ಸಾರಾಂಶ
ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಸಂಘ ಉದ್ಘಾಟನೆ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಇತ್ತಿಚೆಗೆ ನಡೆಯಿತು. ಇದೇ ಸಂದರ್ಭ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ೧೬ ವರ್ಷಗಳ ಕರ್ತವ್ಯ ಸಲ್ಲಿಸಿ ವಯೋನಿವೃತ್ತರಾದ ಸಿ.ಟಿ.ಸೋಮಶೇಖರ್ ಅವರನ್ನು ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಸಂಘ ಉದ್ಘಾಟನೆ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಇತ್ತಿಚೆಗೆ ನಡೆಯಿತು.೨೦೨೫-೨೬ನೇ ಸಾಲಿನ ಶೈಕ್ಷಣಿಕ ಸಂಸತ್ ಮಂತ್ರಿ ಮಂಡಲದ ಶಾಲಾ ನಾಯಕನಾಗಿ ಅಜಿತ್, ಉಪನಾಯಕಿಯಾಗಿ ವೈಷ್ಣವಿ, ಆಹಾರ ಮಂತ್ರಿಯಾಗಿ ರಿದಾ ಮರಿಯಮ್, ಆಹಾರ ಉಪಮಂತ್ರಿಯಾಗಿ ನಿಶ್ಮಿತಾ, ರಂಜಿತಾ, ಆರೋಗ್ಯ ಮಂತ್ರಿಯಾಗಿ ಮೊಹಮ್ಮದ್ ಶಹಬಾಸ್, ಆರೋಗ್ಯ ಉಪಮಂತ್ರಿಯಾಗಿ ರೆಹನತ್, ಸ್ವಚ್ಛತಾ ಮಂತ್ರಿ ಹಾಗೂ ಶಾಲಾ ಭದ್ರತಾ ಸಮಿತಿ ಮಂತ್ರಿಯಾಗಿ ಲೇಖಿಕ್, ಉಪ ಮಂತ್ರಿಯಾಗಿ ಅರ್ಪಿತ ರಾಡ್ರಿಗಸ್, ಕ್ರೀಡಾಮಂತ್ರಿಯಾಗಿ ಶಶಿಕಾಂತ, ಉಪಮಂತ್ರಿಯಾಗಿ ಸೃಜನ್, ಸಾಂಸ್ಕೃತಿಕ ಮತ್ತು ವಾರ್ತಾ ಮಂತ್ರಿಯಾಗಿ ದೀಕ್ಷಾ, ವಾರ್ತಾ ಉಪಮಂತ್ರಿಯಾಗಿ ನೌಶಿನ ಆಯ್ಕೆಯಾಗಿದ್ದು, ಅವರಿಗೆ ಪ್ರಮಾಣ ವಚನ ಬೋಧಿಸಲಾಯಿತು.ಇದೇ ಸಂದರ್ಭ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ೧೬ ವರ್ಷಗಳ ಕರ್ತವ್ಯ ಸಲ್ಲಿಸಿ ವಯೋನಿವೃತ್ತರಾದ ಸಿ.ಟಿ.ಸೋಮಶೇಖರ್ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭ ಪ್ರೌಢಶಾಲೆಯ ಉಪ ಪ್ರಾಂಶುಪಾಲ ಬಾಲಕೃಷ್ಣ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿರಿಲ್ ರಾಡ್ರಿಗಸ್, ಸಹಶಿಕ್ಷಕರು ಹಾಗೂ ಸಿಬ್ಬಂದಿ ಇದ್ದರು.