅಜ್ಜಿ-ಅಜ್ಜರ ಜೊತೆಯಲ್ಲಿ ಇರುವ ಅವಕಾಶವೇ ಕಡಿಮೆ ಇದ್ದು, ಮೊಮ್ಮಕ್ಕಳಿಗೆ ಕಥೆ ಹೇಳುವ ಅಭ್ಯಾಸವೇ ಕಡಿಮೆಯಾಗಿದೆ.ಈ ನಿಟ್ಟಿನಲ್ಲಿ ಪ್ರಕೃತಿ ಶ್ರೀ ಕಲಾ ಕುಟೀರದ ಬೇಸಿಗೆ ಸಂಭ್ರಮ-14ರಲ್ಲಿ ಅಜ್ಜಿ ಕಥೆ ಎಂದು ವಿಶೇಷ ಕಾರ್ಯಕ್ರಮ ಏರ್ಪಡಿಸಿ ಊರಿನ ಹಿರಿಯರನ್ನು ಆಹ್ವಾನಿಸಿ ಕಥೆ ಹೇಳುತ್ತಿರುವುದು ಶ್ಲಾಘನೀಯ.
ತರೀಕೆರೆ: ಇಂದಿನ ಮಕ್ಕಳಿಗೆ ಅಜ್ಜಿ-ಅಜ್ಜರ ಜೊತೆಯಲ್ಲಿ ಇರುವ ಅವಕಾಶವೇ ಕಡಿಮೆ ಇದ್ದು, ಮೊಮ್ಮಕ್ಕಳಿಗೆ ಕಥೆ ಹೇಳುವ ಅಭ್ಯಾಸವೇ ಕಡಿಮೆಯಾಗಿದೆ.
ಈ ನಿಟ್ಟಿನಲ್ಲಿ ಪ್ರಕೃತಿ ಶ್ರೀ ಕಲಾ ಕುಟೀರದ ಬೇಸಿಗೆ ಸಂಭ್ರಮ-14ರಲ್ಲಿ ಅಜ್ಜಿ ಕಥೆ ಎಂದು ವಿಶೇಷ ಕಾರ್ಯಕ್ರಮ ಏರ್ಪಡಿಸಿ ಊರಿನ ಹಿರಿಯರನ್ನು ಆಹ್ವಾನಿಸಿ ಕಥೆ ಹೇಳುತ್ತಿರುವುದು ಶ್ಲಾಘನೀಯ. ಶ್ಯಾಮಲ ಮಂಜುನಾಥ್, ಶಾರದ ಅಶೋಕ್ ಕುಮಾರ್, ಶಾಂತ ರೇವಣ್ಣ, ಕವಿತಾ ಪ್ರಕಾಶ್ ಅವರು ದಿನಕ್ಕೊಂದು ನೀತಿ ಕಥೆ, ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾದ ಮಾನವೀಯ ಮೌಲ್ಯಗಳ ಬಗ್ಗೆ ಪೌರಾಣಿಕ ಕಥೆಗಳನ್ನು ಹೇಳಿ ಸಂವಾದ ನಡೆಸಿದರು.ಪ್ರತಿದಿನ ಸಂಸ್ಥೆ ಮುಖ್ಯಸ್ಥೆ ಉಮಾ ಪ್ರಕಾಶ್ ಅವರು ಧ್ಯಾನ, ಲಘು ವ್ಯಾಯಾಮ, ದೇಸೀ ಒಳಾಂಗಣ ಆಟಗಳು, ಶುಭಾಷಯ ಪತ್ರಗಳು, ಹಾಡುಗಳು, ಕರಕುಶಲ ವಸ್ತುಗಳ ತಯಾರಿಕೆ (ನಾಟಕ) ಅಭಿನಯ ಕಲೆಗಳನ್ನು ಹೇಳಿಕೊಡುತ್ತಿದ್ದಾರೆ.ಮಕ್ಕಳು ತುಂಬಾ ಆಸಕ್ತಿಯಿಂದ ಭಾಗವಹಿಸುತ್ತಿದ್ದಾರೆ. ಪ್ರಾಣಿಗಳ ಬಗ್ಗೆ ನೈಜವಾಗಿಯೇ ನೋಡಿ ತಿಳಿಯಲು ಅನುಕೂಲವಾಗುವಂತೆ ತ್ಯಾವರೆಕೊಪ್ಪ ಸಿಂಹಧಾಮಕ್ಕೆ ಮಕ್ಕಳನ್ನು ಕರೆದೊಯ್ಯಲಾಗುತ್ತಿದೆ ಎಂದು ಪ್ರಕೃತಿ ಶ್ರೀ ಕಲಾ ಕುಟೀರದ ಮುಖ್ಯಸ್ಥೆ ಉಮಾ ಪ್ರಕಾಶ್ ತಿಳಿಸಿದ್ದಾರೆ.6ಕಟಿಆರ್.ಕೆ.6ಃತರೀಕೆರೆಯಲ್ಲಿ ಪ್ರಕೃತಿಶ್ರೀ ಕಲಾ ಕುಟೀರದಿಂದ ಏರ್ಪಡಿಸಿದ್ದ ಬೇಸಿಗೆ ಸಂಭ್ರಮ-14ರಲ್ಲಿ ಮಕ್ಕಳಿಗೆ ಕಥೆ ಹೇಳುವ ಕಾರ್ಯಕ್ರಮ ನಡೆಯಿತು.