ಸಾರಾಂಶ
ಭಾರತ ದೇಶದ ಪ್ರಜೆಗಳಾದ ನಾವು ಸಂವಿಧಾನದ ಅಡಿಯಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ. ದೇಶದ ಜನರೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬದುಕುತ್ತಿದ್ದಾರೆ. ಆದರೆ ಕೆಲವರು ತಮ್ಮ ಸ್ವಾರ್ಥ ಸಾಧನೆಗಾಗಿ ಜಾತಿ ಧರ್ಮದ ವಿಷಬೀಜ ಬಿತ್ತಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರಿನ ಸುಣ್ಣದಕೇರಿಯಲ್ಲಿ ಜರುಗಿದ ಶ್ರೀ ವಿನಾಯಕ ಪೂಜಾ ಮಹೋತ್ಸವದಲ್ಲಿ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಅವರು ಭಾಗವಹಿಸಿ ಮಾತನಾಡಿದರು.ಈ ವೇಳೆ ಅಬೀಬ್, ನವಾಜ್, ಹಬೀಬ್, ಸಾಹಿಲ್, ಶಾಶ್ವತ, ಕುಶಾಲ್, ವಿನಯ್, ವಿಕಾಸ್, ಜೀವನ್ ಮೊದಲಾದವರು ಇದ್ದರು.
ಭಾರತ ದೇಶದ ಪ್ರಜೆಗಳಾದ ನಾವು ಸಂವಿಧಾನದ ಅಡಿಯಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ. ದೇಶದ ಜನರೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬದುಕುತ್ತಿದ್ದಾರೆ. ಆದರೆ ಕೆಲವರು ತಮ್ಮ ಸ್ವಾರ್ಥ ಸಾಧನೆಗಾಗಿ ಜಾತಿ ಧರ್ಮದ ವಿಷಬೀಜ ಬಿತ್ತಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಾವೆಲ್ಲರೂ ಅಂತಹ ಯಾವುದೇ ಕೆಟ್ಟ ಸಂದೇಶಗಳಿಗೆ ಕಿವಿಗೊಡದೇ ಬದುಕಬೇಕಿದೆ ಎಂದರು.ಮೈಸೂರಿನ ಹಲವು ಭಾಗಗಳಲ್ಲಿ ಹಿಂದೂ ಮುಸ್ಲಿಂ ಬಾಂಧವರು ಒಂದೇ ಮೊಹಲ್ಲಾಗಳಲ್ಲಿ ಯಾವ ಭೇದ ಭಾವವಿಲ್ಲದೆ ಸಂತೋಷದಿಂದ ಅಣ್ಣಾ ತಮ್ಮಂದಿರ ರೀತಿ ಇದ್ದಾರೆ. ಅದಕ್ಕೆ ಸಾಕ್ಷಿಕರಿಸುವಂತೆ ಸುಣ್ಣದಕೇರಿಯ ಗಣಪತಿ ಉತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ಇಂತಹ ಕಾರ್ಯಕ್ರಮಗಳು ಎಲ್ಲೆಡೆ ಜರುಗಬೇಕು ಆ ಮೂಲಕ ಎಲ್ಲೆಡೆ ಶಾಂತಿ ಮನೆ ಮಾಡಬೇಕು ಎಂದು ಅವರು ತಿಳಿಸಿದರು.