ಸಾರಾಂಶ
ಯೇಸು ಕ್ರಿಸ್ತರ ತಾಯಿ ಮಾತೆ ಮರಿಯಮ್ಮನವರ ಜನ್ಮದಿನದ ಸ್ಮರಣೆಯ ಅಂಗವಾಗಿ ಸಂತ ಅಂತೋಣಿ ದೇವಾಲಯದಲ್ಲಿ ಅಮಲೋದ್ಭವ ಮಾತೆಯ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಯೇಸು ಕ್ರಿಸ್ತರ ತಾಯಿ ಮಾತೆ ಮರಿಯಮ್ಮನವರ ಜನ್ಮದಿನದ ಸ್ಮರಣೆಯ ಅಂಗವಾಗಿ ಸಂತ ಅಂತೋಣಿ ದೇವಾಲಯದಲ್ಲಿ ಅಮಲೋದ್ಭವ ಮಾತೆಯ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.ಈ ಸಂದರ್ಭ ಕ್ರೈಸ್ತ ಸಮುದಾಯದವರು ಭತ್ತದ ತೆನೆಯನ್ನು ಕೊಯ್ದು ದೇವಾಲಯಕ್ಕೆ ತರುವ ಮೂಲಕ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸುವುದು ವಾಡಿಕೆ.ಮಂಜಿಕೆರೆಯ ಗದ್ದೆಯೊಂದರಿಂದ ಸಂತ ಅಂತೋಣಿ ದೇವಾಲಯದ ಧರ್ಮಗುರು ವಿಜಯ ಕುಮಾರ್ ಅವರೊಂದಿಗೆ ಸಂತ ಕ್ಲಾರ ಕನ್ಯಾಸ್ತ್ರೀಯರ ಮಠದ ಕನ್ಯಾಸ್ತ್ರೀಯರು ಹಾಗೂ ಕ್ರೈಸ್ತ ಬಾಂಧವರು ಪ್ರಾರ್ಥನೆ ಸಲ್ಲಿಸಿ ಭತ್ತದ ಪೈರನ್ನು ಕೊಯ್ದು ಮೆರವಣಿಗೆಯ ಮೂಲಕ ತರಲಾಯಿತು.ಧರ್ಮಗರುಗಳಾದ ವಿಜಯ ಕುಮಾರ್ ಹಾಗೂ ಮಡಿಕೇರಿ ವಲಯ ಶ್ರೇಷ್ಠ ಗುರು ಹಾಗೂ ಮಡಿಕೇರಿ ಸಂತ ಮೈಕಲರ ದೇವಾಲಯದ ಧರ್ಮಗುರು ದೀಪಕ್, ದಿವ್ಯ ಬಲಿಪೂಜೆ ಹಾಗೂ ವಿಶೇಷ ಪ್ರಾರ್ಥನೆಯನ್ನು ನೇರವೇರಿಸಿದರು.ಅನಂತರ ಆಶೀರ್ವಚಿಸಿದ ಭತ್ತದ ತೆನೆಗಳನ್ನು ಕ್ರೈಸ್ತ ಬಾಂಧವರಿಗೆ ಧರ್ಮಗುರುಗಳು ವಿತರಿಸಿದರು. ಭಕ್ತರಿಗೆ ರಾತ್ರಿ ಭೋಜನವನ್ನು ನೀಡಲಾಯಿತು.