ಸುಂಟಿಕೊಪ್ಪ: ಸಂತ ಅಂತೋಣಿ ಚರ್ಚ್‌ನಲ್ಲಿ ವಿಶೇಷ ಬಲಿಪೂಜೆ

| Published : Apr 18 2025, 12:41 AM IST

ಸಾರಾಂಶ

ಪ್ರಭು ಕ್ರಿಸ್ತರು ತಾವು ಮರಣಹೊಂದುವ ಮುನ್ನದಿನ ತಮ್ಮ ಶಿಷ್ಯರೊಂದಿಗೆ ಕಡೆಯ ಭೋಜನಕ್ಕೂ ಮುನ್ನ ಶಿಷ್ಯರ ಪಾದಗಳನ್ನು ತೊಳೆದು ಕಡೆಯ ಭೋಜನ ಸವಿದ ಸ್ಮರಣೆಯ ಅಂಗವಾಗಿ ದೇವಾಲಯದ ಧರ್ಮಗುರು ವಿಜಯ ಕುಮಾರ್, ದೇವಾಲಯದ ಹಿರಿಯರು ಕ್ರೈಸ್ತ ಭಾಂದವರ ಪಾದಗಳನ್ನು ತೊಳೆಯುವ ಮೂಲಕ ಪ್ರಭು ಕ್ರಿಸ್ತರು ನಡೆಸಿದ ಮಹತ್ಕಾರ್ಯವನ್ನು ನೆನಪಿಸಿದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದಲ್ಲಿ ಪವಿತ್ರ ಗುರುವಾರದ ಸಂಜೆ ಕಡೆಯ ಭೋಜನ, ವಿಶೇಷ ಬಲಿಪೂಜೆ, ಸಂತ ಮೇರಿ ಶಾಲಾ ಆವರಣದಲ್ಲಿ ಪ್ರಾರ್ಥನಾ ಕೂಟವನ್ನು ದೇವಾಲಯದ ಧರ್ಮಗುರು ವಿಜಯಕುಮಾರ್ ನೇರವೇರಿಸಿದರು. ನೂರಾರು ಸಂಖ್ಯೆಯಲ್ಲಿ ಕ್ರೈಸ್ತ ಭಾಂದವರು ಪ್ರಾರ್ಥನಾಕೂಟದಲ್ಲಿ ಪಾಲ್ಗೊಂಡಿದ್ದರು.

ಪ್ರಭು ಕ್ರಿಸ್ತರು ತಾವು ಮರಣಹೊಂದುವ ಮುನ್ನದಿನ ತಮ್ಮ ಶಿಷ್ಯರೊಂದಿಗೆ ಕಡೆಯ ಭೋಜನಕ್ಕೂ ಮುನ್ನ ಶಿಷ್ಯರ ಪಾದಗಳನ್ನು ತೊಳೆದು ಕಡೆಯ ಭೋಜನ ಸವಿದ ಸ್ಮರಣೆಯ ಅಂಗವಾಗಿ ದೇವಾಲಯದ ಧರ್ಮಗುರು ವಿಜಯ ಕುಮಾರ್, ದೇವಾಲಯದ ಹಿರಿಯರು ಕ್ರೈಸ್ತ ಭಾಂದವರ ಪಾದಗಳನ್ನು ತೊಳೆಯುವ ಮೂಲಕ ಪ್ರಭು ಕ್ರಿಸ್ತರು ನಡೆಸಿದ ಮಹತ್ಕಾರ್ಯವನ್ನು ನೆನಪಿಸಿದರು. ನಂತರ ಕನ್ಯಾಸ್ತ್ರೀಯರು, ಕ್ರೈಸ್ತ ಭಾಂದವರು ಮಧ್ಯರಾತ್ರಿ ವರೆಗೆ ವಿಶೇಷ ಪ್ರಾರ್ಥನೆ, ಧ್ಯಾನಗಳಲ್ಲಿ ತೊಡಗಿಸಿಕೊಂಡಿದ್ದರು.