ಸಾರಾಂಶ
ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ನೀಡುವ ಸುವರ್ಣ ಸಾಧಕಿ-2025 ಪ್ರಶಸ್ತಿ ಪುರಸ್ಕೃತೆ ಸುನಿತಾ ಸೋಮಲಿಂಗ ಐಹೊಳೆ ಅವರಿಗೆ ಸಿರಿ ಸಂಸ್ಕೃತಿಗಾಗಿ ಸಲ್ಲಿಸಿದ ಅನುಪಮ ಸೇವೆ ಗುರುತಿಸಿ ಸುವರ್ಣ ಕರ್ನಾಟಕ ಸೈನಿಕ ಸೇವಾ ರಾಜ್ಯ ಪ್ರಶಸ್ತಿ ಫಲಕವನ್ನು ಪುರಸ್ಕೃತೆಯ ಸ್ವಗೃಹಕ್ಕೆ ತೆರಳಿ ನೀಡಿ ಗೌರವಿಸಲಾಯಿತು.
ಬೆಳಗಾವಿ: ಅಥಣಿ ಪಟ್ಟಣದ ಎಸ್.ಎಸ್.ಎಂ.ಎಸ್ ಕಾಲೇಜು ಖೋತ ಕಲಾಭವನದಲ್ಲಿ ಬೆಳಗಾವಿ ರಾಣಿ ಚನ್ನಮ್ಮ ಮಹಿಳಾ ಖಾದಿ ಗ್ರಾಮೋದ್ಯೋಗ ಸಂಘ (ರಿ) ಹಾಗೂ ಬೆಳಗಾವಿ ಸಪ್ತಸ್ವರ ಸಂಗೀತ ಕಲಾ ಬಳಗದವರು ಆಯೋಜಿಸಿದ್ದ ರಾಣಿಚನ್ನಮ್ಮ ರಾಷ್ಟ್ರೀಯ ಕಲಾ ಪ್ರತಿಭೋತ್ಸವ ಮತ್ತು ಸಂಘದ ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ನೀಡುವ ಸುವರ್ಣ ಸಾಧಕಿ-2025 ಪ್ರಶಸ್ತಿ ಪುರಸ್ಕೃತೆ ಸುನಿತಾ ಸೋಮಲಿಂಗ ಐಹೊಳೆ ಅವರಿಗೆ ಸಿರಿ ಸಂಸ್ಕೃತಿಗಾಗಿ ಸಲ್ಲಿಸಿದ ಅನುಪಮ ಸೇವೆ ಗುರುತಿಸಿ ಸುವರ್ಣ ಕರ್ನಾಟಕ ಸೈನಿಕ ಸೇವಾ ರಾಜ್ಯ ಪ್ರಶಸ್ತಿ ಫಲಕವನ್ನು ಪುರಸ್ಕೃತೆಯ ಸ್ವಗೃಹಕ್ಕೆ ತೆರಳಿ
ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸುರೇಶ ವಾಗ್ಮೋಡೆ, ಮುರಗೆಪ್ಪ ಪಾಟೀಲ ಇದ್ದರು.