ಸಾರಾಂಶ
ವಿವಿಧ ದೇವಾಲಯಗಳಲ್ಲಿ ನಾಗಾರಪಂಚಮಿ ಹಬ್ಬವನ್ನು ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಆಚರಿಸಲಾಯಿತು. ಮಳೆ ಇಲ್ಲಿದಿದ್ದುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡರು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ನಾಗಾರಪಂಚಮಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಶುಕ್ರವಾರ ಆಚರಿಸಲಾಯಿತು. ಮಳೆ ಇಲ್ಲಿದಿದ್ದುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡರು.ಕೊಡಗರ ಹಳ್ಳಿಯಲ್ಲಿರುವ ಶ್ರೀ ಬೈತೂರಪ್ಪ, ಪೊವ್ವೆದಿ ಬಸವೇಶ್ವರ ದೇವಾಲಯದ ಆವರಣದಲ್ಲಿ ಇರುವ ನಾಗಸ್ಥಾನದಲ್ಲಿ ನೂರಾರು ಭಕ್ತರ ಉಪಸ್ಥಿತಿಯಲ್ಲಿ ವಿಶೇಷ ಪೂಜಾ ವಿಧಿವಿಧಾನಗಳನ್ನು ನೇರವೇರಿಸಲಾಯಿತು. ದೇವಸ್ಥಾನ ಮುಖ್ಯ ಆರ್ಚಕ ನರಸಿಂಹ ಭಟ್, ಸಹ ಅರ್ಚಕ ರಾಮ ಶರ್ಮ ಧಾರ್ಮಿಕ ವಿಧಿವಿಧಾನಗಳನ್ನು ನೇರವೇರಿಸಿದರು.ಈ ಸಂದರ್ಭ ದೇವಾಲಯ ಟ್ರಸ್ಟ್ ಅಧ್ಯಕ್ಷ ಕೆ.ಎನ್.ಪೂಣ್ಣಚ್ಚ, ಕಾರ್ಯದರ್ಶಿ ಬಿ.ಸಿ.ದಿನೇಶ್, ಖಜಾಂಜಿ ಡಾ.ತಮ್ಮಯ್ಯ, ಟ್ರಸ್ಟಿಗಳು, ದೇವಾಲಯ ಪಾರುಪಾತ್ಯದಾರ ಅಕ್ಕಪಂಡ ರಾಜೇಂದ್ರ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.ಸುಂಟಿಕೊಪ್ಪ ಪನ್ಯ ಗ್ರಾಮದ ಗ್ರಾಮ ದೇವತೆಯಾದ ಶ್ರೀ ಮಳೂರು ಬೆಳ್ಳಾರಿಕ್ಕಮ್ಮ ದೇವಾಲಯದಲ್ಲಿ ನಾಗರಪಂಚಮಿ ಪ್ರಯುಕ್ತವಾಗಿ ವಿಶೇಷ ಪೂಜೆ ನಡೆದವು.ಸುಂಟಿಕೊಪ್ಪ ಪಟ್ಟಣ ವ್ಯಾಪ್ತಿಯ ವಿವಿಧ ದೇವಾಲಯ ಹಾಗೂ ಹೋಬಳಿ ವ್ಯಾಪ್ತಿಯ ವಿವಿಧ ದೇವಾಲಯಗಳಲ್ಲಿ ನಾಗಾರಪಂಚಮಿ ಹಬ್ಬವನ್ನು ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಆಚರಿಸಲಾಯಿತು.
;Resize=(128,128))
;Resize=(128,128))