ಸಣ್ಣಕೆರೆ : ಶಾಲೆ ಪ್ರಾರಂಭೋತ್ಸವ: ದಾಖಲಾತಿ ಆಂದೋಲನ

| Published : Jun 01 2025, 03:44 AM IST

ಸಣ್ಣಕೆರೆ : ಶಾಲೆ ಪ್ರಾರಂಭೋತ್ಸವ: ದಾಖಲಾತಿ ಆಂದೋಲನ
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪ, ಪಟ್ಟಣದ ಹೊರವಲಯದ ಸಣ್ಣಕೆರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಮತ್ತು ದಾಖಲಾತಿ ಆಂದೋಲನ ನಡೆಯಿತು. ಶಾಲೆಗೆ ಎಂ.ಆರ್.ಪಿ.ಎಲ್ ಮಂಗಳೂರು ಇವರು ಕೊಡುಗೆ ನೀಡಿದ ಗೇಟ್ ಮತ್ತು ಆಚ್‌ರ್ ಉದ್ಘಾಟಿಸಲಾಯಿತು.

ಶಾಲಾ ಮಕ್ಕಳನ್ನು ಅಲಂಕೃತ ಸೈಕಲ್‌ನಲ್ಲಿ ಕೂರಿಸಿ ಹೂ ಮಳೆಗೆರೆದು ಬರಮಾಡಿ ಕೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ, ಕೊಪ್ಪ

ಪಟ್ಟಣದ ಹೊರವಲಯದ ಸಣ್ಣಕೆರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಮತ್ತು ದಾಖಲಾತಿ ಆಂದೋಲನ ನಡೆಯಿತು. ಶಾಲೆಗೆ ಎಂ.ಆರ್.ಪಿ.ಎಲ್ ಮಂಗಳೂರು ಇವರು ಕೊಡುಗೆ ನೀಡಿದ ಗೇಟ್ ಮತ್ತು ಆಚ್‌ರ್ ಉದ್ಘಾಟಿಸಲಾಯಿತು. ಶಾಲಾ ಮಕ್ಕಳನ್ನು ಅಲಂಕೃತ ಸೈಕಲ್‌ನಲ್ಲಿ ಕೂರಿಸಿ ಮಕ್ಕಳ ಮೇಲೆ ಹೂ ಮಳೆಗೆರೆದು ಶಾಲಾ ಗೇಟ್ ಒಳಗೆ ಬರಮಾಡಿ ಕೊಳ್ಳಲಾಯಿತು. ಸರ್ಕಾರಿ ಉಚಿತ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಿಸಲಾಯಿತು. ಜೂನಿಯರ್ ಚೇಂಬರ್ ಇಂಟರ್‌ ನ್ಯಾಷನಲ್ ಕೊಪ್ಪ ಇವರು ಶಾಲಾ ಮಕ್ಕಳಿಗೆ ಸ್ಟೀಲ್ ವಾಟರ್ ಬಾಟಲ್‌, ಇಂಗ್ಲಿಷ್ ಕಲಿಕೆಗೆ ಪೂರಕ ಕಲಿಕಾ ಸಾಮಗ್ರಿಗಳನ್ನು ನೀಡಿದರು. ಶಾಲೆಯಿಂದ 5ನೇ ತರಗತಿ ಉತ್ತೀರ್ಣರಾಗಿ ಹೋಗುತ್ತಿರುವ ವಿದ್ಯಾರ್ಥಿಗಳು ಶಾಲೆಗೆ ಕುರ್ಚಿಗಳನ್ನು ಕೊಡುಗೆ ನೀಡಿದರು. ದಾನಿಗಳ ಸಹಕಾರದಿಂದ ಕೆಲವು ಕಲಿಕಾ ಸಾಮಗ್ರಿಗಳನ್ನು ನೀಡಲಾಯಿತು.

ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಬಿ. ವಿಜಯ್ ಅಧ್ಯಕ್ಷತೆ ವಹಿಸಿದ್ದರು. ಹರಂದೂರು ಪಂಚಾಯಿತಿ ಸದಸ್ಯರಾದ ಎಂ.ಸಿ ಅಶೋಕ್ ಮಾತನಾಡಿ ಶಾಲೆ ಹಲವಾರು ಭೌತಿಕ ಸೌಲಭ್ಯ ಅಭಿವೃದ್ಧಿಪಡಿಸಿಕೊಂಡು ಉತ್ತಮ ದಾಖಲಾತಿಯೊಂದಿಗೆ ಮುನ್ನಡೆಯುತ್ತಿದೆ ಎಂದರು.

ಸೀನಿಯರ್ ಚೇಂಬರ್ ಇಂಟರ್‌ ನ್ಯಾಷನಲ್ ಅಧ್ಯಕ್ಷ ದುರ್ಗೇಶ್ ಮಾತನಾಡಿ ಶಾಲೆ ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಸಾಗುತ್ತಿದೆ ಎಂದರು. ಜೂನಿಯರ್ ಚೇಂಬರ್ ಅಧ್ಯಕ್ಷೆ ಶೃತಿ ರೋಹಿತ್ ಮಾತನಾಡಿ ಶಾಲೆ ಮಕ್ಕಳ ಸಾಹಿತ್ಯದ ಸಾಧನೆ ಮತ್ತು ಸಹಪಠ್ಯ ಚಟುವಟಿಕೆ ಗಳ ಸಾಧನೆ ಬಹಳವಾಗಿದೆ ಎಂದು ಪ್ರಶಂಶಿಸಿದರು. ಶಾಲಾ ಮುಖ್ಯ ಶಿಕ್ಷಕಿ ಭಾರತಿ ಎ., ಸಹಶಿಕ್ಷಕಿ ಆಶಾಲತಾ ಬಿ, ಹರಂದೂರು ಗ್ರಾಪಂ ಸದಸ್ಯರಾದ ಶಕುಂತಲಾ ಮತ್ತು ರಿತೇಶ್ ಹಾಗೂ ಸ್ಥಳೀಯರಾದ ಈಶ್ವರ್, ಅನಿತಾ, ಶೋಭಾ, ವಿನಯ್, ಮೀನಾಕ್ಷಿ ಇನ್ನಿತರರು ಉಪಸ್ಥಿತರಿದ್ದರು.