ಸಾರಾಂಶ
ಚಾಲಕರ ಸಂಘಕ್ಕೆ ಹರಪಳ್ಳಿ ರವೀಂದ್ರ ಭೇಟಿ ನೀಡಿದ್ದ ಸಂದರ್ಭ ಸಂಘ ಅಧ್ಯಕ್ಷ ಬಿ.ವಿ.ಕಿಟ್ಟಣ್ಣ ರೈ ಹಾಗೂ ಪದಾಧಿಕಾರಿಗಳು ಅವರನ್ನು ಗೌರವಿಸಿದರು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸುಂಟಿಕೊಪ್ಪ ವಾಹನ ಚಾಲಕರ ಸಂಘದ ವತಿಯಿಂದ ಸಮಾಜ ಸೇವಕ ಹರಪಳ್ಳಿ ರವೀಂದ್ರ ಅವರನ್ನು ಸನ್ಮಾನಿಸಲಾಯಿತು.ಚಾಲಕರ ಸಂಘಕ್ಕೆ ಹರಪಳ್ಳಿ ರವೀಂದ್ರ ಭೇಟಿ ನೀಡಿದ್ದ ಸಂದರ್ಭ ಸಂಘ ಅಧ್ಯಕ್ಷ ಬಿ.ವಿ.ಕಿಟ್ಟಣ್ಣ ರೈ ಹಾಗೂ ಪದಾಧಿಕಾರಿಗಳು ಅವರನ್ನು ಗೌರವಿಸಿದರು.ಈ ಸಂದರ್ಭ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯರಾದ ಪ್ರಸಾದ್ ಕುಟ್ಟಪ್ಪ, ಆಲಿಕುಟ್ಟಿ, ಶಬ್ಬೀರ್, ವಾಹನ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಮುನೀರ್, ಪದಾಧಿಕಾರಿಗಳಾದ ಅಬ್ದುಲ್ಲಕುಟ್ಟಿ, ಕೃಷ್ಣಪ್ಪಬಿ.ಎ., ಪಟ್ಟೆಮನೆ ಎಸ್. ರಕ್ಷಿತ್ ರೀನು, ರಿಜ್ವಾನ್, ಕಾರ್ಯಕಾರಿ ಸಮಿತಿಯ ಸಿ.ಎ.ಬಸಪ್ಪ, ರಾಜ, ಇನಾಸ್ ಡಿಸೋಜ, ಕೆ.ರವಿ, ಸಂದೀಪ್ ಬಿ.ಎಸ್., ಬಿ.ಕೆ.ಸುರೇಶ್, ಆಸೀಸ್ ಹೊಸಕೋಟೆ, ಆಸ್ಕರ್, ಜೈನುದ್ದೀನ್, ಶಕ್ತಿವೇಲು, ರಫೀಕ್ ಮೊನು, ಮಣಿ ರಾಜ್ ತಂಬಿ, ದೇವಯ್ಯ ಎಂ.ಎ., ಕುಮಾರ ಜಿ., ಶಾಜಿ ಎಂ.ಎಸ್., ಸಲೀಂ ಗದ್ದೆಹಳ್ಳ, ರಾಜ ಆರ್., ಇಸ್ಮಾಯಿಲ್ ಕಾಕು ಮತ್ತಿತರರು ಇದ್ದರು.